
ಲಖನೌ(ಏ.07): ಗೆಲ್ಲಲೇಬೇಕೆಂಬ ಛಲದಲ್ಲಿ ಕಣಕ್ಕಿಳಿದ ಸನ್‌ರೈಸರ್ಸ್ ಹೈದರಾಬಾದ್‌ಗೆ ಆರಂಭಿಕ ಹಿನ್ನಡೆಯಾಗಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 121 ರನ್ ಸಿಡಿಸಿದೆ. ರಾಹುಲ್ ತ್ರಿಪಾಠಿ ಹಾಗೂ ಅನ್ಮೋಲ್‌ಪ್ರೀತ್ ಸಿಂಗ್ ಹೊರತು ಪಡಿಸಿದರೆ, ಇತರರಿಂದ ನಿರೀಕ್ಷಿತ ಹೋರಾಟವೂ ಬರಲಿಲ್ಲ. ಹೀಗಾಗಿ ಲಖನೌ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಕ್ರೀಸ್‌ಗಿಳಿದು ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ತಂಡಕ್ಕೆ ಆಘಾತ ಮೇಲೆ ಆಘಾತ ಎದುರಾಯಿತು. ಮಯಾಂಕ್ ಅಗರ್ವಾಲ್ ಕೇವಲ 8 ರನ್ ಸಿಡಿಸಿ ಔಟಾದರು. ಅನ್ಮೋಲ್‌ಪ್ರೀತ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾದಿಂದ ಸನ್‌ರೈಸರ್ಸ್ ತಂಡ ಚೇತರಿಸಿಕೊಂಡಿತು. ಅನ್ಮೋಲ್‌ಪ್ರೀತ್ ಸಿಂಗ್ 26 ಎಸೆತದಲ್ಲಿ 31 ರನ್ ಕಾಣಿಕೆ ನೀಡಿದರು.
IPL ಪಾದಾರ್ಪಣೆ ಪಂದ್ಯದಲ್ಲೇ RCB ಬ್ಯಾಟರ್‌ಗಳನ್ನು ಕಾಡಿದ ಮಾಂತ್ರಿಕ ಸ್ಪಿನ್ನರ್ ಸುಯಾಶ್ ಶರ್ಮಾ ಯಾರು..?
ಇತ್ತ ನಾಯಕ ಆ್ಯಡಿನ್ ಮಕ್ರಮ್ ಡಕೌಟ್ ಆದರು. ಹ್ಯಾರಿ ಬ್ರೂಕ್ ಕೇವಲ 3 ರನ್ ಸಿಡಿಸಿ ನಿರ್ಗಮಿಸಿದರು. ರಾಹುಲ್ ತ್ರಿಪಾಠಿ ಎಚ್ಚರಿಕೆಯಿಂದ ಬ್ಯಾಟ್ ಬೀಸಲು ಆರಂಭಿಸಿದರು. ಆದರೆ 41 ಎಸೆತದ ಎದುರಿಸಿದ ತ್ರಿಪಾಠಿ 35 ರನ್ ಸಡಿಸಿ ಔಟಾದರು. ಸನ್‌ರೈಸರ್ಸ್ ಹೈದರಾಬಾದ್ 94 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ವಾಶಿಂಗ್ಟನ್ ಸುಂದರ್ ಹಾಗೂ ಅಬ್ದುಲ್ ಸಮಾದ್ ಹೋರಾಟ ಚೇತರಿಸಿಕೆ ನೀಡಿದರೂ ಹೆಚ್ಚು ಹೊತ್ತು ಇರಲಿಲ್ಲ. ವಾಶಿಂಗ್ಟನ್ ಸುಂದರ್ 28 ಎಸೆತದ ಎದುರಿಸಿ 16 ರನ್ ಸಿಡಿಸಿ ನಿರ್ಗಮಿಸಿದರು. ಅಬ್ದುಲ್ ಸಮಾದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು. ಆದರೆ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ಪತನ ಮಾತ್ರ ನಿಲ್ಲಲಿಲ್ಲ. ಆದಿಲ್ ರಶೀದ್ 4 ರನ್ ಸಿಡಿಸಿ ಔಟಾದರು. ಉಮ್ರಾನ್ ಮಲಿಕ್ ಡಕೌಟ್ ಆದರು. ಇತ್ತ ಅಬ್ದುಲ್ ಸಮಾದ್ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ 8 ವಿಕೆಟ್ ನಷ್ಟಕ್ಕೆ 121 ರನ್ ಸಿಡಿಸಿತು.
ಸನ್‌ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11
ಮಯಾಂಕ್ ಅಗರ್ವಾರ್, ಅನ್ಮೋಲ್‍ಪ್ರೀತ್, ರಾಹುಲ್ ತ್ರಿಪಾಠಿ, ಆ್ಯಡಿನ್ ಮಕ್ರಮ್(ನಾಯಕ), ಹ್ಯಾರಿ ಬ್ರೂಕ್, ವಾಶಿಂಗ್ಟನ್ ಸುಂದರ್, ಅಬ್ದುಲ್ ಸಮಾದ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಅದಿಲ್ ರಶೀದ್
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡ, ಮಾರ್ಕಸ್ ಸ್ಟೊಯ್ನಿಸ್, ನಿಕೋಲಸ್ ಪೂರನ್, ರೊಮಾರಿಯೋ ಶೆಪರ್ಢ್, ಕ್ರುನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನದ್ಕಟ್, ರವಿ ಬಿಶ್ನೋಯ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.