IPL 2023 ಸಿಎಸ್‌ಕೆ ಸಿಡಿಲಬ್ಬರದ ಬ್ಯಾಟಿಂಗ್‌ಗೆ ದಾಖಲೆ ನಿರ್ಮಾಣ, ಕೆಕೆಆರ್‌ಗೆ 236 ರನ್ ಟಾರ್ಗೆಟ್!

By Suvarna NewsFirst Published Apr 23, 2023, 9:30 PM IST
Highlights

ಅಜಿಂಕ್ಯ ರಹಾನೆ ಸೇರಿದಂತೆ ಕ್ರೀಸ್‌ಗಿಳಿದ ಪ್ರತಿಯೊಬ್ಬರು ಅಬ್ಬರಿಸಿದ್ದಾರೆ. ಇದರ ಪರಿಣಾಮ ಕೆಕೆಆರ್ ವಿರುದ್ದ ಸಿಎಸ್‌ಕೆ 235 ರನ್ ಬೃಹತ್ ಮೊತ್ತ ಸಿಡಿಸಿದೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
 

ಕೋಲ್ಕತಾ(ಏ.23):  ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹೊಸ ಅಜಿಂಕ್ಯ ರಹಾನೆ ಅಭಿಮಾನಿಗಳಿಗೆ ಪರಿಚಯವಾಗಿದ್ದಾರೆ. ಟೆಸ್ಟ್ ಬ್ಯಾಟ್ಸ್‌ಮನ್ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದ್ದ ಅಜಿಂಕ್ಯ ರಹಾನೆ ಇದೀಗ ಸ್ಟ್ರೈಕ್ ರೇಟ್ 200ಕ್ಕೂ ಹೆಚ್ಚು. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಅಜಿಂಕ್ಯ ರಹಾನೆ 29 ಎಸೆತದಲ್ಲಿ ಅಜೇಯ 71 ರನ್ ಸಿಡಿಸಿದ್ದಾರೆ. ಬರೋಬ್ಬರಿ 245ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ರುತುರಾಜ್, ಡೆವೋನ್ ಕಾನ್ವೇ, ಶಿವಂ ದುಬೆ ಅತ್ಯುತ್ತಮ ಹೋರಾಟದಿಂದ ಸಿಎಸ್‌ಕೆ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ

ಇದು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ದಾಖಲಿಸಿದ 3ನೇ ಅತೀದೊಡ್ಡ ಮೊತ್ತವಾಗಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ 5 ವಿಕೆಟ್ ಕಳೆದುಕೊಂಡು 246 ರನ್ ಸಿಡಿಸಿತ್ತು. ಇದೀಗ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ.

IPL 2023 ಆರ್‌ಸಿಬಿ ಪಂದ್ಯದ ನಡುವೆ ಮೋದಿ ಸುನಾಮಿ, ಗಮನಸೆಳೆದ ಬೊಮ್ಮಾಯಿ ಟಿಶರ್ಟ್!

ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗರಿಷ್ಠ ಮೊತ್ತ
246/5 vs ರಾಜಸ್ಥಾನ (2010)
240/5 vs ಪಂಜಾಬ್ (2008)
235/4 vs ಕೋಲ್ಕತಾ (2023)
226/6 vs ಬೆಂಗಳೂರು (2023)

ಅತ್ಯುತ್ತಮ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನಲ್ಲೂ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ
199.04: ಅಜಿಂಕ್ಯ ರಹಾನೆ 
198.03: ಶಾರ್ದೂಲ್ ಠಾಕೂರ್ 
188.80: ಗ್ಲೆನ್ ಮ್ಯಾಕ್ಸ್‌ವೆಲ್ 
185.86: ನಿಕೋಲಸ್ ಪೂರನ್ 
168.49: ಸೂರ್ಯಕುಮಾರ್ ಯಾದವ್

IPL 2023 ಆಟಕ್ಕುಂಟು ರನ್ನಿಲ್ಲ, ದಿನೇಶ್ ಕಾರ್ತಿಕ್ ಸೇರಿ ಆರ್‌ಸಿಬಿ ಮಧ್ಯಮ ಕ್ರಮಾಂಕ ಫುಲ್ ಟ್ರೋಲ್!

ಚೆನ್ನೈ ಸೂಪರ್ ಕಿಂಗ್ಸ್ ರುತುರಾಜ್ ಗಾಯಕ್ವಾಡ್ 20 ಎಸೆತದಲ್ಲಿ 35 ರನ್ ಸಿಡಿಸಿದರು. ಇತ್ತ ಡೇವೋನ್ ಕಾನ್ವೇ 40 ಎಸೆತದಲ್ಲಿ 56 ರನ್ ಚಚ್ಚಿದರು.ಶಿವಂ ದುಬೆ 21 ಎಸೆತದಲ್ಲಿ 50 ರನ್ ಕಾಣಿಕೆ ನೀಡಿದರು.ರವೀಂದ್ರ ಜಡೇಜಾ 8 ಎಸೆತದಲ್ಲಿ 18 ರನ್ ಸಿಡಿಸಿದರೆ, ನಾಯಕ ಎಂಎಸ್ ಧೋನಿ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿತು. ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್  18 ಸಿಕ್ಸರ್ ಸಿಡಿಸಿದೆ. ಈ ಮೂಲಕ ಐಪಿಎಲ್ ಟೂರ್ನಿಯ ಇನ್ನಿಂಗ್ಸ್ ಒಂದರಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ 6ನೇ ತಂಡ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

click me!