KKR vs CSK: ಸತತ 4ನೇ ಸೋಲಿನಿಂದ ಪಾರಾಗುತ್ತಾ ಕೆಕೆಆರ್‌?

Published : Apr 23, 2023, 12:20 PM IST
KKR vs CSK:  ಸತತ 4ನೇ ಸೋಲಿನಿಂದ ಪಾರಾಗುತ್ತಾ ಕೆಕೆಆರ್‌?

ಸಾರಾಂಶ

ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿಂದು ಹೈವೋಲ್ಟೇಜ್ ಕದನ ಇಂದು ತವರಿನಲ್ಲಿ ಚೆನ್ನೈ ವಿರುದ್ಧ ಸೆಣಸು ಹ್ಯಾಟ್ರಿಕ್ ಸೋಲಿನಿಂದ ಕಂಗಾಲಾಗಿರುವ ಕೆಕೆಆರ್‌

ಕೋಲ್ಕತಾ(ಏ.23): ಎರಡು ಗೆಲುವುಗಳೊಂದಿಗೆ ಈ ಋುತುವನ್ನು ಆರಂಭಿಸಿದ್ದ ಕೋಲ್ಕತಾ ನೈಟ್‌ರೈಡ​ರ್ಸ್‌ ಆ ಬಳಿಕ ಸೋಲಿನ ಹಾದಿ ಹಿಡಿದು, ಸತತ 3 ಪಂದ್ಯಗಳಲ್ಲಿ ಪರಾಭವಗೊಂಡಿದೆ. ಭಾರೀ ಒತ್ತಡಕ್ಕೆ ಸಿಲುಕಿರುವ ನಿತೀಶ್ ರಾಣಾ ನೇತೃತ್ವದ ಕೆಕೆಆರ್‌ಗೆ ಭಾನುವಾರ ಬಲಿಷ್ಠ ಚೆನ್ನೈ ಸೂಪರ್‌ ಕಿಂಗ್ಸ್‌ ಸವಾಲು ಎದುರಾಗಲಿದೆ.

ಕೋಲ್ಕತಾ ನೈಟ್‌ ರೈಡರ್ಸ್‌ ಈ ಆವೃತ್ತಿಯಲ್ಲಿ 6 ಪಂದ್ಯಗಳನ್ನಾಡಿದ್ದು ಇನ್ನೂ ಸೂಕ್ತ ಆಡುವ ಹನ್ನೊಂದರ ಬಳಗವನ್ನು ಹುಡುಕಿಕೊಳ್ಳಲು ಸಾಧ್ಯವಾಗಿಲ್ಲ. 6 ಪಂದ್ಯಗಳಲ್ಲಿ 4 ವಿವಿಧ ಆರಂಭಿಕ ಜೋಡಿಗಳೊಂದಿಗೆ ಆಡಿರುವ ಕೆಕೆಆರ್‌ನ ಮಧ್ಯಮ ಕ್ರಮಾಂಕವೂ ದುರ್ಬಲವಾಗಿದೆ. ತಂಡಕ್ಕಿರುವ ಮತ್ತೊಂದು ದೊಡ್ಡ ಸಮಸ್ಯೆ ವೇಗದ ಬೌಲಿಂಗ್‌ನದ್ದು. 6 ಪಂದ್ಯಗಳಲ್ಲಿ ಕೆಕೆಆರ್‌ ವೇಗಿಗಳು ಒಟ್ಟಾರೆ ಕೇವಲ 9 ವಿಕೆಟ್‌ ಪಡೆದಿದ್ದು, 11.3ರ ರನ್‌ರೇಟ್‌ನಲ್ಲಿ ರನ್‌ ಬಿಟ್ಟುಕೊಟ್ಟಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್‌ ತಂಡವು ಬ್ಯಾಟಿಂಗ್‌ನಲ್ಲಿ ಹೆಚ್ಚಾಗಿ ವೆಂಕಟೇಶ್ ಅಯ್ಯರ್, ನಾಯಕ ನಿತೀಶ್ ರಾಣಾ ಹಾಗೂ ರಿಂಕು ಸಿಂಗ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ವಿದೇಶಿ ಆಟಗಾರರಾದ ಜೇಸನ್ ರಾಯ್ ಹಾಗೂ ಆಂಡ್ರೆ ರಸೆಲ್‌ ಜವಾಬ್ದಾರಿಯುತ ಆಟ ಪ್ರದರ್ಶಿಸಬೇಕಿದೆ. ಇನ್ನು ಸ್ಪಿನ್ನರ್‌ಗಳಾದ ಸುನಿಲ್‌ ನರೈನ್‌, ವರುಣ್‌ ಚಕ್ರವರ್ತಿ ಜತೆಗೆ ಅನುಕೂಲ್ ರಾಯ್ ಕೂಡಾ ಮಿಂಚುತ್ತಿದ್ದು, ಬಲಿಷ್ಠ ಚೆನ್ನೈ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

IPL 2023 ವಾಂಖೇಡೆಯಲ್ಲಿ ಸಚಿನ್‌ ತೆಂಡುಲ್ಕರ್ ಭರ್ಜರಿ ಹುಟ್ಟುಹಬ್ಬ ಆಚರಣೆ!

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್‌ ತನ್ನ ಸಮಸ್ಯೆಗಳನ್ನು ಮೀರಿ ಪ್ರದರ್ಶನ ನೀಡುತ್ತಿದ್ದು, ಸಂಘಟಿತ ಆಟದೊಂದಿಗೆ ಪಂದ್ಯಗಳನ್ನು ಗೆಲ್ಲುತ್ತಿದೆ. ಡೆವೊನ್‌ ಕಾನ್‌ವೇ ಸತತ 3 ಅರ್ಧಶತಕ ಸಿಡಿಸಿದ್ದು, ತಂಡದ ಬ್ಯಾಟಿಂಗ್‌ ಆಧಾರಸ್ತಂಭ ಎನಿಸಿದ್ದಾರೆ. ಡೆವೊನ್ ಕಾನ್‌ವೇ ಜತೆಗೆ ಋತುರಾಜ್ ಗಾಯಕ್ವಾಡ್, ಮೋಯಿನ್ ಅಲಿ, ಶಿವಂ ದುಬೆ, ಅಜಿಂಕ್ಯ ರಹಾನೆ ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದು, ಜಡೇಜಾ ಹಾಗೂ ಧೋನಿ ಅಚ್ಚುಕಟ್ಟಾಗಿ ಮ್ಯಾಚ್ ಫಿನಿಶ್ ಮಾಡುತ್ತಿದ್ದಾರೆ. ಇನ್ನು ಲಂಕಾದ ಯುವ ವೇಗಿ ಪತಿರಣ ಹಾಗೂ ಸ್ಪಿನ್ನರ್ ಮಹೀಶ್ ತೀಕ್ಷಣ ಎದುರು ರನ್‌ಗಳಿಸಲು ಕೆಕೆಆರ್ ಬ್ಯಾಟರ್‌ಗಳು ಎಚ್ಚರಿಕೆಯ ಆಟವಾಡಬೇಕಿದೆ.

ಒಟ್ಟು ಮುಖಾಮುಖಿ: 26

ಚೆನ್ನೈ: 17

ಕೆಕೆಆರ್‌: 09

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ ಸೂಪರ್ ಕಿಂಗ್ಸ್‌: ಡೆವೊನ್ ಕಾನ್‌ವೇ, ಋುತುರಾಜ್‌ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂ ಎಸ್ ಧೋನಿ(ನಾಯಕ), ಪತಿರನ, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ, ಆಕಾಶ್‌.

ಕೋಲ್ಕತಾ ನೈಟ್ ರೈಡರ್ಸ್‌: ಜೇಸನ್ ರಾಯ್‌, ಲಿಟನ್‌ ದಾಸ್, ವೆಂಕಟೇಶ್ ಅಯ್ಯರ್‌, ನಿತೀಶ್ ರಾಣಾ(ನಾಯಕ), ಮಂದೀಪ್‌ ಸಿಂಗ್, ಆಂಡ್ರೆ ರಸೆಲ್‌, ರಿಂಕು ಸಿಂಗ್, ಸುನಿಲ್‌ ನರೇನ್‌, ಶಾರ್ದೂಲ್‌ ಠಾಕೂರ್, ಉಮೇಶ್‌ ಯಾದವ್, ವರುಣ್‌ ಚಕ್ರವರ್ತಿ.

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್:

ಈ ವರ್ಷ ಈಡನ್‌ ಗಾರ್ಡನ್ಸ್‌ನಲ್ಲಿ 4 ಇನ್ನಿಂಗ್ಸ್‌ಗಳಲ್ಲಿ 3 ಬಾರಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ. ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಸ್ಪಿನ್ನರ್‌ಗಳಿಗೆ ತಕ್ಕಮಟ್ಟಗಿನ ನೆರವು ಸಿಗಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌