IPL 2023: ಟಾಸ್‌ ಗೆದ್ದ ಲಖನೌ ಸೂಪರ್‌ ಜೈಂಟ್ಸ್‌, ಬೌಲಿಂಗ್‌ ಆಯ್ಕೆ!

Published : Apr 03, 2023, 07:04 PM ISTUpdated : Apr 03, 2023, 07:22 PM IST
IPL 2023: ಟಾಸ್‌ ಗೆದ್ದ ಲಖನೌ ಸೂಪರ್‌ ಜೈಂಟ್ಸ್‌, ಬೌಲಿಂಗ್‌ ಆಯ್ಕೆ!

ಸಾರಾಂಶ

ಬರೋಬ್ಬರಿ 1427 ದಿನಗಳ ಬಳಿಕ ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಐಪಿಎಲ್‌ ಪಂದ್ಯಕ್ಕೆ ಆತಿಥ್ಯ ವಹಿಸಿಕೊಂಡಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಖನೌ ಟಾಸ್‌ ಗೆದ್ದಿದ್ದು, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಚೆನ್ನೈ(ಏ.03): ಸೋಲಿನೊಂದಿಗೆ ಈ ಬಾರಿಯ ಐಪಿಎಲ್‌ ಅಭಿಯಾನ ಆರಂಭಿಸಿರುವ ನಾಲ್ಕು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ತನ್ನ ಭದ್ರಕೋಟೆ ಚೆಪಾಕ್‌ ಕ್ರೀಡಾಂಗಣದಲ್ಲಿ 1427 ದಿನಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಕಣಕ್ಕಿಳಿಯುತ್ತಿದೆ. 2008ರಿಂದ ಚೆನ್ನೈನಲ್ಲಿ ಆಡಿದ ಪಂದ್ಯದಲ್ಲಿ ಟಾಸ್‌ ಗೆದ್ದ ತಂಡ 7 ಬಾರಿ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದರೆ, 12 ಬಾರಿ ತಂಡ ಫೀಲ್ಡಿಂಗ್‌ ಆಯ್ದುಕೊಂಡಿದೆ. ಇನ್ನು ಚೆಪಾಕ್‌ ಪಂದ್ಯದಲ್ಲಿ 54 ಬಾರಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಮುನ್ನಡೆಸಿರುವ ಎಂಎಸ್‌ ಧೋನಿ 40 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ಸಾಧನೆ ಹೊಂದಿದ್ದಾರೆ. ಇದು 2019ರ ಬಳಿಕ ಎಂಎಸ್‌ ಧೋನಿಗೆ ಚೆನ್ನೈನಲ್ಲಿ ಮೊದಲ ಪಂದ್ಯವಾಗಿದೆ. ಇನ್ನೊಂದೆಡೆ ಲಖನೌ ತಂಡದ ಕೃನಾಲ್‌ ಪಾಂಡ್ಯ ಈ ಪಂದ್ಯದ ಮೂಲಕ 100ನೇ ಐಪಿಎಲ್‌ ಪಂದ್ಯದ ಸಾಧನೆ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್ XI): ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್ (ವಿ.ಕೀ), ಆಯುಷ್ ಬಡೋನಿ, ಮಾರ್ಕ್ ವುಡ್, ರವಿ ಬಿಷ್ಣೋಯ್, ಯಶ್ ಠಾಕೂರ್, ಅವೇಶ್ ಖಾನ್

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಡೆವೊನ್ ಕಾನ್ವೆ, ರುತುರಾಜ್ ಗಾಯಕ್‌ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ವಿ.ಕೀ), ಶಿವಂ ದುಬೆ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಆರ್‌ಎಸ್ ಹಂಗರ್ಗೇಕರ್

ಚೆಪಾಕ್‌ ಮೈದಾನಕ್ಕೆ ಮರಳಿದ್ದರಿಂದ ಬಹಳ ಸಂತಸವಾಗಿದೆ. 2008ರಲ್ಲಿ ಐಪಿಎಲ್‌ ಆರಂಭವಾಗಿದೆ. ಆದರೆ, ಈ ಮೈದಾನದಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡುವ ಅವಕಾಶ ನಮಗೆ ಸಿಕ್ಕಿಲ್ಲ. ಹೆಚ್ಚೆಂದರೆ 5-6 ಋತುಗಳಲ್ಲಿ ಮಾತ್ರವೇ ಈ ಮೈದಾನದಲ್ಲಿ ಆಡಿದ್ದೆವು. ಇದೇ ಮೊದಲ ಬಾರಿಗೆ ಪೂರ್ಣ ಸ್ಟೇಡಿಯಂ ಕಾರ್ಯನಿರ್ವಹಿಸುತ್ತಿದೆ. ಇದಕ್ಕೂ ಮುನ್ನ ಇಲ್ಲಿನ ಕೆಲವೊಂದು ಸ್ಟೇಡಿಯಂಗಳು ಕೆಲ ಕಾರಣಗಳಿಗಾಗಿ ಖಾಲಿ ಇರುತ್ತಿದ್ದವು. ಈ ಬಾರಿ ಎಲ್ಲಾ  ಪಂದ್ಯಗಳನ್ನು ಚೆಪಾಕ್‌ನಲ್ಲಿ ಆಡುತ್ತಿದ್ದೇವೆ ಅನ್ನೋದೆ ನನಗೆ ಖುಷಿ. ಈ ಪಂದ್ಯಕ್ಕೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನಮ್ಮ ಪರಿಸ್ಥಿತಿಯನ್ನು ನಿರ್ಣಯಿಸುತ್ತಲೇ ಇರಬೇಕು ಮತ್ತು ನಮ್ಮ ಗುರಿಗಳನ್ನು ಮರುಪರಿಶೀಲಿಸುತ್ತಿರಬೇಕು, ವಾಸ್ತವಿಕ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ಟಾಸ್‌ ವೇಳೆ ಹೇಳಿದರು.

ಮುಂಬೈ 5, ಚೆನ್ನೈ 4 ಟ್ರೋಫಿ ಗೆದ್ದಿರಬಹುದು, ಆದ್ರೆ..? ಟೀಕಾಕಾರರಿಗೆ ವಾರ್ನಿಂಗ್ ಕೊಟ್ಟ ವಿರಾಟ್ ಕೊಹ್ಲಿ..!

ನಾವು ಮೊದಲು ಬೌಲಿಂಗ್ ಮಾಡಲು ನಿರ್ಧಾರ ಮಾಡಿದ್ದೇವೆ. ಟಾರ್ಗೆಟ್‌ ಏನೆಂದು ಗೊತ್ತಿದ್ದುಕೊಂಡು ಬ್ಯಾಟಿಂಗ್‌ ಮಾಡಬೇಕು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಮ್ಮ ನಿರ್ವಹಣೆ ಉತ್ತಮವಾಗಿತ್ತು. ಪಂದ್ಯದ ಎಲ್ಲಾ ವಿಭಾಗದಲ್ಲೂ ಉತ್ತಮವಾಗಿ ಆಡಿದೆವು. ಮತ್ತೊಮ್ಮೆ ಅಂಥದ್ದೇ ನಿರ್ವಹಣೆಯ ಮೂಲಕ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಜೈದೇವ್‌ ಉನಾದ್ಕತ್‌ ಈ ಪಂದ್ಯದಲ್ಲಿಲ್ಲ. ಅವರ ಬದಲು ಯಶ್‌ ಠಾಕೂರ್‌ ಅವರನ್ನು ಆಯ್ಕೆ ಮಾಡಿದ್ದಾಗಿ ಲಖನೌ ತಂಡದ ನಾಯಕ ಕೆಎಲ್‌ ರಾಹುಲ್‌ ಹೇಳಿದ್ದಾರೆ.

IPL ಟೂರ್ನಿಯಲ್ಲಿ ಭಾರತದ ಯಾವೊಬ್ಬ ಬ್ಯಾಟರ್‌ ಮಾಡಲಾಗದ ಸಾಧನೆ ಬರೆದ RCB ಹುಲಿ ವಿರಾಟ್ ಕೊಹ್ಲಿ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ