IPL 2023 ಆಟಕ್ಕುಂಟು ರನ್ನಿಲ್ಲ, ದಿನೇಶ್ ಕಾರ್ತಿಕ್ ಸೇರಿ ಆರ್‌ಸಿಬಿ ಮಧ್ಯಮ ಕ್ರಮಾಂಕ ಫುಲ್ ಟ್ರೋಲ್!

By Suvarna NewsFirst Published Apr 23, 2023, 8:16 PM IST
Highlights

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದ ಬಳಿಕ ಆರ್‌ಸಿಬಿ ಅಭಿಮಾನಿಗಳ ಸಹನೆಯ ಕಟ್ಟೆ ಒಡೆದಿದೆ. ಕಳೆದ 7 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಸೇರಿ ಆರ್‌ಸಿಬಿ ಮಧ್ಯಮ ಕ್ರಮಾಂಕ ಕಳಪೆ ಪ್ರದರ್ಶನ ನೀಡಿದೆ. ಇದೀಗ ದಿನೇಶ್ ಕಾರ್ತಿಕ್ ಸೇರಿ ಆರ್‌ಸಿಬಿ ಮಧ್ಯಮ ಕ್ರಮಾಂಕ ಫುಲ್ ಟ್ರೋಲ್ ಆಗಿದೆ.

ಬೆಂಗಳೂರು(ಏ.23): ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಮತ್ತೊಂದು ಗೆಲುವಿನ ನಗೆ ಬೀರಿದೆ. ಆದರೆ ಕೊನೆಯ ಕ್ಷಣದಲ್ಲಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿ ಗೆಲುವಿನ ದಡ ಸೇರಿದೆ. ಒಂದೆಡೆ ಗೆಲುವಿನ ಸಂಭ್ರಮ, ಮತ್ತೊಂದೆಡೆ ಆರ್‌ಸಿಬಿ ಮಧ್ಯಮ ಕ್ರಮಾಂಕದ ಕಳಪೆ ಬ್ಯಾಟಿಂಗ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹಮ್ಮದ್, ಸುಯಾಶ್ ಪ್ರಭುದೇಸಾಯಿ ಪ್ರತಿ ಪಂದ್ಯದಲ್ಲಿನ ಕಳಪೆ ಪ್ರದರ್ಶನದಿಂದ ಫುಲ್ ಟ್ರೋಲ್ ಆಗಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿ 7 ರನ್ ರೋಚಕ ಗೆಲುವು ದಾಖಲಿಸಿದ್ದರೂ, ಟ್ರೋಲ್ ಮಾತ್ರ ನಿಂತಿಲ್ಲ.

ದಿನೇಶ್ ಕಾರ್ತಿಕ್ ಮತ್ತೆ ಕಮೆಂಟರಿಯತ್ತ ಮುಖಮಾಡುವುದು ಒಳಿತು. ಪ್ರತಿ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ದಿನೇಶ್ ಕಾರ್ತಿಕ್‌ಗೆ ಆರ್‌ಸಿಬಿ ಅತೀ ಹೆಚ್ಚಿನ ಅವಕಾಶ ನೀಡಿದೆ. ಆದರೆ ಕಾರ್ತಿಕ್ ಒಂದೂ ಪಂದ್ಯದಲ್ಲೂ ಆಡಿಲ್ಲ. ಹೀಗಾಗಿ ವಿದಾಯದ ಪಂದ್ಯ ಆಡಿಸಿಬಿಡಿ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ದಿನೇಶ್ ಕಾರ್ತಿಕ್ ರನೌಟ್ ಕೂಡ ಟ್ರೋಲ್ ಆಗಿದೆ.

IPL 2023: ರಾಜಸ್ಥಾನ ರಾಯಲ್ಸ್ ಸದ್ದಡಗಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು..

ದಿನೇಶ್ ಕಾರ್ತಿಕ್ ಇಂದು ವಾನಿಂಡು ಹಸರಂಗ ರನೌಟ್‌ಗೆ ಕಾರಣರಾಗಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ 26 ಬಾರಿ ಜೊತೆ ಆಟಗಾರನನ್ನೇ ರನೌಟ್ ಮಾಡಿದ್ದಾರೆ.  ಈ ಮೂಲಕ ತಂಡದ ಕುಸಿತದಲ್ಲಿ ದಿನೇಶ್ ಕಾರ್ತಿಕ್ ಕೊಡುಗೆ ಅಪಾರವಾಗಿದೆ. ಹೀಗಾಗಿ ಈ ವಿಚಾರವನ್ನು ಕೆದಕಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 13 ಎಸೆತದಲ್ಲಿ 16 ರನ್ ಸಿಡಿಸಿ ಔಟಾಗಿದ್ದಾರೆ. ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ 7 ಪಂದ್ಯದಲ್ಲಿ 61 ರನ್ ಸಿಡಿಸಿದ್ದಾರೆ. ಮ್ಯಾಚ್ ಫಿನೀಶರ್ ಜವಾಬ್ದಾರಿ ಹೊತ್ತಿರುವ ದಿನೇಶ್ ಕಾರ್ತಿಕ್, ಅಬ್ಬರಿಸಲು ವಿಫಲವಾಗುತ್ತಿದ್ದಾರೆ. ನಡು ದಾರಿಯಲ್ಲಿ ತಂಡಕ್ಕೆ ಕೈಕೊಡುತ್ತಿದ್ದಾರೆ.

 

They sent Shabaz Ahmed, Mahipal Lomror, Dinesh Karthik before Suyash PrabhuDesai.
.
🤡 mangement, they don't deserve trophy for a reason. pic.twitter.com/Lda7dJDCMm

— JayGawas (@JayGawas14)

 

ದಿನೇಶ್ ಕಾರ್ತಿಕ್ ಜೊತೆ ಮಹಿಪಾಲ್ ಲೊಮ್ರೊರ್, ಶಹಬಾಜ್ ಅಹಮ್ಮದ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ವಿರುದ್ದವೂ ಆಕ್ರೋಶ ಹೆಚ್ಚಾಗಿದೆ. ಆರ್‌ಸಿಬಿ ತಂಡ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮೇಲೆ ಅವಲಂಬಿತವಾಗಿದೆ. ಪ್ರತಿ ಪಂದ್ಯದಲ್ಲಿ ಈ ಮೂವರು ಬ್ಯಾಟ್ಸ್‌ಮನ್ ಕೊಡುಗೆ ನೀಡುತ್ತಿದ್ದಾರೆ. ಈ ತ್ರಿಮೂರ್ತಿಗಳು ಅಬ್ಬರಿಸಲು ವಿಫಲವಾದರೆ ಆರ್‌ಸಿಬಿ ಅಲ್ಪ ಮೊತ್ತಕ್ಕೆ ಕುಸಿದಿದೆ. ರಾಜಸ್ಥಾನ ರಾಯಲ್ಸ್ ವಿರುದ್ದ ಕೊಹ್ಲಿ ಮೊದಲ ಎಸೆತದಲ್ಲೇ ವಿಕೆಟ್ ಕೈತೆಲ್ಲಿದರು. ಆದರೆ ಪಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟ ಕೈಹಿಡಿಯಿತು.

IPL 2023 ಏಪ್ರಿಲ್ 23 ಕೊಹ್ಲಿಗೆ ಅನ್‌ಲಕ್ಕಿ, ಈ ದಿನ ಶೂನ್ಯಕ್ಕೆ ಔಟಾಗಿದ್ದೇ ಹೆಚ್ಚು!

ಫಾಫ್ ಡುಪ್ಲೆಸಿಸ್ 39 ಎಸೆತದಲ್ಲಿ 62 ರನ್ ಸಿಡಿಸಿದರೆ, ಇತ್ತ ಗ್ಲೆನ್ ಮ್ಯಾಕ್ಸ್‌ವೆಲ್ 44 ಎಸೆತದಲ್ಲಿ 77 ರನ್ ಸಿಡಿಸಿದರು. ಈ ಹೋರಾಟದಿಂದ ಆರ್‌ಸಿಬಿ 189 ರನ್ ಸಿಡಿಸಿತು. ರೋಚಕ ಹೋರಾಟದಲ್ಲಿ ಗೆಲುವು ದಾಖಲಿಸಿ ಇದೀಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. 

 


RCB after buying Dinesh Karthik and Mahipal Lomror pic.twitter.com/ZRByIYotvv

— Hitesh Mirg (@HiteshMirg)

 

Dinesh Karthik running out his own teammates.

26 times DK ran out his partners in IPL

pic.twitter.com/s2EjAGzW3T

— Abhi (@abhi_is_online)
click me!