IPL 2023: ಅಭಿಷೇಕ್‌, ಕ್ಲಾಸೆನ್‌ ಕ್ಲಾಸಿಕ್‌ ಇನ್ನಿಂಗ್ಸ್‌, ಡೆಲ್ಲಿಗೆ 198 ರನ್‌ ಗುರಿ!

Published : Apr 29, 2023, 09:26 PM IST
IPL 2023: ಅಭಿಷೇಕ್‌, ಕ್ಲಾಸೆನ್‌ ಕ್ಲಾಸಿಕ್‌ ಇನ್ನಿಂಗ್ಸ್‌, ಡೆಲ್ಲಿಗೆ 198 ರನ್‌ ಗುರಿ!

ಸಾರಾಂಶ

ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಎರಡು ತಂಡಗಳಾದ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್‌ ದೊಡ್ಡ ಮೊತ್ತ ಬಾರಿಸುವಲ್ಲಿ ಯಶಸ್ವಿಯಾಗಿದೆ.

ನವದೆಹಲಿ (ಏ.29): ಆರಂಭಿಕ ಆಟಗಾರ ಅಭಿಷೇಕ್‌ ಶರ್ಮ ಹಾಗೂ ಕೆಳ ಕ್ರಮಾಂಕದಲ್ಲಿ ವಿಕೆಟ್‌ ಕೀಪರ್‌ ಹೆನ್ರಿಚ್‌ ಕ್ಲಾಸೆನ್‌ ಅವರ ಕ್ಲಾಸಿಕ್‌ ಇನ್ನಿಂಗ್ಸ್‌ಗಳ ನೆರವಿನಿಂದ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ 8ನೇ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕಿದೆ. ಶನಿವಾರ ಅರುಣ್‌ ಜೇಟ್ಲಿ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಅಭಿಷೇಕ್‌ ವರ್ಮ್ (67ರನ್‌, 36 ಎಸೆತ, 12 ಬೌಂಡರಿ, 1 ಸಿಕ್ಸರ್‌) ಹಾಗೂ ಹೆನ್ರಿಚ್‌ ಕ್ಲಾಸೆನ್‌ (53ರನ್‌, 27 ಎಸೆತ, 2 ಬೌಂಡರಿ, 4 ಸಿಕ್ಸರ್‌) ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಆಸರೆಯಾದರು. ಇದರಿಂದಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 6 ವಿಕೆಟ್‌ಗೆ 197 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಸನ್‌ರೈಸರ್ಸ್‌ ತಂಡ ಕಳೆದ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್‌ ತನ್ನ ಮೊದಲ ಐದು ಪಂದ್ಯಗಳಲ್ಲಿ ಸೋಲು ಕಂಡ ಬಳಿಕ ಕಳೆದೆರಡು ಪಂದ್ಯಗಳಲ್ಲಿ ಗೆಲುವಿನ ಹಳಿಗೆ ಮರಳಿದೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ತಂಡ ಗೆಲುವಿಗೆ 198 ರನ್‌ ಬಾರಿಸಬೇಕಿದೆ.

ಬಹಳ ಸಮಯದ ಬಳಿಕ ಐಪಿಎಲ್‌ ಪಂದ್ಯಕ್ಕೆ ಮರಳಿದ ಇಶಾಂತ್‌ ಶರ್ಮ, ತಮ್ಮ ಇನ್ನಿಂಗ್ಸ್‌ಅನ್ನು ಸ್ಮರಣೀಯವಾಗಿಸಿಕೊಂಡರು. 2ನೇ ಓವರ್‌ನಲ್ಲಿಯೇ ಮಯಾಂಕ್‌ ಅಗರ್ವಾಲ್‌ ವಿಕೆಟ್‌ ಉರುಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮೊದಲ ಯಶಸ್ಸು ನೀಡಿದ್ದರು. 6 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 5 ರನ್‌ ಬಾರಿಸಿ ಸಾಲ್ಟ್‌ಗೆ ಕ್ಯಾಚ್‌ ನೀಡಿ ಮಯಾಂಕ್‌ ನಿರ್ಗಮಿಸಿದರು. ಬಳಿಕ ಇಶಾಂತ್‌ ಶರ್ಮರ ಎಸೆತಗಳನ್ನು ಚೆಂಡಾಡಿದ್ದು ಅಭಿಷೇಕ್‌ ಶರ್ಮ, ಪವರ್‌ ಪ್ಲೇ ಅವಧಿಯಲ್ಲಿ ಸನ್‌ರೈಸರ್ಸ್‌ ತಂಡ ಬಾರಿಸಿದ 62 ರನ್‌ಗಳ ಪೈಕಿ 43 ನ್‌ಗಳನ್ನು ಬಾರಿಸಿದ್ದರು.  ಇದರ ನಡುವೆ 6 ಎಸೆತಗಳಲ್ಲಿ 10 ರನ್‌ ಬಾರಿಸಿದ್ದ ರಾಹುಲ್‌ ತ್ರಿಪಾಠಿ ವಿಕೆಟ್‌ಅನ್ನುಮಿಚೆಲ್‌ ಮಾರ್ಷ್‌ ಉರುಳಿಸಿದ್ದರು. ಇದಾವುದೂ ಕೂಡ ತಂಡದ ಇನ್ನಿಂಗ್ಸ್‌ಗೆ ಹಿನ್ನಡೆಯಾಗದಂತೆ ಅಭಿಷೇಕ್‌ ಶರ್ಮ ಬ್ಯಾಟಿಂಗ್‌ ನಡೆಸಿದರು. ಕೇವಲ 25 ಎಸೆತಗಳಲ್ಲಿ ಕುಲದೀಪ್‌ ಯಾದವ್‌ ತಮ್ಮ ಅರ್ಧಶತಕವನ್ನು ಪೂರೈಸಿದರು.

IPL 2023: ಬರೋಬ್ಬರಿ 458 ರನ್‌ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್‌ ವಿನ್‌!

ಮಿಚೆಲ್‌ ಮಾರ್ಷ್‌ ಡಬಲ್‌ ಸ್ಟ್ರೈಕ್‌: ದೊಡ್ಡ ಮೊತ್ತದ ಹಾದಿಯಲ್ಲಿದ್ದ ಸನ್‌ರೈಸರ್ಸ್‌ ತಂಡಕ್ಕೆ 10ನೇ ಓವರ್‌ನಲ್ಲಿ ಮಿಚೆಲ್‌ ಮಾರ್ಷ್‌ ಡಬಲ್‌ ಸ್ಟ್ರೈಕ್‌ ನೀಡುವ ಮೂಲಕ ಏಟು ನೀಡಿದರು. 13 ಎಸೆತದಲ್ಲಿ 8 ರನ್ ಬಾರಿಸಿದ್ದ ನಾಯಕ ಏಡೆನ್‌ ಮಾರ್ಕ್ರಮ್‌ ಫುಲ್‌ ಮಾಡಲು ಯತ್ನಿಸಿ ಅಕ್ಸರ್‌ಗೆ ಕ್ಯಾಚ್‌ ನೀಡಿದರೆ, 2 ಎಸೆತದಲ್ಲಿ ಶೂನ್ಯ ಸುತ್ತಿದ ಹ್ಯಾರಿ ಬ್ರೂಕ್‌ ಕೂಡ ಕ್ಯಾಚ್‌ ನೀಡಿ ಔಟಾದರು. ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ ಬಿದ್ದರೂ ಹಿಂಜರಿಯದ ಅಭಿಷೇಕ್‌ ಶರ್ಮ 11ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ತಂಡದ ಮೊತ್ತವನ್ನು 4 ವಿಕೆಟ್‌ಗೆ 93ಕ್ಕೆ ಏರಿಸಿದ್ದರು.

Royal Challengers Bangalore: ಲಕ್ನೋ ಅಬ್ಬರದ ನಡುವೆ 'ಓನ್ಲಿ ಆರ್‌ಸಿಬಿ' ಟ್ವಿಟರ್‌ನಲ್ಲಿ ಫುಲ್‌ ಟ್ರೆಂಡ್‌!

ಮಿಚೆಲ್‌ ಮಾರ್ಷ್ ಡಬಲ್‌ ಸ್ಟ್ರೈಕ್‌ ನೀಡಿದ ಓವರ್‌ ಬೆನ್ನಲ್ಲಿಯೇ ಸನ್‌ರೈಸರ್ಸ್‌ ತಂಡ 11ನೇ ಓವರ್‌ನಲ್ಲಿ 24 ರನ್‌ ದೋಚಿತು. ಇದಕ್ಕೆ ಕಾರಣರಾಗಿದ್ದು ಹೆನ್ರಿಚ್‌ ಕ್ಲಾಸೆನ್‌ ಹಾಗೂ ಅಭಿಷೇಕ್‌ ಶರ್ಮ. ಅದೇ ಓವರ್‌ನಲ್ಲಿ ಅಭಿಷೇಕ್‌ ಶರ್ಮ ಔಟಾದರೂ, ಅಬ್ದುಲ್‌ ಸಮದ್‌ ತಂಡದ ಚಾರ್ಜ್‌ ತೆಗೆದುಕೊಂಡರು. 21 ಎಸೆತಗಳ ಇನ್ನಿಂಗ್ಸ್‌ನಲ್ಲಿ 2 ಸಿಕ್ಸರ್‌ ಹಾಗೂ 1 ಬೌಂಡರಿಯಿದ್ದ 28 ರನ್‌ ಬಾರಿಸಿ ಅಬ್ದುಲ್‌ ಸಮದ್‌ ಮಿಂಚಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ