
ಕೋಲ್ಕತಾ(ಏ.29): ರಹಮಾನುಲ್ಹಾ ಗುರ್ಬಾಜ್ ಏಕಾಂಗಿ ಹೋರಾಟದಿಂದ ಗುಜರಾತ್ ಟೈಟಾನ್ಸ್ ವಿರುದ್ಧ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿದೆ. ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಇತರರಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ಗುರ್ಬಾಜ್ 81 ರನ್ ಸಿಡಿಸಿದರೆ, ಅಂತಿಮ ಹಂತದಲ್ಲಿ ಆ್ಯಂಡ್ರೆ ರಸೆಲ್ ಹೋರಾಟ ಕೆಕೆಆರ್ ತಂಡಕ್ಕೆ ನೆರವಾಯಿತು. ರಸೆಲ್ ಅಜೇಯ 34 ರನ್ ಕಾಣಿಕೆ ನೀಡಿದರು. ಇದರ ಪರಿಣಾಮ ಕೋಲ್ಕತಾ ನೈಟ್ ರೈಡರ್ಸ್ ಉತ್ತಮ ಮೊತ್ತ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಲಿದ ಕೆಕೆಆರ್ ತಂಡಕ್ಕೆ ರಹಮಾನುಲ್ಹಾ ಗುರ್ಬಾಜ್ ಸ್ಫೋಟಕ ಆರಂಭ ನೀಡಿದರು. ಇತ್ತ ಎನ್ ಜಗದೀಶನ್ ಮತ್ತೆ ನಿರಾಸೆ ಅನುಭವಿಸಿದರು. ಜಗದೀಶನ್ 19ರನ್ ಸಿಡಿಸಿ ನಿರ್ಗಮಿಸಿದರು. 23 ರನ್‌ಗೆ ಕೆಕೆಆರ್ ಮೊದಲ ವಿಕೆಟ್ ಕಳೆದುಕೊಂಡಿತು.ಇದರ ಬೆನ್ನಲ್ಲೇ ಶಾರ್ದುಲ್ ಠಾಕೂರ್ ಡಕೌಟ್ ಆದರು. ಸತತ 2 ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿದ ಕೆಕೆಆರ್ ತಂಡಕ್ಕೆ ಗುರ್ಬಾಜ್ ಸ್ಫೋಟಕ ಬ್ಯಾಟಿಂಗ್ ಮೂಲಕ ಆಸರೆಯಾದರು.
IPL 2023: ಬರೋಬ್ಬರಿ 458 ರನ್ ದಾಖಲಾದ ಪಂದ್ಯದಲ್ಲಿ ಲಕ್ನೋ ಸೂಪರ್ ವಿನ್!
ವೆಂಕಟೇಶ್ ಅಯ್ಯರ್ ಕೇವಲ 11 ರನ್ ಸಿಡಿಸಿ ಔಟಾದರು. ನಾಯಕ ನಿತೀಶ್ ರಾಣಾ 4 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ಗುರ್ಬಾಜ್ ಆಕರ್ಷಕ ಅರ್ಧಶತಕ ಸಿಡಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಗುರ್ಬಾಜ್ ಅಬ್ಬರಿಸಿದರು. 39 ಎಸೆತದಲ್ಲಿ 81 ರನ್ ಸಿಡಿಸಿ ಗುರ್ಬಾಜ್ ಔಟಾದರು. ರಿಂಕು ಸಿಂಗ್ 19 ರನ್ ಸಿಡಿಸಿ ಔಟಾದರು.
ಅಂತಿಮ ಹಂತದಲ್ಲಿ ಆ್ಯಂಡ್ರೆ ರೆಸಲ್ ಅಬ್ಬರ ಆರಂಭಗೊಂಡಿತು. ರಸೆಲ್ 19 ಎಸೆತದಲ್ಲಿ ಅಜೇಯ 39 ರನ್ ಸಿಡಿಸಿದರು. ಇದರೊಂದಿಗೆ ಕೆಕೆಆರ್ 7 ವಿಕೆಟ್ ನಷ್ಟಕ್ಕೆ 179 ರನ್ ಸಿಡಿಸಿತು.
ಕಳೆದ ಪಂದ್ಯದಲ್ಲಿ ಕೆಕೆಆರ್ ಗೆಲುವಿನ ಸಿಹಿ ಕಂಡಿತ್ತು. ಆರ್‌ಸಿಬಿ ವಿರುದ್ಧ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟರಾಣಾ ಪಡೆ 5 ವಿಕೆಟ್‌ಗೆ ಗಳಿಸಿದ್ದು ಭರ್ತಿ 200 ರನ್. ಆದರೆ ಈ ಗುರಿಯನ್ನು ಆರ್‌ಸಿಬಿ ಬೆನ್ನತ್ತಲಿದೆ ಎಂಬ ಅಭಿಮಾನಿಗಳ ನಂಬಿಕೆಯನ್ನು ಕೊಹ್ಲಿ-ಡು ಪ್ಲೆಸಿ ಆರಂಭದಲ್ಲಿ ಉಳಿಸಿಕೊಂಡರೂ ಉಳಿದವರು ಕೈಕೊಟ್ಟರು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದಾಗಿ ತಂಡ 8 ವಿಕೆಟ್‌ಗೆ 179 ರನ್ ಗಳಿಸಿ ಮಂಡಿಯೂರಿತು.
Royal Challengers Bangalore: ಲಕ್ನೋ ಅಬ್ಬರದ ನಡುವೆ 'ಓನ್ಲಿ ಆರ್‌ಸಿಬಿ' ಟ್ವಿಟರ್‌ನಲ್ಲಿ ಫುಲ್ ಟ್ರೆಂಡ್!
ಕೆಕೆಆರ್ ಸಾಧಾರಣ ಆರಂಭ ಪಡೆದರೂ ಶಾಬಾಜ್ ಎಸೆದ 6ನೇ ಓವರಲ್ಲಿ ರಾಯ್ ಹ್ಯಾಟ್ರಿಕ್ ಸೇರಿ 4 ಸಿಕ್ಸರ್ ಚಚ್ಚಿದರು. ಆದರೆ ಪವರ್-ಪ್ಲೇ ಬಳಿಕ ರನ್ ವೇಗ ಕಡಿಮೆಯಾಯಿತು. ಜಗದೀಶನ್(29) ಹಾಗೂ 22 ಎಸೆತದಲ್ಲಿ ಫಿಫ್ಟಿಬಾರಿಸಿದ ರಾಯ್(56)ರನ್ನು 10ನೇ ಓವರಲ್ಲಿ ಪೆವಿಲಿಯನ್‌ಗಟ್ಟಿದ ವೈಶಾಖ್ ಕೆಕೆಆರ್‌ಗೆ ಡಬಲ್ ಶಾಕ್ ನೀಡಿದರು. ಆದರೆ ಸಿರಾಜ್, ಹರ್ಷಲ್ ಬಿಟ್ಟಕ್ಯಾಚ್‌ಗಳ ಲಾಭ ಪಡೆದ ರಾಣಾ 21 ಎಸೆತಗಳಲ್ಲಿ 48 ರನ್ ಸಿಡಿಸಿ ಆರ್‌ಸಿಪಿ ಪಾಲಿಕೆ ಕಂಟಕವಾದರು. ಕೊನೆಯಲ್ಲಿ ರಿಂಕು(18*), ವೀಸಾ(12*)ರ ಆಟ ತಂಡವನ್ನು 200ರ ಗಡಿ ತಲುಪಿಸಿತು
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.