
ಜೈಪುರ(ಏ.19): ಐಪಿಎಲ್ 2023 ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲೆರೆಡು ಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ಮುಖಾಮುಖಿಯಾಗಿದೆ. ಬಲಿಷ್ಠರ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ.ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಜೈಪುರದಲ್ಲಿ ಐಪಿಎಲ್ ಪಂದ್ಯ ಆಯೋಜನೆಯಾಗಿದೆ. 4 ವರ್ಷದ ಮೊದಲ ಪಂದ್ಯದಲ್ಲೇ ಆತಿಥೇಯ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದುಕೊಂಡು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಆ್ಯಡಮ್ ಜಂಪಾ ಬದಲು ಜೇಸನ್ ತಂಡ ಸೇರಿಕೊಂಡಿದ್ದಾರೆ.
ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಶಿಮ್ರೊನ್ ಹೆಟ್ಮೆಯರ್, ಧ್ರುವ್ ಜುರೆಲ್, ಆರ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೋಲ್ಟ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಾಲ್
ಮತ್ತೆ ಭುಗಿಲೆದ್ದ ಫಿಕ್ಸಿಂಗ್ ಭೂತ, ಬುಕ್ಕಿ ಸಂಪರ್ಕ ಮಾಹಿತಿ ಬಿಸಿಸಿಐಗೆ ರವಾನಿಸಿದ ಆರ್‌ಸಿಬಿ ವೇಗಿ ಸಿರಾಜ್!
ಲಖನೌ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡ, ಮಾರ್ಕಸ್ ಸ್ಟೊಯ್ನಿಸ್, ಕ್ರುನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ನವೀನ್ ಉಲ್ ಹಕ್, ಅವೇಶ್ ಖಾನ್, ಯುಧ್ವೀರ್ ಸಿಂಗ್ ಚರಕ್, ರವಿ ಬಿಶ್ನೋಯ್
ರಾಜಸ್ಥಾನ ರಾಯಲ್ಸ್ ಆಡಿದ 5 ಪಂದ್ಯದಲ್ಲಿ 4ರಲ್ಲಿ ಗೆಲುವು ದಾಖಲಿಸಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ಕೇವಲ ಒಂದು ಸೋಲು ಕಂಡಿದೆ. ಇನ್ನು ಲಖನೌ ಸೂಪರ್ ಜೈಂಟ್ಸ್ ಆಡಿದ 5 ಪಂದ್ಯದಲ್ಲಿ 3 ಗೆಲುವು ದಾಖಲಿಸಿ 2ನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿರುವ ಈ ತಂಡಗಳ ಹೋರಾಟ ಈಗಾಗಲೇ ತೀವ್ರ ಕುತೂಹಲ ಕೆರಳಿಸಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಹೊರತು ಪಡಿಸಿ ಇನ್ನುಳಿದ ಎಲ್ಲಾ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ನಗೆ ಬೀರಿದೆ. ರಾಜಸ್ಥಾನ ಇತರೆಲ್ಲಾ ತಂಡಗಳಿಗೆ ಹೋಲಿಸಿದರೆ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದು, ಜೈಸ್ವಾಲ್, ಬಟ್ಲರ್, ಸ್ಯಾಮ್ಸನ್ ಹಾಗೂ ಹೆಟ್ಮೇಯರ್ರನ್ನು ಕಟ್ಟಿಹಾಕುವುದೇ ಎದುರಾಳಿ ಬೌಲರ್ಗಳಿಗೆ ಸವಾಲಾಗಿ ಪರಿಣಮಿಸಿದೆ. ರಿಯಾನ್ ಪರಾಗ್ ಸಿಕ್ಕ ಅವಕಾಶ ಬಳಸಿಕೊಳ್ಳುತ್ತಿಲ್ಲ. ಹೋಲ್ಡರ್, ಆರ್.ಅಶ್ವಿನ್ ಆಲ್ರೌಂಡ್ ವಿಭಾಗದಲ್ಲಿ ಬಲ ತುಂಬಲಿದ್ದು, ಚಹಲ್ ಸ್ಪಿನ್ ಅಸ್ತ್ರದ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಧೋನಿಯನ್ನು ಕೊನೆ ಕ್ಷಣದಲ್ಲಿ ಕಟ್ಟಿಹಾಕಿದ್ದ ಸಂದೀಪ್ ಶರ್ಮಾ, ಬೌಲ್ಟ್ ಜೊತೆ ವೇಗದ ಬೌಲಿಂಗ್ ಪಡೆಗೆ ನೆರವಾಗಬಲ್ಲರು.
'ಸಿಟಿಆರ್ ಮಸಾಲೆ ದೋಸೆ, ಬೆಂಗಳೂರು ಆಟೋ, ಅಣ್ಣಾವ್ರ ಹಾಡು..' ಮಿ.360 ಎಬಿಡಿ ಕನ್ನಡ ಪ್ರೇಮ!
ಮತ್ತೊಂದೆಡೆ ಲಖನೌ ಟೂರ್ನಿಯ ಆರಂಭಿಕ ಲಯವನ್ನು ಕಳೆದುಕೊಂಡಿದ್ದು, ನಿರ್ಣಾಯಕ ಘಟ್ಟದಲ್ಲಿ ಆಟಗಾರರು ಕೈಕೊಡುತ್ತಿದ್ದಾರೆ. ಕೆ.ಎಲ್.ರಾಹುಲ್ ತಮ್ಮ ಸ್ಟೆ್ರೖಕ್ರೇಟ್ ಕಡೆಗೆ ಹೆಚ್ಚಿನ ಗಮನ ಕೊಡಬೇಕಿದ್ದು, ದೀಪಕ್ ಹೂಡಾ ಪದೇ ಪದೇ ವಿಫಲರಾಗುದ್ದಾರೆ. ಆದರೆ ಪೂರನ್, ಸ್ಟೋಯ್ನಿಸ್ ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದು, ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಕೃನಾಲ್ ಪ್ರದರ್ಶನ ತಂಡಕ್ಕೆ ನಿರ್ಣಾಯಕ. ಬಿಷ್ಣೋಯ್ ಮತ್ತೊಮ್ಮೆ ಟ್ರಂಪ್ಕಾರ್ಡ್ಸ್ ಎನಿಸಿಕೊಳ್ಳಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.