IPL 2022 ಜಡೇಜಾ ಚೆನ್ನೈ ಸೂಪರ್‌ ಕಿಂಗ್ಸ್‌ ಕ್ಯಾಪ್ಟನ್ಸಿ ತೊರೆದಿದ್ದು ಸ್ವನಿರ್ಧಾರ ಅಲ್ವಾ..?

By Suvarna News  |  First Published May 3, 2022, 4:39 PM IST

* ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕತ್ವ ಚುಕ್ಕಾಣಿ ಹಿಡಿದ ಎಂ ಎಸ್ ಧೋನಿ

* ಜಡೇಜಾ ಸಿಎಸ್‌ಕೆ ನಾಯಕತ್ವದಿಂದ ಕೆಳಗಿಳಿದಿದ್ದು ಸ್ವಂತ ನಿರ್ಧಾರ ಅಲ್ವಾ

* 9 ಪಂದ್ಯಗಳಲ್ಲಿ  2 ಗೆದ್ದು, 7 ರಲ್ಲಿ ಸೋತು ಮುಖಭಂಗ ಅನುಭವಿಸಿರುವ ಹಾಲಿ ಚಾಂಪಿಯನ್


ಮುಂಬೈ(ಮೇ.03): ಮಾರ್ಚ್​ 24, 2022. ಅಂದ್ರೆ 15ನೇ ಐಪಿಎಲ್ (IPL 2022) ಸೀಸನ್​ ಆರಂಭಕ್ಕೂ ಮುನ್ನ ರವೀಂದ್ರ ಜಡೇಜಾ (Ravindra Jadeja) ಚೆನ್ನೈ ತಂಡದ ಕ್ಯಾಪ್ಟನ್ ಆಗಿ ನೇಮಕಗೊಂಡು ಅಚ್ಚರಿ ಮೂಡಿಸಿದ್ರು. ಜಡ್ಡು ನಾಯಕತ್ವದಲ್ಲಿ ಯೆಲ್ಲೋ ಆರ್ಮಿ ಕೆಟ್ಟ ಪ್ರದರ್ಶನ ನೀಡ್ತು. 9 ಪಂದ್ಯಗಳಲ್ಲಿ  2 ಗೆದ್ದು, 7 ರಲ್ಲಿ ಸೋತು ಸುಣ್ಣವಾಗಿತ್ತು. ಜಡ್ಡು ಕ್ಯಾಪ್ಟನ್ಸಿ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿತ್ತು. ಈ ನಡುವೆಯೇ ಜಡೇಜಾ ಟೂರ್ನಿ ಮಧ್ಯದಲ್ಲೇ ಚೆನ್ನೈ ಕ್ಯಾಪ್ಟನ್ಸಿಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡು ಎಲ್ಲರನ್ನು ದಂಗು ಬಡಿಸಿದ್ರು.

ಕ್ಯಾಪ್ಟನ್ ಆದ ಒಂದು ತಿಂಗಳಲ್ಲೇ ಜಡ್ಡು ಹಿಂದೆ ಸರಿದಿದ್ದು ಅನೇಕ ಪ್ರಶ್ನೆಗಳನ್ನ ಹುಟ್ಟಹಾಕಿತ್ತು. ಫ್ರಾಂಚೈಸಿ ಆಟದ ಕಡೆ ಹೆಚ್ಚಿನ ಗಮನ ಕೊಡಲು ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ಸಬೂಬು ನೀಡಿತು. ಇದೇ ಸತ್ಯವೆಂದೂ ಬಹುತೇಕರು ಭಾವಿಸಿದ್ರು. ಆದ್ರೆ ಜಡ್ಡು ಕ್ಯಾಪ್ಟನ್ಸಿ ತೊರೆದಿದ್ದು ಸ್ವನಿರ್ಧಾರದಿಂದ ಅಲ್ಲ, ಬಲವಂತವಾಗಿ ಟೀಂ​ ಮ್ಯಾನೇಜ್​ಮೆಂಟ್​​ ಕೆಳಗಿಳಿಸಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.

Tap to resize

Latest Videos

ಜಡ್ಡು ಕಳಪೆ ಪ್ರದರ್ಶನದಿಂದ ಸಿಡಿದೆದ್ದ ಫ್ರಾಂಚೈಸಿ:

ಸಿಎಸ್​ಕೆ ನಾಯಕತ್ವ (Chennai Super Kings captaincy) ಚೇಂಜಸ್​ ಬಗ್ಗೆ ಮಾಹಿತಿ ಹಂಚಿಕೊಂಡಾಗ ಇದು ಒಮ್ಮತದ ನಿರ್ಧಾರವೆಂದು ಕಾಣಿಸ್ತಿತ್ತು. ಆದ್ರೆ ಸುಳ್ಳು. ಜಡ್ಡು ನಾಯಕತ್ವ ತೊರೆಯಲು ಅಸಲಿ ಕಾರಣ ಏನು ಅನ್ನೋದನ್ನ ಕ್ರಿಕ್​​​​​​ಬಜ್​​ ಬಹಿರಂಗಪಡಿಸಿದೆ. ಇದು ಮ್ಯಾನೇಜ್‌ಮೆಂಟ್ ತೆಗೆದುಕೊಂಡ ನಿರ್ಧಾರವಾಗಿದ್ದು ನಾಯಕನಾಗಿ ಹಾಗೂ ಆಟಗಾರನಾಗಿ ಜಡೇಜಾ ಸಂಪೂರ್ಣ ವೈಫಲ್ಯವನ್ನು ಅನುಭವಿಸಿದ್ರು. ಈ ಕಾರಣದಿಂದಾಗಿ ಚೆನ್ನೈ ಬಲವಂತದ ನಿರ್ಧಾರ ತೆಗೆದುಕೊಂಡಿತು ಎಂದಿದೆ. ವಿಶ್ವದ ಅತ್ಯುತ್ತಮ ಆಲ್‌ರೌಂಡರ್‌ ಓರ್ವ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದದನ್ನು ನೋಡಿಕೊಂಡು ಮ್ಯಾನೇಜ್‌ಮೆಂಟ್ ಸುಮ್ಮನಿರಲು ಸಾಧ್ಯವಿಲ್ಲ. ಖಂಡಿತವಾಗಿಯೂ ನಾಯಕತ್ವದ ಹೊಣೆಯಿಂದಾಗಿ ಆತ ಕುಸಿದಿದ್ದಾರೆ. ಆತ ಕ್ಯಾಚ್‌ಗಳನ್ನು ಕೂಡ ಡ್ರಾಪ್ ಮಾಡುತ್ತಿದ್ದಾರೆ" ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಂತರಿಕ ಮೂಲಗಳ ಹೇಳಿಕೆಯನ್ನು ಕ್ರಿಕ್ ಬಜ್ ಉಲ್ಲೇಖಿಸಿದೆ.

ಇನ್ನು ಚೆನ್ನೈ ಫ್ರಾಂಚೈಸಿ ಬಲವಂತದಿಂದ ಜಡ್ಡುರನ್ನ ಕೆಳಗಿಳಿಸಿದ್ರು ತಪ್ಪೇನಿಲ್ಲ. ಯಾಕಂದ್ರೆ ಅವರು ನಾಯಕರಾದ ಬಳಿಕ ಸಂಪೂರ್ಣ ಪ್ಲಾಫ್ ಆಗಿದ್ರು. ಬ್ಯಾಟಿಂಗ್​​​​​, ಬೌಲಿಂಗ್​ ಹಾಗೂ ಫೀಲ್ಡಿಂಗ್​​ನಲ್ಲಿ ಹಿಂದಿನ ಮೊಣಚು ಕಾಣಿಸ್ತಿರ್ಲಿಲ್ಲ. ಆಡಿದ 9 ಪಂದ್ಯಗಳಿಂದ 113 ರನ್​ ಗಳಿಸಿದ್ರೆ, ಬೌಲಿಂಗ್​​ನಲ್ಲಿ  ಜಸ್ಟ್​ 5 ವಿಕೆಟ್​​ ಕಬಳಿಸಿದ್ರು. ಇನ್ನು ಫೀಲ್ಡಿಂಗ್​ನಲ್ಲಿ ಅನೇಕ ಬಾರಿ ಸುಲಭ ಕ್ಯಾಚ್​ಗಳನ್ನ ಕೈಚೆಲ್ಲಿ ಎದುರಾಳಿ ಬ್ಯಾಟರ್​ಗಳಿಗೆ ಜೀವದಾನ ನೀಡಿದ್ರು. ಒಟ್ಟಿನಲ್ಲಿ ಜಡ್ಡು ಈಗ ಕ್ಯಾಪ್ಟನ್ಸಿ ತ್ಯಜಿಸಿದ್ದಾಗಿದೆ. ಧೋನಿ ಹೇಳಿದಂತೆ ಅವರು ಇನ್ನಾದ್ರು ಮೂರು ವಿಭಾಗದಲ್ಲಿ ಉತ್ತಮ ಆಟವಾಡಿ, ತಂಡದ ಗೆಲುವಿಗೆ ಸಹಕರಿಸಲಿ.

ಕ್ಯಾಪ್ಟನ್ ಕೂಲ್ ಧೋನಿ IPL ನಿವೃತ್ತಿ ಸದ್ಯಕ್ಕಿಲ್ಲ..!

ರವೀಂದ್ರ ಜಡೇಜಾ ನೇತೃತ್ವದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 8 ಪಂದ್ಯಗಳನ್ನಾಡಿ ಕೇವಲ 2 ಗೆಲುವು ಹಾಗೂ 6 ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿತ್ತು. ಇದಾದ ಬಳಿಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ದ ಭರ್ಜರಿ ಗೆಲುವು ಸಾಧಿಸುವ ಮೂಲಕ ಜಯದ ಹಳಿಗೆ ಮರಳಿತ್ತು. 

click me!