IPL 2022 ಲೆಜೆಂಡ್ ಸುನಿಲ್ ಗವಾಸ್ಕರ್ ಮಾತಿಗೂ ಬೆಲೆ ಕೊಡೋದಿಲ್ವಾ ಬಿಸಿಸಿಐ ಸೆಲೆಕ್ಟರ್ಸ್..?

Published : May 10, 2022, 04:43 PM IST
IPL 2022 ಲೆಜೆಂಡ್ ಸುನಿಲ್ ಗವಾಸ್ಕರ್ ಮಾತಿಗೂ ಬೆಲೆ ಕೊಡೋದಿಲ್ವಾ ಬಿಸಿಸಿಐ ಸೆಲೆಕ್ಟರ್ಸ್..?

ಸಾರಾಂಶ

* ಐಪಿಎಲ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ * ಐಪಿಎಲ್​​ನಲ್ಲಿ ವಿರಾಟ್‌ ಕೊಹ್ಲಿ 12 ಪಂದ್ಯಗಳಿಂದ ಹೊಡೆದಿರುವುದು ಒಂದು ಹಾಫ್ ಸೆಂಚುರಿ * ಆರ್​ಸಿಬಿಗೆ ಕೊಹ್ಲಿಯೇ ಬ್ರ್ಯಾಂಡ್, ಪ್ಲೇಯಿಂಗ್-11ನಲ್ಲಿ ಇರಬೇಕು.

ಮುಂಬೈ(ಮೇ.10): ವಿರಾಟ್ ಕೊಹ್ಲಿ (Virat Kohli), ಜಸ್ಟ್ ಆರೇ ಆರು ತಿಂಗಳ ಹಿಂದೆ ಈ ಹೆಸ್ರು ಕೇಳಿದ್ರೆ ಕ್ರಿಕೆಟ್ ಜಗತ್ತು ಹೆದರುತ್ತಿತ್ತು. ವಿಶ್ವ ಶ್ರೇಷ್ಠ ಬೌಲರ್ಸ್ ಕಿಂಗ್ ಕೊಹ್ಲಿ ಎದುರು ಬೌಲಿಂಗ್ ಮಾಡಲು ಪರದಾಡುತ್ತಿದ್ದರು. ದಶಕಗಳ ಕಾಲ ವಿರಾಟ್ ಮುಟ್ಟಿದೆಲ್ಲಾ ಚಿನ್ನವಾಗ್ತಿತ್ತು. ಆದರೆ 2022 ಕೊಹ್ಲಿ ಪಾಲಿಗೆ ಕೆಟ್ಟ ವರ್ಷವಾಗಿ ಪರಿಣಮಿಸಿದೆ. ಈ ವರ್ಷ ಅವರು ಮುಟ್ಟಿದೆಲ್ಲಾ ಹಾವಾಗ್ತಿದೆ. ಟೀಂ ಇಂಡಿಯಾ ಪರ ಪರವಾಗಿಲ್ಲ. ಹಾಫ್ ಸೆಂಚುರಿಯಾದ್ರೂ ಹೊಡೆಯುತ್ತಿದ್ದರು. ಐಪಿಎಲ್​ನಲ್ಲಿ ದಯನೀಯ ಸ್ಥಿತಿ.

ಈ ಸೀಸನ್ ಐಪಿಎಲ್​​ನಲ್ಲಿ 12 ಪಂದ್ಯಗಳಿಂದ ಹೊಡೆದಿರುವುದು ಒಂದು ಹಾಫ್ ಸೆಂಚುರಿ. ಅದರಲ್ಲಿ ಮೂರು ಡಕೌಟ್. ಮೊನ್ನೆ ಸನ್‌ರೈಸರ್ಸ್ ಹೈದ್ರಾಬಾದ್ ವಿರುದ್ಧ ಗೋಲ್ಡನ್ ಡಕೌಟ್ ಆದ್ಮೇಲೆ ಅಂತೂ ಕೊಹ್ಲಿ ಸ್ಥಿತಿ ಅಯೋಮಯವಾಗಿ ಬಿಟ್ಟಿದೆ. ತಲೆ ತಗ್ಗಿಸಿಕೊಂಡು ಪೆವಿಲಿಯನ್​​ಗೆ ನಡೆದ ವಿರಾಟ್, ಅಲ್ಲೂ ತಲೆ ತಗ್ಗಿಸಿಕೊಂಡೇ ಕೂತು ಬಿಟ್ಟರು. ಆರ್​ಸಿಬಿ ಕೋಚ್​ ಸಂಜಯ್ ಬಂಗಾರ್​, ಸಮಾಧಾನ ಬೇರೆ ಮಾಡಿದ್ರು.

ಆರ್​ಸಿಬಿ ಡ್ರಾಪ್ ಮಾಡಲ್ಲ, ಟೀಂ ಇಂಡಿಯಾ ಡ್ರಾಪ್ ಮಾಡುತ್ತಾ?:

ಕಿಂಗ್ ಕೊಹ್ಲಿ ಯಾವತ್ತಿದ್ದರೂ ಕಿಂಗೇ. ಅವರು ಫಾರ್ಮ್​ನಲ್ಲಿ ಇಲ್ಲದಿದ್ದರೂ ಪರವಾಗಿಲ್ಲ, ಪ್ಲೇಯಿಂಗ್-11ನಲ್ಲಿ ಇರಬೇಕು. ಆರ್​ಸಿಬಿಗೆ ಕೊಹ್ಲಿಯೇ ಬ್ರ್ಯಾಂಡ್. ಹಾಗಾಗಿ ವಿರಾಟ್ ಕಳಪೆ ಫಾರ್ಮ್​ನಲ್ಲಿದ್ದರೂ ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಲ್ಲ. ಆದ್ರೆ ಟೀಂ ಇಂಡಿಯಾ (Team India) ಆಗಲ್ಲ. ಕಳಪೆ ಫಾರ್ಮ್​ನಲ್ಲಿರುವ ಆಟಗಾರರನ್ನ ಟೀಮ್​ಗೆ ಸೆಲೆಕ್ಟ್ ಮಾಡೋದೇ ಇಲ್ಲ. ಈಗ ಮುಂಬರುವ ಸೌತ್ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧದ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲು ಸೆಲೆಕ್ಟರ್ಸ್ ಚಿಂತಿಸುತ್ತಿದ್ದಾರೆ ಅನ್ನೋ ಸುದ್ದಿ ಬಿಸಿಸಿಐನಿಂದ ಹೊರ ಬಿದ್ದಿದೆ. ಹಾಗೇನಾದ್ರೂ ಆದ್ರೆ ಈ ಎರಡು ಸರಣಿಯಲ್ಲಿ ಕಿಂಗ್ ಕೊಹ್ಲಿ ಆಡೋದಿಲ್ಲ.

ಸುಮ್ಮನೆ ಕುಳಿತರೆ ಫಾರ್ಮ್​ ಮರಳಿ ಬರುವುದಿಲ್ಲ:

ಇದನ್ನು ಹೇಳಿರೋದು ಮಾಜಿ ಕ್ರಿಕೆಟ್ ಸುನಿಲ್ ಗವಾಸ್ಕರ್ (Sunil Gavaskar). ವಿರಾಟ್‌ ಕೊಹ್ಲಿ ಯಾವುದೇ ಕಾರಣಕ್ಕೂ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಬ್ರೇಕ್‌ ತೆಗೆದುಕೊಳ್ಳಬಾರದು. ಡ್ರೆಸ್ಸಿಂಗ್‌ ರೂಂನಲ್ಲಿ ಸುಮ್ಮನೆ ಕುಳಿತುಕೊಳ್ಳುವುದರಿಂದ ಫಾರ್ಮ್‌ ಬರುವುದಿಲ್ಲ. ಫಾರ್ಮ್‌ ಮರಳಿ ಪಡೆಯಲು ಹೆಚ್ಚು ಹೆಚ್ಚು ಕ್ರಿಕೆಟ್‌ ಆಡಬೇಕು ಎಂದು ಗವಾಸ್ಕರ್‌ ಗರಂ ಹೇಳಿದ್ದಾರೆ. ಈ ಮೂಲಕ ಕೊಹ್ಲಿಗೆ ರೆಸ್ಟ್ ನೀಡುವ ಪ್ಲಾನ್​ನಲ್ಲಿದ್ದ ಸೆಲೆಕ್ಟರ್ಸ್​ಗೆ ಸನ್ನಿ ಸಲಹೆ ನೀಡಿದ್ದಾರೆ.

Suryakumar Yadav: ಐಪಿಎಲ್‌ನಿಂದ ಹೊರಬಿದ್ದ ಮುಂಬೈ ಇಂಡಿಯನ್ಸ್‌ ಸ್ಟಾರ್ ಕ್ರಿಕೆಟಿಗ..!

ಗೊಂದಲದಲ್ಲಿ ಬಿಸಿಸಿಐ, ಕೊಹ್ಲಿ ನಿರ್ಧಾರ ಏನು..?

ವಿರಾಟ್ ಕೊಹ್ಲಿಯನ್ನ ಟೀಮ್​ನಿಂದ ಡ್ರಾಪ್ ಮಾಡುವಂತೂ ಇಲ್ಲ, ಸೆಲೆಕ್ಟ್ ಮಾಡುವಂತೂ ಇಲ್ಲ ಅನ್ನೋ ಸ್ಥಿತಿಯಲ್ಲಿ ಬಿಸಿಸಿಐ ಇದೆ. ಆಯ್ಕೆ ಮಾಡಿದ್ರೆ ಕಳಪೆ ಫಾರ್ಮ್​. ಡ್ರಾಪ್ ಮಾಡಿದ್ರೆ ಐಕಾನ್ ಪ್ಲೇಯರ್​​ನನ್ನ ಡ್ರಾಪ್ ಮಾಡಿದ ಟೀಕೆಗೆ ಗುರಿಯಾಗಬೇಕಾಗುತ್ತೆ. ಜೊತೆಗೆ ಕೊಹ್ಲಿ ಇಲ್ಲದೆ ಈ ಎರಡು ಸರಣಿಯನ್ನ ನೋಡೋರು ಇಲ್ಲದಂತಾಗುತ್ತಾರೆ. ಪಂದ್ಯ ನೇರ ಪ್ರಸಾರ ಮಾಡೋ ಚಾನೆಲ್​ಗೆ ಕೋಟಿಗಟ್ಟಲೆ ಲಾಸ್ ಆಗುತ್ತೆ. ಹಾಗಾಗಿ ಬಿಸಿಸಿಐ ಗೊಂದಲದಲ್ಲಿದೆ. ಇನ್ನು ಕೊಹ್ಲಿಗೆ ರೆಸ್ಟ್ ನೀಡಿದ್ರೂ ಅವರನ್ನ ಕೇಳಿಯೇ ರೆಸ್ಟ್ ನೀಡ್ತಾರೆ. ಹಾಗಾಗಿ ಕೊಹ್ಲಿ ನಿರ್ಧಾರ ಏನು ಅನ್ನೋದೇ ಕುತೂಹಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ