
ಬೆಂಗಳೂರು(ಮೇ.10): ಕೆಜಿಎಫ್-2 ಚಾಪ್ಟರ್ (KGF-2) ಚಿತ್ರ ತೆರೆಗೆ ಅಪ್ಪಳಿಸಿದ್ದೇ ಬಂತು, ಇನ್ನೂ ಈ ಚಿತ್ರದ ಅಬ್ಬರ ಕಮ್ಮಿಯಾಗಿಲ್ಲ. ಗಳಿಕೆಯಲ್ಲಿ ಸಾವಿರ ಕೋಟಿ ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಗಲ್ಲಾಪೆಟ್ಟಿಯಲ್ಲಿ ಅಷ್ಟೆ ಆಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರದ ಮಾಸ್ ಡೈಲಾಗ್ಗಳು ಬಾರಿ ವೈರಲ್ ಆಗ್ತಿವೆ. ಆದ್ರಲ್ಲೂ ವೈಲೆನ್ಸ್ ವೈಲೆನ್ಸ್ ಅನ್ನೋ ಫೇಮಸ್ ಡೈಲಾಗ್ ಅಂತೂ ಚಿಂದಿ.
ಸದ್ಯ ಈ ವೈಲೆನ್ಸ್ ಅನ್ನೋ ಡೈಲಾಗ್ಅನ್ನ ಆರ್‌ಸಿಬಿ ತಂಡದ ಮಾನ್ಸಟರ್ ಆಟಕ್ಕೆ ಹೋಲಿಸಲಾಗ್ತಿದೆ. ಯಾಕಂದ್ರೆ ಈತ ಕೂಡ ರಾಕಿಯಂತೆ ಫುಲ್ ವೈಲೆಂಟ್. ಕೆಜಿಎಫ್ ರಾಕಿ ಮಿಶಿನ್ ಗನ್ ಹಿಡಿದು ವಿಲನ್ಗಳನ್ನ ಹೊಡೆದುರುಳಿಸಿದ್ರೆ ಈತ ತನ್ನ ಬ್ಯಾಟ್ ಅನ್ನೋ ಗನ್ನಿಂದ ಎದುರಾಳಿಯನ್ನ ಕಿಲ್ ಮಾಡ್ತಿದ್ದಾನೆ. ಅಷ್ಟಕ್ಕೂ ಆರ್‌ಸಿಬಿ ತಂಡದ ಮಾನ್ಸ್ಸ್ಟಾರ್ ಬೇರಾರು ಅಲ್ಲ, ಆತನೇ ಎಂಟೆದೆಯ ಬಂಟ ದಿನೇಶ್ ಕಾರ್ತಿಕ್.
ಸಿಕ್ಸಸ್, ಸಿಕ್ಸಸ್, ಸಿಕ್ಸಸ್ ಐ ಡೋಂಟ್ ಲೈಕ್, ಐ ಅವೈಡ್. ಬಟ್ ಸಿಕ್ಸಸ್ ಲೈಕ್ ಮಿ, ಐ ಕಾಂಟ್ ಅವೈಡ್ ಅಂತಾರೆ ಡಿಕೆ:
ಸನ್‌ರೈಸರ್ಸ್ ಹೈದ್ರಾಬಾದ್ (Sunrisers Hyderabad) ವಿರುದ್ಧ ಕೊನೆಯಲ್ಲಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ (Dinesh Karthik) ಕೇವಲ 8 ಎಸೆತಗಳಲ್ಲಿ 30 ರನ್ ಸಿಡಿಸಿ ಆರ್‌ಸಿಬಿ ಬಿಗ್ ಸ್ಕೋರ್ ಕಲೆಹಾಕಲು ಕಾರಣರಾಗಿದ್ರು. ಡಿಕೆ ರೋರಿಂಗ್ ನೋಡಿ ಅಭಿಮಾನಿಗಳು ಈತನ ಆಟವನ್ನ ಕೆಜಿಎಫ್ನ ವೈಲೆನ್ಸ್ ವೈಲೆನ್ಸ್ ಡೈಲಾಗ್ಗೆ ಹೋಲಿಕೆ ಮಾಡಲಾಗ್ತಿದೆ. ಹಾಗಾದ್ರೆ ಆ ಮಾಸ್ ಡೈಲಾಗ್ ಅನ್ನ ಡಿಕೆ ಹೇಳಿದ್ರೆ ಹೇಗಿರುತ್ತೆ ಹೇಳ್ತೀವಿ ಕೇಳಿ. ‘‘ಸಿಕ್ಸಸ್, ಸಿಕ್ಸಸ್, ಸಿಕ್ಸಸ್. ಐ ಡೋಂಟ್ ಲೈಕ್ ಇಟ್. ಐ ಅವೈಡ್ ಇಟ್. ಬಟ್ ಸಿಕ್ಸಸ್ ಲೈಕ್ಸ್ ಮಿ, ಐ ಕಾಂಟ್ ಅವೈಡ್ ಇಟ್.
IPL 2022: ಗ್ರೀನ್ ಜೆರ್ಸಿಯಲ್ಲಿ RCB ಗೆದ್ರೆ ಫೈನಲ್ ಟಿಕೆಟ್ ಫಿಕ್ಸ್..!
20ನೇ ಓವರ್, 23 ಎಸೆತ, ಅಜೇಯ 71 ರನ್:
ಆರ್‌ಸಿಬಿ (RCB) ಪಾಲಿನ ಸೇವಿಯರ್ ಆಪತ್ಬಾಂಧವ, ದಿ ಬೆಸ್ಟ್ ಫಿನಿಶರ್ ಅಂತೆಲ್ಲಾ ಕರೆಸಿಕೊಳ್ಳೋ ಡಿಕೆ ಈ ಸಲದ ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದಾರೆ.ಆರಂಭದಿಂದ ಇಲ್ಲಿತನಕ 20ನೇ ಓವರ್‌ನಲ್ಲಿ ಒಟ್ಟು 23 ಎಸೆತಗಳನ್ನ ಪೇಸ್ ಮಾಡಿದ್ದಾರೆ. ಆದ್ರಲ್ಲಿ ಸ್ಪೋಟಕ 71 ರನ್ ಗಳಿಸಿದ್ದಾರೆ. ಇನ್ನೂ ಈ ವೇಳೆ ದಿನೇಶ್ ಕಾರ್ತಿಕ್ ಒಮ್ಮೆಯೂ ಔಟಾಗಿಯೇ ಇಲ್ಲ. ಒಟ್ಟಿನಲ್ಲಿ ಆರಂಭದಲ್ಲೇ ಹೇಳಿದಂತೆ ಕೆಜಿಎಫ್ನ ರಾಕಿ ಬಾಯ್ನಂತೆ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದಲ್ಲಿ ವೈಲೆಂಟ್. ಈ ಮಾನ್ಸ್ಟರ್ನ ವೈಲೆಂಟ್ ಅಬ್ಬರಕ್ಕೆ ಎದುರಾಳಿ ತಂಡಗಳು ಅದ್ಯಾವ ರೀತಿ ಪತರುಗುಟ್ತಾವೋ ಆ ದೇವರೇ ಬಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.