IPL 2022 ಹೈದರಾಬಾದ್ ದಾಳಿಗೆ ಕುಸಿದ ಪಂಜಾಬ್, ವಿಲಿಯಮ್ಸನ್ ಪಡೆಗೆ ಸ್ಪರ್ಧಾತ್ಮಕ ಟಾರ್ಗೆಟ್!

Published : Apr 17, 2022, 05:31 PM ISTUpdated : Apr 17, 2022, 05:46 PM IST
IPL 2022 ಹೈದರಾಬಾದ್ ದಾಳಿಗೆ ಕುಸಿದ ಪಂಜಾಬ್, ವಿಲಿಯಮ್ಸನ್ ಪಡೆಗೆ ಸ್ಪರ್ಧಾತ್ಮಕ ಟಾರ್ಗೆಟ್!

ಸಾರಾಂಶ

ಲಿಯಾಮ್ ಲಿವಿಂಗ್‌ಸ್ಟೋನ್ ಏಕಾಂಗಿ ಹೋರಾಟ ಸನ್‌ರೈಸರ್ಸ್ ಹೈದರಾಬಾದ್ ಮಾರಕ ದಾಳಿ 151 ರನ್ ಸಿಡಿಸಿದ ಪಂಜಾಬ್ ಕಿಂಗ್ಸ್

ಮುಂಬೈ(ಏ.17): ಸನ್‌‌ರೈಸರ್ಸ್ ಹೈದರಾಬಾದ್ ಮಾರಕ ದಾಳಿ ನಡುವೆ ಲಿಯಾಮ್ ಲಿವಿಂಗ್‌ಸ್ಟೋನ್ ಹೋರಾಟ ನೀಡುವ ಮೂಲಕ  ಪಂಜಾಬ್ ಕಿಂಗ್ಸ್  ತಂಡವನ್ನು ಅಲ್ಪಮೊತ್ತ ಭೀತಿಯಿಂದ ಪಾರು ಮಾಡಿದ್ದಾರೆ. ಲಿವಿಂಗ್‌ಸ್ಟೋನ್ ಹಾಫ್ ಸೆಂಚುರಿ ನೆರವಿನಿಂದ ಪಂಜಾಬ್ ಕಿಂಗ್ಸ್ 151 ರನ್ ಸಿಡಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ನಾಯಕ ಶಿಖರ್ ಧವನ್ ವಿಕೆಟ್ ಕಳೆದುಕೊಂಡಿತು. ಧವನ್ 8 ರನ್ ಸಿಡಿಸಿ ನಿರ್ಗಮಿಸಿದರು. ಮಯಾಂಕ್ ಅಗರ್ವಾಲ್ ಬದಲು ತಂಡ ಸೇರಿಕೊಂಡ ಪ್ರಭಸಿಮ್ರನ್ ಸಿಂಗ್ ಕೇವಲ 14 ರನ್ ಸಿಡಿಸಿ ನಿರಾಸೆ ಮೂಡಿಸಿದರು. 

ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್​​, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?

ಜಾನಿ ಬೈರ್‌ಸ್ಟೋ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆಯಾಟ ನೀಡುವ ಸೂಚನೆ ನೀಡಿದರು. ಆದರೆ ಜಾನಿ 12 ರನ್ ಸಿಡಿಸಿ ನಿರ್ಗಮಿಸಿದರು. 48 ರನ್ ಸಿಡಿಸುವಷ್ಟರಲ್ಲೇ ಪಂಜಾಬ್ ಕಿಂಗ್ಸ್ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಬಳಿಕ ಲಿಯಾಮ್ ಹೋರಾಟ ಆರಂಭಗೊಂಡಿತು.

ಲಿಯಾಮ್ ಬ್ಯಾಟಿಂಗ್‌ನಿಂದ ಪಂಜಾಬ್ ಚೇತರಿಸಿಕೊಂಡಿತು. ಆದರೆ ಜಿತೇಶ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಶಾರುಖ್ ಖಾನ್ 26 ರನ್ ಕಾಣಿಕೆ ನೀಡಿದರು. ಆದರೆ ಏಕಾಂಗಿ ಹೋರಾಟ ನೀಡಿದ ಲಿಯಾಮ್ ಹಾಫ್ ಸೆಂಚುರಿ ಸಿಡಿಸಿದರು.

ಹೋರಾಟ ನೀಡಿದ ಲಿಯಾಮ್ ಲಿವಿಂಗ್‌ಸ್ಟೋನ್ 33 ಎಸೆತದಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 60 ರನ್ ಸಿಡಿಸಿದರು. ಇತ್ತ ಒಡೆನ್ ಸ್ಮಿತ್ 13 ರನ್ ಸಿಡಿಸಿ ಔಟಾದರು . ರಾಹುಲ್ ಚಹಾರ್ ಅಬ್ಬರಿಸಲಿಲ್ಲ. ವೈಭವ್ ಅರೋರಾ ಡಕೌಟ್ ಆದರು.  ಅರ್ಶದೀಪ್ ರನೌಟ್‌ಗೆ ಬಲಿಯಾಗುವ ಮೂಲಕ ಪಂಜಾಬ್ ಕಿಂಗ್ಸ್ 151 ರನ್‌ಗೆ ಆಲೌಟ್ ಆಯಿತು.  ಹೈದರಾಬಾದ್ ಪರ ಉಮ್ರಾನ್ ಮಲಿಕ್ 4 ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್ 3 ವಿಕೆಟ್ ಕಬಳಿಸಿ ಮಿಂಚಿದರು. 

IPL 2022 ಕಾರ್ತಿಕ್ ಬ್ಯಾಟಿಂಗ್, ಹೇಜಲ್‌ವುಡ್ ಬೌಲಿಂಗ್, ಡೆಲ್ಲಿ ಮಣಿಸಿದ ಆರ್‌ಸಿಬಿ

ಐಪಿಎಲ್ ಅಂಕಪಟ್ಟಿ:
ಅಂಕಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ 5 ಪಂದ್ಯಗಳಲ್ಲಿ 3 ಗೆಲುವು ದಾಖಲಿಸಿ 5ನೇ ಸ್ಥಾನದಲ್ಲಿದೆ. ಇತ್ತ ಸನ್‌ರೈರ್ಸ್ ಹೈದರಾಬಾದ್ ಕೂಡ 5ರಲ್ಲಿ 3 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಅಗ್ರಸ್ಥಾನವನ್ನು ಗುಜರಾತ್ ಟೈಟಾನ್ಸ್ ಅಲಂಕರಿಸಿದೆ. ಗುಜರಾತ್ 5 ಪಂದ್ಯಗಳ ಪೈಕಿ 4 ಗೆಲುವು ಕಂಡಿದೆ. ಲಖನೌ ಸೂಪರ್ ಜೈಂಟ್ಸ್ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ  ಎರಡನೇ ಸ್ಥಾನದಲ್ಲಿದೆ. ಡೆಲ್ಲಿ ವಿರುದ್ಧದ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಪಂದ್ಯದಲ್ಲಿ 4 ಗೆಲುವು ದಾಖಲಿಸಿ 3ನೇ ಸ್ಥಾನ ಅಲಂಕರಿಸಿದೆ. ಇನ್ನು ರಾಜಸ್ಥಾನ ರಾಯಲ್ಸ್ 5 ರಲ್ಲಿ 3 ಗೆಲುವು ದಾಖಲಿಸುವ ಮೂಲಕ 4ನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 5ನೇ ಸ್ಥಾನದಲ್ಲಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ 6ರಲ್ಲಿ 3 ಪಂದ್ಯ ಗೆದ್ದು 6ನೇ ಸ್ಥಾನದಲ್ಲಿದೆ. ಇನ್ನು ಹೈದರಾಬಾದ್ 7ನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 5 ಪಂದ್ಯಗಳಲ್ಲಿ 2 ಗೆಲುವು ಸಾಧಿಸಿ 8ನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 5ರಲ್ಲಿ 1 ಗೆಲವು ದಾಖಲಿಸಿ 9ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 6 ಪಂದ್ಯಗಳನ್ನು ಸೋತು ಕೊನೆಯ ಸ್ಥಾನದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20 ಕ್ರಿಕೆಟ್‌ನಲ್ಲಿ ಅತಿವೇಗದ 5000 ರನ್! ರಸೆಲ್, ಟಿಮ್ ಡೇವಿಡ್‌ರನ್ನೇ ಹಿಂದಿಕ್ಕಿದ ಅಭಿಷೇಕ್ ಶರ್ಮಾ!
ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು