IPL 2022 ಪಂಜಾಬ್ ಮಣಿಸಿದ ಡೆಲ್ಲಿ, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ!

Published : May 16, 2022, 11:23 PM ISTUpdated : May 17, 2022, 12:14 AM IST
IPL 2022 ಪಂಜಾಬ್ ಮಣಿಸಿದ ಡೆಲ್ಲಿ, ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ!

ಸಾರಾಂಶ

ಡೆಲ್ಲಿ ವಿರುದ್ಧ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ 17 ರನ್ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್  ಪ್ಲೇ ಆಫ್ ರೇಸ್‌ನಲ್ಲಿ ಯಾರು ಇನ್? ಯಾರು ಔಟ್?

ಮುಂಬೈ(ಮೇ.16): ಜಿತೇಶ್ ಶರ್ಮಾ ಏಕಾಂಗಿ ಹೋರಾಟ ಸಾಕಾಗಲಿಲ್ಲ, ನಾಯಕ ಮಾಯಂಕ್ ಸೇರಿದಂತೆ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಡೆಲ್ಲಿ ಕ್ಯಾಪಿಟಲ್ಸ್ ದಾಳಿಗೆ ಮಂಕಾದರು. ಪರಿಣಾಮ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ 17 ರನ್ ಗೆಲುವು ಕಂಡಿದೆ. ಇದರೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇತ್ತ ನಾಲ್ಕನೇ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ 5ನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಪ್ಲೇ ಆಫ್ ರೇಸ್ ಇದೀಗ ಮತ್ತಷ್ಟು ರೋಚಕವಾಗಿದೆ.

ಪಂಜಾಬ್ ಕಿಂಗ್ಸ್ ,  ಗೆಲುವಿಗೆ 160 ರನ್ ಟಾರ್ಗೆಟ್ ಪಡೆಯಿತು.ಡೀಸೆಂಟ್ ಆರಂಭವನ್ನೂ ಪಡೆಯಿತು. ಜಾನಿ ಬೈರ್‌ಸ್ಟೋ ಹಾಗೂ ಶಿಖರ್ ಧವನ್ ಹೋರಾಟ ಹೆಚ್ಚು ಹೊತ್ತು ಇರಲಿಲ್ಲ. ಇವರಿಬ್ಬರ ಜೊತೆಯಾಟ 38 ರನ್‌ಗೆ ಅಂತ್ಯವಾಯಿತು. ಜಾನಿ ಬೈರ್‌ಸ್ಟೋ 15 ಎಸೆತದಲ್ಲಿ 28 ರನ್ ಸಿಡಿಸಿ ಔಟಾದರು. 

IPL 2022 ಲಖನೌ ಮಣಿಸಿದ ರಾಜಸ್ಥಾನ, ಪ್ಲೇ ಆಫ್ ರೇಸ್ ಮತ್ತಷ್ಟು ಕಠಿಣ!

ಭಾನುಕಾ ರಾಜಪಕ್ಸ 4 ರನ್ ಸಿಡಿಸಿ ಔಟಾದರು. ಇತ್ತ ಶಿಖರ್ ಧವನ್ 19 ರನ್ ಸಿಡಿಸಿ ಔಟಾದರು. ನಾಯಕ ಮಯಾಂಕ್ ಅಗರ್ವಾಲ್ ಡಕೌಟ್ ಆದರು. ಈ ಮೂಲಕ ಪಂಜಾಬ್ ಕಿಂಗ್ಸ್ ಸೋಲಿನತ್ತ ಜಾರಿಕೊಂಡಿತು. ಲಿಯಾಮ್ ಲಿಂಗ್ ಸ್ಟೋನ್ 3 ರನ್ ಸಿಡಿಸಿ ಔಟಾದರು. ಹರ್ಪ್ರೀತ್ ಬ್ರಾರ್ 1 ರನ್ ಸಿಡಿಸಿ ಔಟಾದರು.

ದಿಢೀರ್ ವಿಕೆಟ್ ಪತನದಿಂದ ಪಂಜಾಬ್ ಪಂದ್ಯದ ಮೇಲಿ ಹಿಡಿತ ಕಳೆದುಕೊಂಡಿತು. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಬ್ಬರ ಆರಂಭಗೊಂಡಿತು. ರಿಷಿ ಧವನ್ ಕೇವಲ 4 ರನ್ ಸಿಡಿಸಿ ಔಟಾದರು. ಆದರೆ ಜಿತೇಶ್ ಶರ್ಮಾ ಏಕಾಂಗಿ ಹೋರಾಟ ಆರಂಭಗೊಂಡಿತು. ರಾಹುಲ್ ಚಹಾಲ್ ಉತ್ತಮ ಸಾಥ್ ನೀಡಿದರು.

ಜಿತೇಶ್ ಶರ್ಮಾ ಹೋರಾಟದಿಂದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಗೆಲುವಿನ ಆಸೆ ಚಿಗುರೊಡೆಯಿತು. ಆದರೆ ಚೇಸಿಂಗ್ ಮತ್ತಷ್ಟು ಕಠಿಣಗೊಂಡಿತು. ಕಾರಣ ಪಂಜಾಬ್ ಪ್ರಮುಖ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಜಿಶೇಶ್ ಶರ್ಮಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಜಿತೇಶ್ 44 ರನ್ ಸಿಡಿಸಿ ಔಟಾದರು. 

ರಾಹುಲ್ ಚಹಾರ್ ಹಾಗೂ ಕಾಗಿಸೋ ರಬಾಡ ಹೋರಾಟ ನಡೆಯಲಿಲ್ಲ. ರಬಡಾ 6 ರನ್ ಸಿಡಿಸಿ ಔಟಾದರು.ಪಂಡಾಬ್ ಕಿಂಗ್ಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 26 ರನ್ ಅವಶ್ಯಕತೆ ಇತ್ತು. ಅಷ್ಟರಲ್ಲೇ 9 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. 

ರಾಹುಲ್ ಚಹಾರ್ ಅಜೇಯ ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 9 ವಿಕೆಟ್ ನಷ್ಟಕ್ಕೆ 142 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 

ವಿರಾಟ್ ಕೊಹ್ಲಿಯ ಘನಘೋರ ವೈಫಲ್ಯಕ್ಕೆ ಮರಗುತ್ತಿದೆ ಕ್ರಿಕೆಟ್​​​​ ಜಗತ್ತು..!

ಗರಿಷ್ಠ ಐಪಿಎಲ್‌ ವಿಕೆಟ್‌: ಸ್ಟೈನ್‌ ಹಿಂದಿಕ್ಕಿದ ರಬಾಡ

ಪಂಜಾಬ್‌ ಕಿಂಗ್‌್ಸ ವೇಗಿ ಕಗಿಸೊ ರಬಾಡ ಐಪಿಎಲ್‌ನಲ್ಲಿ 98 ವಿಕೆಟ್‌ ಪಡೆದಿದ್ದು, ಅತೀ ಹೆಚ್ಚು ವಿಕೆಟ್‌ ಕಿತ್ತ ದಕ್ಷಿಣ ಆಫ್ರಿಕಾದ ಬೌಲರ್‌ ಎನ್ನುವ ದಾಖಲೆ ಬರೆದಿದ್ದಾರೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್‌ನ ಮಿಚೆಲ್‌ ಮಾಷ್‌ರ್‍ರನ್ನು ಔಟ್‌ ಮಾಡಿದ ಅವರು ಡೇಲ್‌ ಸ್ಟೈನ್‌ರ 97 ವಿಕೆಟ್‌ ದಾಖಲೆಯನ್ನು ಮುರಿದರು. ಕ್ರಿಸ್‌ ಮೋರಿಸ್‌ 95 ವಿಕೆಟ್‌ ಪಡೆದು, ದಕ್ಷಿಣ ಆಫ್ರಿಕಾ ಬೌಲರ್‌ಗಳ ಪೈಕಿ 3ನೇ ಸ್ಥಾನದಲ್ಲಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ