
ಮುಂಬೈ(ಮೇ.16): ಮಿಚೆಲ್ ಮಾರ್ಶ್ ಹಾಫ್ ಸೆಂಚುರಿ, ಸರ್ಫರಾಜ್ ಖಾನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ಖಾತೆ ತೆರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಶೂನ್ಯ ಸುತ್ತಿದರು. ಆದರೆ ಸರ್ಫರಾಜ್ ಖಾನ್, ಮಿಚೆಲ್ ಮಾರ್ಶ್ ಜೊತೆಯಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ ಚೇತರಿಸಿಕೊಂಡಿತು.
ಸರ್ಫರಾಜ್ ಖಾನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 16 ಎಸೆತದಲ್ಲಿ ಸರ್ಫರಾಜ್ 32 ರನ್ ಸಿಡಿಸಿ ಔಟಾದರು. ಆದರೆ ಮಿಚೆಲ್ ಮಾರ್ಶ್ ಹೋರಾಟ ಮುಂದುವರಿಸಿದರು. ಇತ್ತ ಲಲಿತ್ ಯಾದವ್ 21 ಎಸೆತದಲ್ಲಿ 24 ರನ್ ಸಿಡಿಸಿ ಔಟಾದರು.
IPL 2022: ವೃದ್ದ ಅಭಿಮಾನಿಯ ತಲೆಗೆ ಅಪ್ಪಳಿಸಿದ ಪಾಟೀದಾರ್ ಬಾರಿಸಿದ ಸಿಕ್ಸ್..! ವಿಡಿಯೋ ವೈರಲ್
ನಾಯಕ ರಿಷಬ್ ಪಂತ್ 7 ರನ್ ಸಿಡಿಸಿ ಔಟಾದರು. ರೋವ್ಮನ್ ಪೊವೆಲ್ ಕೇವಲ 2 ರನ್ ಸಿಡಿಸಿ ಔಟಾದರು. ಮಿಚೆಲ್ ಮಾರ್ಶ್ ಹಾಗೂ ಅಕ್ಸರ್ ಪಟೇಲ್ ಜೊತೆಯಾಟ ಮತ್ತೆ ಡೆಲ್ಲಿ ತಂಡಕ್ಕೆ ನೆರವಾಯಿತು. ಮಾರ್ಶ್ ದಿಟ್ಟ ಹೋರಾಟದ ಮೂಲಕ ಹಾಫ್ ಸೆಂಚುರಿ ಸಿಡಿಸಿದರು.
ಮಾರ್ಶ್ 48 ಎಸೆತದಲ್ಲಿ 63 ರನ್ ಸಿಡಿಸಿ ಔಟಾದರು. ಶಾರ್ದೂಲ್ ಠಾಕೂರ್ 3 ರನ್ ಸಿಡಿಸಿ ನಿರ್ಗಮಿಸಿದರು. ಅಕ್ಸರ್ ಪಟೇಲ್ ಅಜೇಯ 17 ರನ್ ಸಿಡಿಸಿದರು. ಕುಲ್ದೀಪ್ ಯಾದವ್ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿತು.
ರಾಯಲ್ಸ್ ಆಟಕ್ಕೆ ಜೈಂಟ್ಸ್ ಕಂಗಾಲು
ರಾಜಸ್ಥಾನ ರಾಯಲ್ಸ್ 15ನೇ ಆವೃತ್ತಿ ಐಪಿಎಲ್‌ನಲ್ಲಿ 8ನೇ ಗೆಲುವು ಸಾಧಿಸಿದ್ದು, ಪ್ಲೇ-ಆಫ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ತಂಡ 24 ರನ್ ಗೆಲುವು ಸಾಧಿಸಿದ್ದು, 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಸತತ 2 ಪಂದ್ಯಗಳನ್ನು ಸೋತ ಲಖನೌ ಪ್ಲೇ-ಆಫ್ ಸ್ಥಾನ ಅಧಿಕೃತಗೊಳಿಸಲು ಮತ್ತಷ್ಟುಸಮಯ ಕಾಯಬೇಕಿದ್ದು, ನೆಟ್ ರನ್‌ರೇಟ್ ಕಡಿಮೆ ಇರುವ ಕಾರಣ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿಯಿತು. ರಾಜಸ್ಥಾನದ ಈ ಗೆಲುವು ಆರ್‌ಸಿಬಿ ಪ್ಲೇ-ಆಫ್ ಸ್ಥಾನ ಕನಸಿಗೆ ತಣ್ಣೀರೆರಚುವ ಸಾಧ್ಯತೆ ಇದೆ.
IPL 2022 ಪಂಜಾಬ್ ವಿರುದ್ಧ ಆರ್ ಸಿಬಿ ತಂಡಕ್ಕೆ ಮತ್ತೆ ಸೋಲಿನ ಬರೆ
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 6 ವಿಕೆಟ್‌ಗೆ 178 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಲಖನೌ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ 3 ವಿಕೆಟ್‌ಗೆ ಕೇವಲ 34 ರನ್ ಗಳಿಸಿತ್ತು. ಆದರೆ ಏಕಾಂಗಿ ಹೋರಾಟ ನಡೆಸಿದ ದೀಪಕ್ ಹೂಡಾ 39 ಎಸೆತಗಳಲ್ಲಿ 59 ರನ್ ಸಿಡಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. ಕೃನಾಲ್ ಪಾಂಡ್ಯ 25, ಸ್ಟೋಯ್ನಿಸ್ 27 ರನ್ ಕೊಡುಗೆ ನೀಡಿದರು. ಬೌಲ್ಟ್, ಪ್ರಸಿದ್‌್ಧ ಕೃಷ್ಣ, ಮೆಕಾಯ್ ತಲಾ 2 ವಿಕೆಟ್ ಕಿತ್ತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.