IPL schedule 2022 ಪಂಜಾಬ್ ವಿರುದ್ಧ ಆರಂಭಿಸಿ ಗುಜರಾತ್ ಪಂದ್ಯದೊಂದಿಗೆ ಲೀಗ್ ಅಂತ್ಯ, RCB ಸಂಪೂರ್ಣ ವೇಳಾಪಟ್ಟಿ!

Published : Mar 06, 2022, 06:46 PM ISTUpdated : Mar 06, 2022, 06:47 PM IST
IPL schedule 2022 ಪಂಜಾಬ್ ವಿರುದ್ಧ ಆರಂಭಿಸಿ ಗುಜರಾತ್ ಪಂದ್ಯದೊಂದಿಗೆ ಲೀಗ್ ಅಂತ್ಯ, RCB ಸಂಪೂರ್ಣ ವೇಳಾಪಟ್ಟಿ!

ಸಾರಾಂಶ

ಐಪಿಎಲ್ 2022 ವೇಳಾಪಟ್ಟಿ ಪ್ರಕಟ, ಮಾ.26 ರಿಂದ ಟೂರ್ನಿ ಮಾ.27 ರಿಂದ ಆರ್‌ಸಿಬಿ ಹೋರಾಟ ಆರಂಭ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಪೂರ್ಣ ಪಂದ್ಯದ ವಿವರ

ಬೆಂಗಳೂರು(ಮಾ.06): ಕ್ರಿಕೆಟ್ ಲೋಕದ ಅತೀ ದೊಡ್ಡ ಹಬ್ಬ ಐಪಿಎಲ್(IPL 2022) ಟೂರ್ನಿಗೆ ವೇದಿಕೆ ಸಜ್ಜಾಗಿದೆ. ಬಿಸಿಸಿಐ(BCCI) ಇಂದು ಐಪಿಎಲ್ 2022 ವೇಳಾಪಟ್ಟಿ(IPL Schedule 2022) ಪ್ರಕಟಿಸಿದೆ. ಮಾರ್ಚ್ 26 ರಿಂದ ಪಂದ್ಯ ಆರಂಭಗೊಳ್ಳಲಿದ್ದು, ಮೇ.29 ಫೈನಲ್ ಪಂದ್ಯದೊಂದಿಗೆ ಟೂರ್ನಿ ಮುಕ್ತಾಯಗೊಳ್ಳಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(Roayl Challnegers Bengaluru) ತಂಡ ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಹೋರಾಟದೊಂದಿಗೆ ಪಯಣ ಆರಂಭಿಸಲಿದೆ.

ಮುಂಬೈ ಹಾಗೂ ಪುಣೆಯಲ್ಲಿ ಟೂರ್ನಿ ಆಯೋಜಿಸಲಾಗಿದೆ. ಮೇ.19 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದೆ. ಆರ್‌ಸಿಬಿ ವೇಳಾಪಟ್ಟಿ(RCB Schedule 2022) ಇಲ್ಲಿದೆ.

IPL 2022 ಬಹುನಿರೀಕ್ಷಿತ ಐಪಿಎಲ್ 2022 ವೇಳಾಪಟ್ಟಿ ಪ್ರಕಟ, ಮಾ.26ರಿಂದ ಟೂರ್ನಿ ಆರಂಭ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ:
ಮಾ.27, ಆರ್‌ಸಿಬಿ vs ಪಂಜಾಬ್ ಕಿಂಗ್ಸ್
ಮಾ.30, ಆರ್‌ಸಿಬಿ vs ಕೋಲ್ಕತಾ ನೈಟ್ ರೈಡರ್ಸ್
ಏ.05, ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್
ಏ.09, ಆರ್‌ಸಿಬಿ vs ಮುಂಬೈ ಇಂಡಿಯನ್ಸ್
ಏ.12, ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್
ಏ.16, ಆರ್‌ಸಿಬಿ vs ಡೆಲ್ಲಿ ಕ್ಯಾಪಿಟಲ್ಸ್
ಏ.19, ಆರ್‌ಸಿಬಿ vs ಲಕ್ನೋ ಸೂಪರ್‌ಜೈಂಟ್ಸ್
ಏ.23, ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್
ಏ.26, ಆರ್‌ಸಿಬಿ vs ರಾಜಸ್ಥಾನ ರಾಯಲ್ಸ್
ಏ.30, ಆರ್‌ಸಿಬಿ vs ಗುಜರಾತ್ ಟೈಟಾನ್ಸ್
ಮೇ.04, ಆರ್‌ಸಿಬಿ vs ಚೆನ್ನೈ ಸೂಪರ್ ಕಿಂಗ್ಸ್
ಮೇ.08, ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್
ಮೇ.13, ಆರ್‌ಸಿಬಿ vs ಪಂಜಾಬ್ ಕಿಂಗ್ಸ್
ಮೇ.10, ಆರ್‌ಸಿಬಿ vs ಗುಜರಾತ್ ಟೈಟಾನ್ಸ್

 

 

ಐಪಿಎಲ್ ವೇಳಾಪಟ್ಟಿ ಪ್ರಕಟಗೊಂಡಿದೆ. ಶೀಘ್ರದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರು ಅನ್ನೋದು ಬಹಿರಂಗವಾಗಲಿದೆ. ಈಗಾಗಲೇ ಆರ್‌ಸಿಬಿ ಹಲವು ಸುತ್ತಿನ ಚರ್ಚೆ ನಡೆಸಿದೆ. ಶೀಘ್ರದಲ್ಲೇ ಆರ್‌ಸಿಬಿ ನಾಯಕ ಯಾರು ಅನ್ನೋದು ಬಹಿರಂಗವಾಗಲಿದೆ.

IPL 2022: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನಾಯಕ ಯಾರು..?

ಈ ಬಾರಿಯ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರು
ವಾನಿಂದು ಹಸರಂಗ-10.75 ಕೋಟಿ ರು., ಹರ್ಷಲ್‌ ಪಟೇಲ್‌-10.75 ಕೋಟಿ ರು., ಹೇಜಲ್‌ವುಡ್‌-7.75 ಕೋಟಿ ರು., ಫಾಫ್‌ ಡು ಪ್ಲೆಸಿ-7 ಕೋಟಿ ರು., ದಿನೇಶ್‌ ಕಾರ್ತಿಕ್‌-5.50 ಕೋಟಿ ರು., ಅನುಜ್‌ ರಾವತ್‌-3.40 ಕೋಟಿ ರು., ಶಹಬಾಜ್‌-2.40 ಕೋಟಿ ರು., ರುಥೆರ್‌ಫೆäರ್ಡ್‌-1 ಕೋಟಿ ರು., ಮಹಿಪಾಲ್‌ ಲೊಮ್ರೊರ್‌-95 ಲಕ್ಷ, ಫಿನ್‌ ಆ್ಯಲೆನ್‌-80 ಲಕ್ಷ, ಬೆಹ್ರನ್‌ಡ್ರಫ್‌-75 ಲಕ್ಷ ರು., ಕರಣ್‌ ಶರ್ಮಾ-50 ಲಕ್ಷ ರು., ಪ್ರಭು ದೇಸಾಯಿ-30 ಲಕ್ಷ ರು., ಚಾಮ ಮಿಲಿಂದ್‌-25 ಲಕ್ಷ ರು., ಅನೀಶ್ವರ್‌ ಗೌತಮ್‌-20 ಲಕ್ಷ ರು., ಆಕಾಶ್‌ ದೀಪ್‌-20 ಲಕ್ಷ ರು.

ಆರ್‌ಸಿಬಿ ಉಳಿಸಿಕೊಂಡ ಆಟಗಾರರು
ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್‌ವೆಲ್
ಮೊಹಮ್ಮದ್ ಸಿರಾಜ್

ಒತ್ತಡ ತಪ್ಪಿಸಲು ಆರ್‌ಸಿಬಿ ನಾಯಕತ್ವ ಬಿಟ್ಟೆ: ವಿರಾಟ್‌
ಐಪಿಎಲ್‌ನ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕತ್ವದಿಂದ ಕೆಳಗಿಳಿದಿರುವ ವಿರಾಟ್‌ ಕೊಹ್ಲಿ, ತಮ್ಮ ನಿರ್ಧಾರಕ್ಕೆ ಕೆಲಸದ ಒತ್ತಡ ಕಾರಣ ಎಂದಿದ್ದಾರೆ. ಗುರುವಾರ ಆರ್‌ಸಿಬಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಿರ್ವಹಿಸಲು ಸಾಧ್ಯವಿಲ್ಲದ್ದನ್ನು ನಾನು ಮಾಡಲು ಹೋಗುವುದಿಲ್ಲ. ನನ್ನಿಂದ ಎಷ್ಟುಆಗುತ್ತೋ ಅಷ್ಟನ್ನೇ ಮಾಡುತ್ತೇನೆ. ಆದರೆ ನನ್ನ ನಿರ್ಧಾರವನ್ನು ಸಾರ್ವಜನಿಕರಿಗೆ ಅರ್ಥ ಮಾಡಿಸಲು ಬಹಳ ಕಷ್ಟವಿದೆ. ಇದರಲ್ಲಿ ಯಾವುದೇ ಆಶ್ಚರ್ಯಕರ ಸಂಗತಿಯಿಲ್ಲ. ನಾನು ನನ್ನ ಕೆಲಸದ ಹೊರೆಯನ್ನು ತಗ್ಗಿಸಲು ನಾಯಕತ್ವ ಬಿಟ್ಟಿದ್ದೇನೆ. ನಾನು ಏನಾದರೂ ನಿರ್ಧಾರ ಕೈಗೊಂಡರೆ ಆಗಲೇ ಮಾಡಿ ಬಿಡುತ್ತೇನೆ. ಅದಕ್ಕಾಗಿ ಕಾಯುತ್ತಾ ಕೂರುವುದಿಲ್ಲ’ ಎಂದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ