
ಪುಣೆ(ಮೇ.01): ಸತತ ಸೋಲಿನಿಂದ ಪಾರುಮಾಡಲು ತಂಡದ ಜವಾಬ್ದಾರಿ ಹೊತ್ತ ಎಂ.ಎಸ್.ಧೋನಿ ಮೊದಲ ಹಂತದಲ್ಲಿ ಯಶಸ್ಸು ಸಾಧಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ರುತುರಾಜ್ ಗಾಯಕ್ವಾಡ್ 99 ರನ್ ಹಾಗೂ ಡೆವೋನ್ ಕೊನ್ವೆ ಸಿಡಿಸಿದ ರನ್‌ಳ ನೆರವಿನಿಂದ ಚೆನ್ನೈ 1 ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರುತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೇ ಉತ್ತಮ ಆರಂಭ ನೀಡಿದರು. ಇವರಿಬ್ಬರ ಬ್ಯಾಟಿಂಗ್ ಪ್ರದರ್ಶನಕ್ಕೆ ಹೈದರಾಬಾದ್ ಸುಸ್ತಾಯಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ರುತುರಾಜ್ ಹಾಗೂ ಡೆವೋನ್ ಹಾಫ್ ಸೆಂಚುರಿ ಸಿಡಿಸಿದರು.
IPL 2022 ಚೆನ್ನೈಗೆ ಮರಳಿದ ಧೋನಿ ನಾಯಕತ್ವ, ಸನ್‌ರೈಸರ್ಸ್‌ಗೆ ಒಲಿದ ಟಾಸ್!
ಅಬ್ಬರಿಸಿದ ರುತುರಾಜ್ ಗಾಯಕ್ವಾಡ್ ಕೇವಲ 1 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು. 57 ಎಸೆತದಲ್ಲಿ 6 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ರುತುರಾಜ್ 99 ರನ್ ಸಿಡಿಸಿ ಔಟಾದರು. ರುತುರಾಜ್ 173.68 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದರು.
ರುತುರಾಜ್ ವಿಕೆಟ್ ಪತನದ ಬಳಿಕವೂ ಡೆವೋನ್ ಅಬ್ಬರ ಮುಂದುವರಿಯಿತು. ಇತ್ತ ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಬಂದ ನಾಯಕ ಎಂ.ಎಸ್.ಧೋನಿ 8 ರನ್ ಸಿಡಿಸಿ ನಿರ್ಗಮಿಸಿದರು. ಡೆವೋನ್ ಕಾನ್ವೇ ಅಜೇಯ 85 ರನ್ ಸಿಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್ 2 ವಿಕೆಟ್ ನಷ್ಟಕ್ಕೆ 202 ರನ್ ಸಿಡಿಸಿತು.
ರವೀಂದ್ರ ಜಡೇಜಾ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿತ್ತು. 8 ಪಂದ್ಯಗಳಲ್ಲಿ ಕೇವಲ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿತು. ಹೀಗಾಗಿ ಮತ್ತೆ ಎಂ.ಎಸ್.ಧೋನಿಗೆ ನಾಯಕತ್ವ ನೀಡಲಾಗಿದೆ. ಧೋನಿ ನಾಯಕತ್ವದಲ್ಲಿ ಈ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಸಿಎಸ್‌ಕೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ.
IPL 2022: ಗುಜರಾತ್ ಟೈಟಾನ್ಸ್ ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ನಾಯಕ ಹಾರ್ದಿಕ್ ಪಾಂಡ್ಯ..!
ಕಳೆದ ಪಂದ್ಯದಲ್ಲಿ ಸೋಲಿನ ಕಹಿ
ಪಂಜಾಬ್ ಕಿಂಗ್‌್ಸ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ 11 ರನ್‌ಗಳ ಸೋಲು ಅನುಭವಿಸಿತು. ತಂಡಕ್ಕಿದು ಈ ಆವೃತ್ತಿಯಲ್ಲಿ 6ನೇ ಸೋಲು. ಬಾಕಿ ಇರುವ 6 ಪಂದ್ಯಗಳಲ್ಲಿ ಚೆನ್ನೈ ಎಲ್ಲಾ 6 ಪಂದ್ಯಗಳಲ್ಲಿ ಗೆದ್ದರೂ ಪ್ಲೇ-ಆಫ್‌ಗೇರುವುದು ಕಷ್ಟ.
ಮೊದಲು ಬ್ಯಾಟ್ ಮಾಡಿದ ಪಂಜಾಬ್, ಶಿಖರ್ ಧವನ್‌ರ ಆಕರ್ಷಕ 88* ರನ್ ನೆರವಿನಿಂದ 20 ಓವರಲ್ಲಿ 4 ವಿಕೆಟ್‌ಗೆ 187 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಚೆನ್ನೈ, ಅಂಬಟಿ ರಾಯುಡು ಅವರ ಸ್ಫೋಟಕ ಇನ್ನಿಂಗ್‌್ಸ(78 ರನ್, 39 ಎಸೆತ, 7 ಬೌಂಡರಿ, 6 ಸಿಕ್ಸರ್) ಹೊರತಾಗಿಯೂ ಗೆಲುವಿನ ದಡ ಸೇರಲಿಲ್ಲ.
ಪಂಜಾಬ್ 4ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಮತ್ತೆ ಆರಂಭಿಕ ಆಘಾತ ಅನುಭವಿಸಿತು. 40 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಚೆನ್ನೈಗೆ ರಾಯುಡು ಆಸರೆಯಾದರು. ಅವರ ಆಕರ್ಷಕ ಆಟ ತಂಡ ಗೆಲುವಿನ ಆಸೆಯನ್ನು ಕೈಬಿಡದಂತೆ ಮಾಡಿತು.
18ನೇ ಓವರಲ್ಲಿ ರಾಯುಡು ಔಟಾದಾಗ ತಂಡವನ್ನು ಗೆಲ್ಲಿಸುವ ಹೊಣೆ ಎಂ.ಎಸ್.ಧೋನಿ ಹೆಗಲಿಗೆ ಬಿತ್ತು. 1 ಬೌಂಡರಿ, 1 ಸಿಕ್ಸರ್ ಬಾರಿಸಿ ಧೋನಿ ಭರವಸೆ ಮೂಡಿಸಿದರು. ಈ ನಡುವೆ ಅಶ್‌ರ್‍ದೀಪ್ ಸಿಂಗ್ ಮತ್ತೊಮ್ಮೆ ಪಂಜಾಬ್‌ಗೆ ನೆರವಾದರು. 19ನೇ ಓವರಲ್ಲಿ ಕೇವಲ 8 ರನ್ ನೀಡಿ ಕೊನೆ ಓವರ್‌ನಲ್ಲಿ ಚೆನ್ನೈ 27 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿಸಿದರು. ರಿಶಿ ಧವನ್ ಎಸೆದ 20ನೇ ಓವರ್‌ನ 3ನೇ ಎಸೆತದಲ್ಲಿ ಧೋನಿ ಔಟಾಗುತ್ತಿದ್ದಂತೆ ಚೆನ್ನೈ ಜಯದ ಆಸೆ ಕಮರಿ ಹೋಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.