IPL 2022 ಧೋನಿ ನಾಯಕತ್ವದ ಬೆನ್ನಲ್ಲೇ ಬದಲಾಯ್ತು ಅದೃಷ್ಠ, 99 ರನ್ ಸಿಡಿಸಿದ ರುತರಾಜ್ !

Published : May 01, 2022, 09:00 PM ISTUpdated : May 01, 2022, 09:36 PM IST
IPL 2022 ಧೋನಿ ನಾಯಕತ್ವದ ಬೆನ್ನಲ್ಲೇ ಬದಲಾಯ್ತು ಅದೃಷ್ಠ, 99 ರನ್ ಸಿಡಿಸಿದ ರುತರಾಜ್ !

ಸಾರಾಂಶ

ಚೆನ್ನೈಗೆ ಅದೃಷ್ಟ ತಂದ ಧೋನಿ ನಾಯಕತ್ವ ರುತುರಾಜ್ ಗಾಯಕ್ವಾಡ್ ಆಕರ್ಷಕ ಶತಕ ಹೈದರಾಬಾದ್ ವಿರುದ್ಧ ಅಬ್ಬರಿಸಿದ ರುತುರಾಜ್

ಪುಣೆ(ಮೇ.01): ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎಂ.ಎಸ್.ಧೋನಿ ನಾಯಕನಾಗಿ ಮರಳುವುದರ ಜೊತೆಗೆ ಅದೃಷ್ಟವೂ ಬದಲಾಗಿದೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಆರಂಭಿಕ ರುತುರಾಜ್ ಗಾಯಕ್ವಾಡ್ ಆರ್ಷಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.  ಈ ಮೂಲಕ ಚೆನ್ನೈ ಬೃಹತ್ ಮೊತ್ತದತ್ತ ದಾಪುಲಾಗಿಲಿಟ್ಟಿದೆ

57 ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ 99 ರನ್ ಸಿಡಿಸಿದರು. ಕೇವಲ 1 ರನ್‌ಗಳಿಂದ ಶತಕ ಮಿಸ್ ಮಾಡಿಕೊಂಡರು. ರುತುರಾಜ್ 6 ಬೌಂಡರಿ ಹಾಗೂ 6 ಸಿಕ್ಸರ್ ಸಿಡಿಸಿದರು. ಟಿ ನಟರಾಜನ್ ಸಿಎಸ್‌ಕೆ ತಂಡದ ರುತುರಾಜ್ ವಿಕೆಟ್ ಕಬಳಿಸಿ ಮಿಂಚಿದರು. ಇದರೊಂದಿಗೆ ರುತುರಾಜ್ ಶತಕದಿಂದ ವಂಚಿತರಾದರು.

ಚೆನ್ನೈಗೆ ಧೋನಿ ಸಾರಥ್ಯ
12 ಐಪಿಎಲ್‌ ಆವೃತ್ತಿಗಳಲ್ಲಿ 4 ಬಾರಿ ಚೆನ್ನೈ ಸೂಪರ್‌ ಕಿಂಗ್‌್ಸ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಎಂ.ಎಸ್‌.ಧೋನಿ ಮತ್ತೊಮ್ಮೆ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಸಹ ಆಟಗಾರ ರವೀಂದ್ರ ಜಡೇಜಾಗೆ ನಾಯಕತ್ವದ ಹೊಣೆ ಹಸ್ತಾಂತರಿಸಿದ್ದರೂ, ಸತತ ಸೋಲುಗಳ ಬಳಿಕ ಜಡೇಜಾ ಶನಿವಾರ ನಾಯಕತ್ವ ತ್ಯಜಿಸಲು ನಿರ್ಧರಿಸಿದ್ದು, ಧೋನಿ ಮತ್ತೊಮ್ಮೆ ನಾಯಕನಾಗಿ ಮುಂದುವರಿಯಲು ಒಪ್ಪಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿದ ಚೆನ್ನೈ, ‘ತಮ್ಮ ಆಟದತ್ತ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಜಡೇಜಾ ನಾಯಕತ್ವವನ್ನು ಮರಳಿ ಧೋನಿಗೆ ನೀಡಲು ನಿರ್ಧರಿಸಿದ್ದಾರೆ. ಧೋನಿ ಇದಕ್ಕೆ ಒಪ್ಪಿದ್ದು, ಮುಂದೆ ತಂಡದ ನಾಯಕತ್ವ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದೆ. ಜಡೇಜಾ ನಾಯಕತ್ವದಲ್ಲಿ ತಂಡ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿದೆ.

ಧೋನಿ ಐಪಿಎಲ್‌ ಹಾಗೂ ಚಾಂಪಿಯನ್ಸ್‌ ಲೀಗ್‌ ಟಿ20ಯಲ್ಲಿ ಒಟ್ಟಾರೆ 213 ಪಂದ್ಯಗಳಲ್ಲಿ ಚೆನ್ನೈ ನಾಯಕತ್ವ ವಹಿಸಿದ್ದರು. ಈ ಪೈಕಿ 130 ಪಂದ್ಯಗಳಲ್ಲಿ ಗೆದ್ದಿದ್ದರೆ, 81 ಪಂದ್ಯಗಳಲ್ಲಿ ಸೋಲನುಭವಿಸಿದೆ. 2010, 2011, 2018 ಹಾಗೂ 2021ರಲ್ಲಿ ಚೆನ್ನೈ ಐಪಿಎಲ್‌ ಚಾಂಪಿಯನ್‌ ಪಟ್ಟಅಲಂಕರಿಸಿತ್ತು. 2008, 2012, 2013, 2015 ಹಾಗೂ 2019ರಲ್ಲಿ ರನ್ನರ್‌-ಅಪ್‌ ಆಗಿತ್ತು.

ಧೋನಿ ಆಟಕ್ಕೆ ಮಾಜಿ, ಹಾಲಿ ಕ್ರಿಕೆಟಿಗರ ಪ್ರಶಂಸೆ!
ತಮ್ಮ ಅಮೋಘ ಆಟದಿಂದ ಮುಂಬೈ ವಿರುದ್ಧ ಚೆನ್ನೈ ರೋಚಕ ಗೆಲುವು ಸಾಧಿಸಲು ನೆರವಾದ ಎಂ.ಎಸ್‌.ಧೋನಿ ಅವರನ್ನು ಮಾಜಿ, ಹಾಲಿ ಕ್ರಿಕೆಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 41ನೇ ವಯಸ್ಸಿನಲ್ಲೂ ಸ್ಫೋಟಕ ಆಟವಾಡುತ್ತ ತಂಡವನ್ನು ಜಯದ ದಡ ಸೇರಿಸುವ ಅವರ ಕಲೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ‘ಓಂ ಫಿನಿಶಾಯ ನಮಃ’ ಎಂದು ಟ್ವೀಟಿಸಿ ಧೋನಿಯನ್ನು ಕೊಂಡಾಡಿದರೆ, ‘ಧೋನಿ ನಿವೃತ್ತಿ ವಾಪಸ್‌ ಪಡೆದು ಟಿ20 ವಿಶ್ವಕಪ್‌ ತಂಡದಲ್ಲಿ ಆಡಬೇಕು’ ಎಂದು ಆರ್‌.ಪಿ.ಸಿಂಗ್‌ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಧೋನಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮುಂಬೈ ಪ್ಲೇಆಫ್‌ ಆಸೆ ಫಿನಿಶ್‌ ಮಾಡಿದ ಧೋನಿ!

ಧೋನಿ ಕ್ರೀಸ್‌ನಲ್ಲಿರುವವರೆಗೂ ಯೋಚನೆ ಇಲ್ಲ. ಇದು ಅವರಾಡುವ ತಂಡಗಳ ನಂಬಿಕೆ. ಬಹುತೇಕ ಸಮಯಗಳಲ್ಲಿ ತಮ್ಮ ಮೇಲೆ ತಂಡವಿಟ್ಟಿರುವ ನಂಬಿಕೆಯನ್ನು ಧೋನಿ ಉಳಿಸಿಕೊಳ್ಳುತ್ತಾರೆ. ಗುರುವಾರ ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯವೂ ಇದಕ್ಕೆ ಭಿನ್ನವಾಗಿರಲಿಲ್ಲ. ಧೋನಿಯ ಲೆಕ್ಕಾಚಾರದ ಬ್ಯಾಟಿಂಗ್‌, ಚೆನ್ನೈ ಸೂಪರ್‌ ಕಿಂಗ್‌್ಸಗೆ 3 ವಿಕೆಟ್‌ಗಳ ರೋಚಕ ಗೆಲುವು ತಂದುಕೊಟ್ಟಿತು.

ಸತತ 7ನೇ ಸೋಲಿನೊಂದಿಗೆ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. 7 ಪಂದ್ಯಗಳಲ್ಲಿ 2 ಗೆಲುವು ಕಂಡಿರುವ ಚೆನ್ನೈ, ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 6ರಲ್ಲಿ ಗೆದ್ದರೆ ಪ್ಲೇ-ಆಫ್‌ಗೇರುವ ಅವಕಾಶ ಸಿಗಬಹುದು. ಈ ಲೆಕ್ಕಾಚಾರದ ಪ್ರಕಾರ ಚೆನ್ನೈನ ಪ್ಲೇ-ಆಫ್‌ ಆಸೆ ಇನ್ನೂ ಜೀವಂತವಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌