IPL 2022 ಚೆನ್ನೈ ವಿರುದ್ಧ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್, ರಶೀದ್ ಖಾನ್‌ಗೆ ನಾಯಕತ್ವ!

Published : Apr 17, 2022, 07:02 PM ISTUpdated : Apr 17, 2022, 07:19 PM IST
IPL 2022 ಚೆನ್ನೈ ವಿರುದ್ಧ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್, ರಶೀದ್ ಖಾನ್‌ಗೆ ನಾಯಕತ್ವ!

ಸಾರಾಂಶ

ಗುಜರಾತ್ ಹಾಗೂ ಚೆನ್ನೈ ನಡುವಿನ ಲೀಗ್ ಪಂದ್ಯ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಪುಣೆಯಲ್ಲಿ ನಡೆಯುತ್ತಿರುವ ಪಂದ್ಯ  

ಪುಣೆ(ಏ.17): ಇದುವರೆಗೆ ಒಂದು ಗೆಲುವು ದಾಖಲಿಸಿ 9ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ನಡುವಿನ ಹೋರಾಟ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಗುಜರಾತ್ ಟೈಟಾನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗುಜರಾತ್ ಟೈಟಾನ್ಸ್ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ನಾಯಕ ಹಾರ್ದಿಕ್ ಪಾಂಡ್ಯ ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಾರ್ದಿಕ್ ಬದಲು ರಶೀದ್ ಖಾನ್ ತಂಡ ಮುನ್ನಡೆಸುತ್ತಿದ್ದಾರೆ. ಇನ್ನು ಮ್ಯಾಥ್ಯೂ ವೇಡ್ ಬದಲು ವೃದ್ಧಿಮಾನ್ ಸಾಹ ತಂಡ ಸೇರಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ 11
ವೃದ್ಧಿಮಾನ್ ಸಾಹ, ಶುಭಮನ್ ಗಿಲ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ಟ್ವಿಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲ್ಯೂಕಿ ಫರ್ಗ್ಯೂಸನ್, ಯಶ್ ದಯಾಳ್, ಮೊಹಮ್ಮದ್ ಶಮಿ

IPL 2022 ಪಂಜಾಬ್‌ ಮಣಿಸಿ 4ನೇ ಸ್ಥಾನಕ್ಕೇರಿದ ಸನ್‌ರೈಸರ್ಸ್ ಹೈದರಾಬಾದ್!

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11
ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಆಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ(ನಾಯಕ), ಎಂ.ಎಸ್.ದೋನಿ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡನ್, ಮಹೇಶ್ ತೀಕ್ಷನಾ,  ಮುಕೇಶ್ ಚೌಧರಿ

ಪುಣೆ ಕ್ರೀಡಾಂಗಣದಲ್ಲಿನ ವಿಶೇಷತೆ ಅಂದರೆ 5 ಪಂದ್ಯಗಳ ಪೈಕಿ 3 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ದಾಖಲಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್‌‌ಗಳು ಹೆಚ್ಚಿನ ಪ್ರಾಬಲ್ಯ ಸಾಧಿಸಿದ್ದಾರೆ. ಪುಣೆ ಕ್ರೀಡಾಂಗಣದಲ್ಲಿ ಆಡಿದ 8 ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 6ರಲ್ಲಿ ಗೆಲುವು ದಾಖಲಿಸಿದೆ.

ಅದ್ಭುತ ಪ್ರದರ್ಶನ ಮೂಲಕ ಪಾದಾರ್ಪಣೆ ಟೂರ್ನಿಯಲ್ಲೇ ಮಿಂಚುತ್ತಿರುವ ಗುಜರಾತ್‌ ಟೈಟಾನ್ಸ್‌ ಭಾನುವಾರ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್‌್ಸ ವಿರುದ್ಧ ಸೆಣಸಾಡಲಿದ್ದು, ಮತ್ತೊಂದು ಗೆಲುವಿನ ಮೂಲಕ ಅಗ್ರಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದೆ.

IPL 2022: ಹಾರ್ದಿಕ್ ಪಾಂಡ್ಯನಿಂದ ಬಿಸಿಸಿಐಗೆ 30 ಲಕ್ಷ ಲಾಸ್

ಇದು ನೂತನ ನಾಯಕರಾಗಿರುವ, ತಾರಾ ಆಲ್ರೌಂಡರ್‌ಗಳಾದ ರವೀಂದ್ರ ಜಡೇಜಾ ಮತ್ತು ಹಾರ್ದಿಕ್‌ ಪಾಂಡ್ಯ ನಡುವಿನ ಹಣಾಹಣಿ ಎನಿಸಿಕೊಂಡಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಗುಜರಾತ್‌ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದರೆ, ಚೆನ್ನೈ ಆರಂಭಿಕ 4 ಪಂದ್ಯಗಳನ್ನು ಸೋತರೂ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗೆದ್ದು ಉತ್ಸಾದಲ್ಲಿದೆ. ಆದರೆ, ಚೆನ್ನೈಗೆ ಹೋಲಿಕೆ ಮಾಡಿದರೆ ಗುಜರಾತ್‌ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಹಾರ್ದಿಕ್‌ ಉತ್ತಮ ಫಾಮ್‌ರ್‍ನಲ್ಲಿದ್ದು ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಮಿಂಚುತ್ತಿದ್ದಾರೆ. ಅಭಿನವ್‌, ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯಾ ಬ್ಯಾಟಿಂಗ್‌ ಬಲವಾಗಿದ್ದರೆ, ರಶೀದ್‌ ಖಾನ್‌, ಫಗ್ರ್ಯೂಸನ್‌, ಶಮಿ ಬೌಲಿಂಗ್‌ ವಿಭಾಗದ ಪ್ರಮುಖ ಅಸ್ತ್ರಗಳಾಗಿದ್ದಾರೆ.

ಅತ್ತ ಚೆನ್ನೈ ತಂಡದಲ್ಲಿ ಉತ್ತಪ್ಪ, ದುಬೆ ಉತ್ತಮ ಫಾಮ್‌ರ್‍ನಲ್ಲಿದ್ದು, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರುತ್ತಿಲ್ಲ. ಕಳೆದ ಆವೃತ್ತಿಯ ಗರಿಷ್ಠ ರನ್‌ ಸರದಾರ ಇನ್ನಷ್ಟೇ ಲಯಕ್ಕೆ ಮರಳಬೇಕಿದ್ದು, ಮೋಯಿನ್‌ ಅಲಿ, ಜಡೇಜಾ, ಎಂ.ಎಸ್‌.ಧೋನಿ ಬ್ಯಾಟ್‌ನಿಂದ ದೊಡ್ಡ ಹೊಡೆತಗಳು ಕಂಡುಬರುತ್ತಿಲ್ಲ. ಇನ್ನು ದೀಪಕ್‌ ಚಾಹರ್‌ ಅಲಭ್ಯತೆ ತಂಡವನ್ನು ಬಹುವಾಗಿ ಕಾಡುತ್ತಿದ್ದು, ಇದನ್ನು ನಿಭಾಯಿಸುವ ಸವಾಲು ಬೌಲರ್‌ಗಳ ಮುಂದಿದೆ. ಯುವ ವೇಗಿ ಮುಖೇಶ್‌ ದುಬಾರಿಯಾಗುತ್ತಿದ್ದು, ಅವರ ಬದಲು ತುಷಾರ್‌ ದೇಶಪಾಂಡೆ ಸ್ಥಾನ ಗಿಟ್ಟಿಸುವ ನಿರೀಕ್ಷೆಯಲ್ಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20 ಕ್ರಿಕೆಟ್‌ನಲ್ಲಿ ಅತಿವೇಗದ 5000 ರನ್! ರಸೆಲ್, ಟಿಮ್ ಡೇವಿಡ್‌ರನ್ನೇ ಹಿಂದಿಕ್ಕಿದ ಅಭಿಷೇಕ್ ಶರ್ಮಾ!
ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು