DC vs RR: ಅಂಪೈರ್ ವಿವಾದಾತ್ಮಕ No ball ತೀರ್ಪಿಗೆ ಅಸಮಾಧಾನ ಹೊರಹಾಕಿದ ರಿಷಭ್ ಪಂತ್

By Naveen Kodase  |  First Published Apr 23, 2022, 1:04 PM IST

* ರಾಜಸ್ಥಾನ ರಾಯಲ್ಸ್‌ ಎದುರು ರೋಚಕ ಸೋಲು ಕಂಡ ಡೆಲ್ಲಿ ಕ್ಯಾಪಿಟಲ್ಸ್

* ಕೊನೆಯ ಓವರ್‌ನಲ್ಲಿ ಅಂಪೈರ್ ನೀಡಿದ ತೀರ್ಪಿನ ಬಗ್ಗೆ ರಿಷಭ್ ಪಂತ್ ಅಸಮಾಧಾನ

* ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 15 ರನ್‌ಗಳ ರೋಚಕ ಸೋಲು


ಮುಂಬೈ(ಏ.23): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 34ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಎದುರು ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು 15 ರನ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದ ಕೊನೆಯ ಓವರ್‌ನಲ್ಲಿ ಅಂಪೈರ್ ನೀಡಿದ ತೀರ್ಪೊಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ (Rishabh Pant), ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೊನೆಯ ಓವರ್‌ನಲ್ಲಿ ಗೆಲ್ಲಲು ಬರೋಬ್ಬರಿ 36 ರನ್‌ಗಳ ಅಗತ್ಯವಿತ್ತು. ವೆಸ್ಟ್ ಇಂಡೀಸ್‌ನ ರೋಮನ್ ಪೋವೆಲ್(ಬ್ಯಾಟಿಂಗ್) ಹಾಗೂ ಓಬೆಡ್ ಮೆಕಾಯ್ (ಬೌಲಿಂಗ್) ಮುಖಾಮುಖಿಯಾಗಿದ್ದರು. ರೋಮನ್ ಪೋವೆಲ್ ಮೊದಲ ಮೂರು ಎಸೆತಗಳಲ್ಲಿ ಅಮೋಘ ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದರು. ಆದರೆ ಮೆಕಾಯ್ ಎಸೆದ ಮೂರನೇ ಎಸೆತವು ಮೇಲ್ನೋಟಕ್ಕೆ ನೋ ಬಾಲ್(ಹೈ ಪುಲ್‌ಟಾಸ್) ಎನ್ನುವಂತೆ ಕಂಡು ಬಂದಿತು. ಆದರೆ ಅಂಪೈರ್ ಅದನ್ನು ನೋಬಾಲ್ ನೀಡದೇ ಇರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

Tap to resize

Latest Videos

ಮೈದಾನದಲ್ಲಿದ್ದ ಅಂಪೈರ್, ಈ ಎಸೆತವನ್ನು ಲೀಗಲ್ ಎಸೆತವೆಂದೇ ಪರಿಗಣಿಸಿದರು. ಮೂರನೇ ಎಸೆತವನ್ನು ನೋ ಬಾಲ್‌ ನೀಡಬೇಕೆಂದು ಡಗೌಟ್‌ ನೀಡಬೇಕು ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಆಗ್ರಹಿಸಿತು. ಪರಿಸ್ಥಿತಿ ಯಾವ ರೀತಿ ಬದಲಾಯಿತೆಂದರೆ ಒಂದು ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ರಿಷಭ್ ಪಂತ್, ಬ್ಯಾಟರ್‌ಗಳನ್ನು ವಾಪಾಸ್ ಕರೆಸಿಕೊಳ್ಳುವ ಸನ್ನೆಯನ್ನು ಮಾಡಿದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ಸಹಾಯಕ ಕೋಚ್ ಪ್ರವೀಣ್ ಆಮ್ರೆ, ಮೈದಾನ ಪ್ರವೇಶಿಸಿ ನೋ ಬಾಲ್‌ ನೀಡುವಂತೆ ಅಂಪೈರ್‌ಗೆ ಮನವಿ ಮಾಡಿಕೊಂಡರು. 

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ರಿಷಭ್ ಪಂತ್, ಅಂಪೈರ್ ನಿರ್ಣಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನನ್ನ ಪ್ರಕಾರ, ಅವರು ಉತ್ತಮವಾಗಿಯೇ ಬೌಲಿಂಗ್ ಮಾಡಿದರು. ಪೋವೆಲ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗೆಲುವಿನ ಆಸೆ ಮೂಡಿಸಿದರು. ನನ್ನ ಪ್ರಕಾರ ಅದು ನೋ ಬಾಲ್‌ ಆಗಿತ್ತು. ಅದು ಮಹತ್ವದ ತೀರ್ಮಾನವಾಗಿತ್ತು. ಆದರೆ ಈ ತೀರ್ಮಾನ ನಮ್ಮ ಕೈಯಲಿಲ್ಲವಲ್ಲ. ಈ ತೀರ್ಪು ಅಸಮಾಧಾನ ಮೂಡಿಸಿತು. ಡಗೌಟ್‌ನಲ್ಲಿದ್ದ ಎಲ್ಲರಿಗೂ ಅಂಪೈರ್ ಅವರ ತೀರ್ಪು ಬೇಸರ ಮೂಡಿಸಿತು. ಇಂತಹ ಸಂದರ್ಭದಲ್ಲಿ ಥರ್ಡ್‌ ಅಂಪೈರ್ ಮಧ್ಯ ಪ್ರವೇಶಿಸಬೇಕಿತ್ತು ಎಂದು ರಿಷಭ್ ಪಂತ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

IPL 2022: ಕುಸಿದಿರುವ ಕೆಕೆಆರ್‌ಗಿಂದು ಬಲಿಷ್ಠ ಗುಜರಾತ್ ಟೈಟಾನ್ಸ್ ಸವಾಲು

ಮೈದಾನಕ್ಕೆ ಸಹಾಯಕ ಕೋಚ್ ಪ್ರವೀಣ್ ಆಮ್ರೆ ಅವರನ್ನು ಕಳಿಸಿದ್ದು ಸರಿಯಲ್ಲ. ಆ ಡಗೌಟ್‌ನಲ್ಲಿ ಹೀಟ್‌ನಲ್ಲಿ ಕೋಚ್ ಮೈದಾನ ಪ್ರವೇಶಿಸಿದರು. ಐಪಿಎಲ್‌ನಂತ ಟೂರ್ನಿಯಲ್ಲಿ ಉತ್ತಮ ಅಂಪೈರಿಂಗ್‌ ನಿರೀಕ್ಷಿಸುತ್ತೇವೆ. ನಾನು ನಮ್ಮ ಆಟಗಾರರಿಗೆ ತಲೆ ಎತ್ತಿ ನಡೆಯಿರಿ, ಮುಂದಿನ ಪಂದ್ಯಕ್ಕೆ ಸಜ್ಜಾಗಿ ಎಂದು ಹೇಳಿದ್ದೇನೆ ಎಂದು ರಿಷಭ್ ಪಂತ್ ಹೇಳಿದ್ದಾರೆ.   

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡವು ಜೋಸ್ ಬಟ್ಲರ್ (Jos Buttler) ಬಾರಿಸಿದ ಆಕರ್ಷಕ ಶತಕ(116) ಹಾಗೂ ದೇವದತ್ ಪಡಿಕ್ಕಲ್‌(54) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 2 ವಿಕೆಟ್ ಕಳೆದುಕೊಂಡು 222 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 8 ವಿಕೆಟ್ ಕಳೆದುಕೊಂಡು 207  ರನ್ ಗಳಿಸಲಷ್ಟೇ ಶಕ್ತವಾಯಿತು. 
 

click me!