IPL 2022 ಟಾಸ್ ಗೆದ್ದ ಸನ್ ರೈಸರ್ಸ್ ಫೀಲ್ಡಿಂಗ್ ಆಯ್ಕೆ

By Santosh NaikFirst Published Apr 23, 2022, 7:07 PM IST
Highlights

ಸತತ ಗೆಲುವಿನ ಓಟದಲ್ಲಿರುವ ಎರಡು ತಂಡಗಳಾಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಮುಂಬೈ (ಏ.23): ದಕ್ಷಿಣದ ಪ್ರಮುಖ ತಂಡದಗಳಾದ ಸನ್ ರೈಸರ್ಸ್ ಹೈದರಾಬಾದ್ (SunRisers Hyderbad) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು 15ನೇ ಅವೃತ್ತಿಯ ಐಪಿಎಲ್ ನಲ್ಲಿ(IPL 2022) ಕಾದಾಟ ನಡೆಸಲಿದೆ. ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಆರ್ ಸಿಬಿ (RCB) ಪ್ಲೇಯಿಂಗ್ ಇಲೆವೆನ್: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿ.ಕೀ), ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್

Latest Videos

ಸನ್ ರೈಸರ್ಸ್ ಪ್ಲೇಯಿಂಗ್ ಇಲೆವೆನ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್ (ವಿ.ಕೀ), ಶಶಾಂಕ್ ಸಿಂಗ್, ಜೆ.ಸುಚಿತ್, ಭುವನೇಶ್ವರ್ ಕುಮಾರ್, ಮಾರ್ಕೊ ಜಾನ್ಸೆನ್, ಉಮ್ರಾನ್ ಮಲಿಕ್, ಟಿ ನಟರಾಜನ್

7 ಪಂದ್ಯಗಳನ್ನು ಆಡಿರುವ ಆರ್ ಸಿಬಿ ತಂಡ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. 5 ಗೆಲುವು ಹಾಗೂ 2 ಸೋಲುಗಳನ್ನು ತಂಡ ಕಂಡಿದೆ. ಕಳೆದ ಎರಡು ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ವಿರುದ್ಧ ಗೆಲುವು ಸಾಧಿಸಿದೆ. ಇನ್ನೊಂದೆಡೆ ಸನ್ ರೈಸರ್ಸ್ ಹೈದರಾಬಾದ್ ತಂಡ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲುಗಳನ್ನು ತಂಡ ಕಂಡಿದೆ. ಏಪ್ರಿಲ್ 4 ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲು ಕಂಡ ಬಳಿಕ ಆಡಿದ ನಾಲ್ಕು ಪಂದ್ಯಗಳಲ್ಲಿ ಕ್ರಮವಾಗಿ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಕೋಲ್ಕತ ನೈಟ್ ರೈಡರ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದೆ.

ಏನನ್ನು ನಿರೀಕ್ಷೆ ಮಾಡಬಹುದು: ಐಪಿಎಲ್ ಪಂದ್ಯಗಳು ನಡೆಯುತ್ತಿರುವ ಇತರ ಎಲ್ಲಾ ಸ್ಟ್ರೇಡಿಯಂಗಳಿಗೆ ಹೋಲಿಸಿದರೆ, ಬ್ರಬೋರ್ನ್ ಸ್ಟೇಡಿಯಂ ಚಿಕ್ಕದು. ಅದಲ್ಲದೆ, ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಗಳು ಇಲ್ಲಿರವ ಕಾರಣ ಪಂದ್ಯದಲ್ಲಿ ದೊಡ್ಡ ಮೊತ್ತ ನಿರೀಕ್ಷೆ ಮಾಡಬಹುದು. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಮುಖಾಮುಖಿಯನ್ನು ಗಮನಿಸಿದರೆ, ಸ್ಪಿನ್ನರ್ ಗಳಿಗೆ ಕೊಂಚ ಸಹಾಯವನ್ನು ಈ ಪಿಚ್ ನೀಡಲಿದೆ.

ನಿಮಗಿದು ಗೊತ್ತೇ:
* ಆರ್ ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ವೇಗದ ಬೌಲಿಂಗ್ ಗಿಂತ ಸ್ಪಿನ್ ಬೌಲಿಂಗ್ ನಲ್ಲಿ ಈ ಬಾರಿ ಅದ್ಭುತ ದಾಖಲೆ ಹೊಂದಿದ್ದಾರೆ. ಈ ಋತುವಿನಲ್ಲಿ ವೇಗಿಗಳಿಗೆ ಐದು ಅವರು ಔಟ್ ಆಗಿದ್ದರೆ, 121ರ ಸ್ಟ್ರೈಕ್ ರೇಟ್ ನಲ್ಲಿ ವೇಗಿಗಳ ಎಸೆತಗಳನ್ನು ಎದುರಿಸಿದ್ದಾರೆ. ಇನ್ನು ಸ್ಪಿನ್ ಬೌಲರ್ ಗಳ ವಿರುದ್ಧ ಎರಡು ಬಾರಿ ವಿಕೆಟ್ ಒಪ್ಪಿಸಿದ್ದಾರೆ.

20ನೇ ಓವರ್​​​​ನಲ್ಲಿ ಧೋನಿಗೆ ಧೋನಿಯೇ ಸರಿಸಾಟಿ..!

* 7 ರಿಂದ 15 ಓವರ್ ಗಳ ನಡುವಿನ ಮಧ್ಯಮ ಓವರ್ ಗಳಲ್ಲಿ ಸನ್ ರೈಸರ್ಸ್ ತಂಡ ಅತೀ ಕಡಿಮೆ ಬಾರಿಗೆ ಸ್ಪಿನ್ ಬೌಲರ್ ಗಳನ್ನು ಈ ಋತುವಿನಲ್ಲಿ ಬಳಸಿಕೊಂಡಿದೆ. ಈ ಅವಧಿಯಲ್ಲಿ ಸನ್ ರೈಸರ್ಸ್ ತಂಡದ ಸ್ಪಿನ್ನರ್ ಗಳು ಕೇವಲ 2 ವಿಕೆಟ್ ಉರುಳಿಸಿದ್ದಾರೆ.

IPL 2022: ಮುಂಬೈ ಪರ ಮಿಂಚಿದ ಹೃತಿಕ್ ಶೋಕೀನ್ ಯಾರು ಗೊತ್ತಾ..?

* ಸನ್ ರೈಸರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಈ ಐಪಿಎಲ್ ನಲ್ಲಿ ಅದ್ಭುತವಾಗಿದೆ. ತಂಡದ 3 ರಿಂದ 6ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಸರಾಸರಿ 59ರಲ್ಲಿ ರನ್ ಬಾರಿಸಿದ್ದಾರೆ. ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಮ್ ಹಾಗೂ ನಿಕೋಲಸ್ ಪೂರನ್ ಜೋಡಿ ಯಶ ಕಂಡಂತಾಗಿದೆ.

click me!