* ವಯಸ್ಸು 40 ಆದರೂ ಹಳೆ ಖದರ್ ಉಳಿಸಿಕೊಂಡ ಎಂ ಎಸ್ ಧೋನಿ
* ಮಹಿನೇ ದಿ ಬೆಸ್ಟ್ ಮ್ಯಾಚ್ ಫಿನಿಶರ್
* ಮುಂಬೈ ಇಂಡಿಯನ್ಸ್ ವಿರುದ್ಧವೂ ಸಿಎಸ್ಕೆ ಪರ ಮ್ಯಾಚ್ ಫಿನಿಶ್ ಮಾಡಿದ್ದು ಇದೇ ಧೋನಿ
ಬೆಂಗಳೂರು(ಏ.23): ಮಹೇಂದ್ರ ಸಿಂಗ್ ಧೋನಿ (MS Dhoni). ಕ್ರಿಕೆಟ್ ಜಗತ್ತು ಕಂಡ ಗ್ರೇಟ್ ಫಿನಿಶರ್. ಇತ್ತೀಚಿನ ವರ್ಷಗಳಲ್ಲಿ ಎಂ ಎಸ್ ಧೋನಿ ಮಾಡಿರೋವಷ್ಟು ಮ್ಯಾಚ್ ಫಿನಿಶ್ಗಳನ್ನ ಬೇರೆ ಯಾರೂ ಮಾಡಿಲ್ಲ. ಇಂಟರ್ ನ್ಯಾಷನಲ್ ಕ್ರಿಕೆಟ್ ಇರಲಿ, ಐಪಿಎಲ್ ಇರಲಿ. ಮಹಿನೇ ದಿ ಬೆಸ್ಟ್ ಮ್ಯಾಚ್ ಫಿನಿಶರ್. ಟೀಂ ಇಂಡಿಯಾಗೆ (Team India) ಕೊನೆ ಓವರ್, ಕೊನೆ ಬಾಲ್ನಲ್ಲಿ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಬೌಂಡ್ರಿ, ಸಿಕ್ಸರ್ಗಳನ್ನ ಸಿಡಿಸೋ ಮೂಲ್ಕ ಮ್ಯಾಚ್ ಫಿನಿಶ್ ಮಾಡಿದ್ದಾರೆ. ಕೊನೆ ಓವರ್ ವರೆಗೂ ಅವರು ಕ್ರೀಸಿನಲ್ಲಿ ಇದ್ದಾರೆ ಅಂದ್ರೆ ಭಾರತಕ್ಕೆ ಗೆಲುವು ಪಕ್ಕಾ ಅಂತಲೇ ಹೇಳಲಾಗ್ತಿತ್ತು. ಹಾಗೆ ಗೆಲ್ಲಿಸಿಕೊಟ್ಟಿದ್ದಾರೆ ಕೂಡ.
ಮೊನ್ನೆ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧವೂ ಸಿಎಸ್ಕೆ ಪರ ಮ್ಯಾಚ್ ಫಿನಿಶ್ ಮಾಡಿದ್ದು ಇದೇ ಧೋನಿ. ಸಿಎಸ್ಕೆ ಗೆಲುವಿಗೆ ಕೊನೆ 4 ಬಾಲ್ನಲ್ಲಿ 16 ರನ್ ಬೇಕಿತ್ತು. ಕ್ರೀಸಿನಲ್ಲಿದ್ದ ಮಹಿ, ಎರಡು ಬೌಂಡ್ರಿ, ಒಂದು ಸಿಕ್ಸ್ ಸಿಡಿಸಿದ್ರು. ಕೊನೆ ಬಾಲ್ನಲ್ಲಿ ಬೌಂಡರಿ ಬಾರಿಸೋ ಮೂಲಕ ಮ್ಯಾಚ್ ಫಿನಿಶ್ ಮಾಡಿದ್ರು. ಆ ಮ್ಯಾಚ್ ಫಿನಿಶ್ ಮಾಡುತ್ತಿದಂತೆ ಧೋನಿ ಸಖತ್ ವೈರಲ್ ಆದ್ರು. ಯಾಕೆ ಗೊತ್ತಾ..? ಗ್ರೇಟ್ ಫಿನಿಶರ್ ಅಂತ.
20ನೇ ಓವರ್ನಲ್ಲಿ ಧೋನಿ ಸ್ಟ್ರೈಕ್ರೇಟ್ 246:
ಐಪಿಎಲ್ನಲ್ಲಿ (IPL) ಧೋನಿಯೇ ಬೆಸ್ಟ್ ಫಿನಿಶರ್. ಹಾಗಾಗಿ ಡೆತ್ ಓವರ್ಗಳಲ್ಲಿ ಅಂದರೆ 15ರಿಂದ 20ನೇ ಓವರ್ ವರೆಗೂ ಅವರೇ ಗರಿಷ್ಠ ರನ್ ಸರದಾರ. ಅದರಲ್ಲೂ 20ನೇ ಓವರ್ನಲ್ಲಿ ಅವರನ್ನ ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟ. ಐಪಿಎಲ್ ಟೂರ್ನಿಯಲ್ಲಿ 20ನೇ ಓವರ್ನಲ್ಲಿ 246.36ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬಿಸಿರೋ ಧೋನಿ, 48 ಬೌಂಡರಿ, 51 ಸಿಕ್ಸರ್ಗಳನ್ನ ಸಿಡಿಸಿದ್ದಾರೆ. ಕೇವಲ 261 ಬಾಲ್ನಲ್ಲಿ 643 ರನ್ಗಳನ್ನೂ ಬಾರಿಸಿದ್ದಾರೆ. 20ನೇ ಓವರ್ನಲ್ಲಿ ಧೋನಿಯೇ ಕಿಂಗ್.
ಕೊನೆ ಬಾಲ್ನಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಸಿಎಸ್ಕೆ:
ಐಪಿಎಲ್ ಇತಿಹಾಸದಲ್ಲೇ ಚೇಸಿಂಗ್ ವೇಳೆ ಕೊನೆಯ ಬಾಲ್ನಲ್ಲಿ ಅತಿಹೆಚ್ಚು ಪಂದ್ಯಗಳನ್ನ ಗೆದ್ದ ದಾಖಲೆಯನ್ನ ಸಿಎಸ್ಕೆ ಮಾಡಿದೆ. ಇದುವರೆಗೂ ಐಪಿಎಲ್ನಲ್ಲಿ ಕೊನೆ ಬಾಲ್ನಲ್ಲಿ ಸಿಎಸ್ಕೆ 8 ಪಂದ್ಯಗಳನ್ನ ಗೆದ್ದಿದೆ. ಚೆನ್ನೈ ಬಿಟ್ಟರೆ ಮುಂಬೈ ಇಂಡಿಯನ್ಸ್ ಕೊನೆ ಎಸೆತದಲ್ಲಿ 6 ಪಂದ್ಯ ಗೆದ್ದಿದೆ. ರಾಜಸ್ತಾನ ರಾಯಲ್ಸ್ 4 ಸಲ, ಪಂಜಾಬ್ ಕಿಂಗ್ಸ್ ಮತ್ತು ಆರ್ಸಿಬಿ ತಲಾ 3 ಬಾರಿ ಕೊನೆ ಬಾಲ್ನಲ್ಲಿ ಪಂದ್ಯ ಗೆದ್ದಿವೆ. ಸಿಎಸ್ಕೆ ಗೆದ್ದಿರೋ 8ರಲ್ಲಿ ಬಹುತೇಕ ಸಮಯ ಧೋನಿಯೇ ಮ್ಯಾಚ್ ಫಿನಿಶ್ ಮಾಡಿದ್ದಾರೆ.
IPL 2022: ಮುಂಬೈ ಪರ ಮಿಂಚಿದ ಹೃತಿಕ್ ಶೋಕೀನ್ ಯಾರು ಗೊತ್ತಾ..?
ಧೋನಿ ಮ್ಯಾಚ್ ಫಿನಿಶ್ಗೆ ಕ್ರಿಕೆಟ್ ಜಗತ್ತು ಸಲಾಂ..!:
ಸಾರ್ವಕಾಲಿಕ ಲಾಸ್ಟ್ ಬಾಲ್ ಹಿಟ್ಟರ್. ಹೀಗೆ ಧೋನಿ ಹೊಗಳಿ ಟ್ವೀಟ್ ಮಾಡಿರೋದು ಸದಾ ಭಾರತೀಯರನ್ನ ಜರಿಯುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್. ಇದೊಂದು ಟ್ವೀಟ್ ಸಾಕು ಮಹಿ ಗ್ರೇಟ್ ಫಿನಿಶರ್ ಅನ್ನೋದಕ್ಕೆ. ಇವರೊಬ್ಬರೇ ಹಾಲಿ-ಮಾಜಿ ಕ್ರಿಕೆಟಿಗರೆಲ್ಲಾ ಮಹಿ ಬ್ಯಾಟಿಂಗ್ಗೆ ಫಿದಾ ಆಗಿದ್ದಾರೆ. ವಯಸ್ಸು 40 ಪ್ಲಸ್ ಆದ್ರೂ ಧೋನಿ ಖದರ್ ಒಂಚೂರು ಕಮ್ಮಿಯಾಗಿಲ್ಲ. ಅದಕ್ಕೆ ನಾವ್ ಮೊದಲೇ ಹೇಳಿದ್ದು, ಸಿಂಹ ಭೇಟೆಯಾಡೋದನ್ನ ನಿಲ್ಲಿಸೋಲ್ಲ, ಧೋನಿ ಮ್ಯಾಚ್ ಫಿನಿಶ್ ಮಾಡೋದನ್ನ ಬಿಡಲ್ಲ ಅಂತ.