IPL Final ಕನ್ನಡದಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ಮಾತು, ಫೈನಲ್ ಫೈಟ್ ಗೇಮ್ ಪ್ಲಾನ್ ಬಹಿರಂಗ!

By Suvarna NewsFirst Published May 29, 2022, 3:54 PM IST
Highlights
  • ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಫೈಟ್
  • ಫೈನಲ್ ಪಂದ್ಯದ ಗೇಮ್ ಪ್ಲಾನ್ ವಿವರಿಸಿದ ವೇಗಿ ಪ್ರಸಿದ್ಧ್ ಕೃಷ್ಣ 
  • ಅಹಮ್ಮದಾಬಾದ್‌ನಲ್ಲಿ ನಡೆಯಲಿದೆ ಐಪಿಎಲ್ ಫೈನಲ್
     

ಅಹಮ್ಮದಾಬಾದ್(ಮೇ.29): ಐಪಿಎಲ್ 2022 ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ. ರಾಜಸ್ಥಾನ ರಾಯಲ್ಸ್ ತಂಡದ ಕೀ ಪ್ಲೇಯರ್, ಕನ್ನಡಿಗ ಪ್ರಸಿದ್ಧ್ ಕೃಷ್ಣ ಫೈನಲ್ ಫೈಟ್‌ಗೂ ಮೊದಲು ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪ್ರಶಸ್ತಿ ಗೆಲುವಿಗೆ ಪ್ರಸಿದ್ಧ ಕೃಷ್ಣ ತಯಾರಿ ಕುರಿತು ಕನ್ನಡದಲ್ಲೇ ವಿವರಿಸಿದ್ದಾರೆ.

ಸ್ಟಾರ್ ಸ್ಪೋರ್ಸ್ಟ್ 1 ಕನ್ನಡ ವಾಹಿನಿ ಜೊತೆ ಮಾತನಾಡಿದ ಪ್ರಸಿದ್ಧ್ ಕೃಷ್ಣ, ವಿಕೆಟ್ ಪಡೆಯುವುದೇ ನನ್ನ ಮೊದಲ ಆದ್ಯತೆಯಾಗಿದೆ. ವೇಗವಾಗಿ ಬೌಲಿಂಗ್ ಮಾಡಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ತಯಾರಿ ಮಾಡಿಕೊಳ್ಳುತ್ತೇನೆ. ಚೆನ್ನಾಗಿ ಓಡಿ, ಚೆನ್ನಾಗಿ ಬೌಲಿಂಗ್ ಮಾಡಬೇಕು, ವಿಕೆಟ್ ಪಡೆಯಬೇಕು ಅನ್ನೋದೇ ನನ್ನ ಉದ್ದೇಶ ಎಂದು ಮಾಜಿ ವೇಗಿ ವಂಕಟೇಶ್ ಪ್ರಸಾದ್ ಪ್ರಶ್ನೆಗೆ ಉತ್ತರಿಸಿದ್ದಾರೆ.

Latest Videos

IPL 2022: ಆರ್‌ಸಿಬಿ ಸೋಲಿನ ಬೆನ್ನಲ್ಲೇ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ..!

ಬೌಲಿಂಗ್ ವೇಳೆ ಎಲ್ಲಿ ಫೀಲ್ಡಿಂಗ್ ಇರಬೇಕು, ಯಾರು ಎಲ್ಲಿರಬೇಕು ಅನ್ನೋದು ಎಲ್ಲವೂ ನನ್ನ ನಿರ್ಧಾರವಾಗಿದೆ. ಪ್ಲಾನ್ ಬದಲಾಯಿಸಿ ನಾಯಕ ಬೇರೆ ಪ್ಲಾನ್ ಮಾಡಿದ್ದರೆ, ಅವರಿಗೆ ಬೇಕಾದ ಹಾಗೆ ಫೀಲ್ಡಿಂಗ್ ನಿಲ್ಲಿಸುತ್ತಾರೆ. ಆದರೆ ಈ ವಿಚಾರದಲ್ಲಿ ಮೊದಲ ನಿರ್ಧಾರ ನನ್ನದೇ ಆಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ವಿಜಯ್ ಭಾರದ್ವಾಜ್ ಹೇಳಿದ ಪ್ರಶ್ನೆಗೆ ಪ್ರಸಿದ್ಧ್ ಕೃಷ್ಣ ಉತ್ತರಿಸಿದ್ದಾರೆ.

 

ವಿಕೆಟ್ ತಗೋಳೋದೆ ನನ್ನ ಗುರಿ 🔥

ಸ್ಟಾರ್ ಸ್ಪೋರ್ಟ್ಸ್ ಒನ್ ಕನ್ನಡ ವಾಹಿನಿಯೊಂದಿಗೆ ಪ್ರಸಿದ್ಧ್ ಕೃಷ್ಣ ಮಾತು 🙌 pic.twitter.com/bQ5GcRZ4Ra

— Star Sports Kannada (@StarSportsKan)

 

ತೀವ್ರ ಒತ್ತಡದ ಕಾರಣ ಕಳೆದ ಪಂದ್ಯದಲ್ಲಿ ನಿರೀಕ್ಷಿತ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಪಂದ್ಯದ ಬಳಿಕ ಎಲ್ಲಿ ತಪ್ಪಾಯಿತು, ಮುಂದಿನ ಪಂದ್ಯದಲ್ಲಿ ಏನು ಮಾಡುಬೇಕ ಅನ್ನೋದನ್ನು ಪರಾಮರ್ಶಿಸುತ್ತೇನೆ ಎಂದು ಚಿಂತಿಸುತ್ತೇನೆ ಎಂದು ಪ್ರಸಿದ್ಧ್ ಕನ್ನಡದಲ್ಲೇ ತಮ್ಮ ಗೇಮ್ ಪ್ಲಾನ್ ಕುರಿತು ವಿವರಿಸಿದ್ದಾರೆ.

ಐಪಿಎಲ್ ಪ್ರಶಸ್ತಿ ಯಾರಿಗೆ?
ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಯಾರಿಗೆ ಗೆಲುವು ಒಲಿಯಲಿದೆ? ಈ ಕುತೂಹಲ ಹೆಚ್ಚಾಗಿದೆ.  ಗುಜರಾತ್‌ ಚೊಚ್ಚಲ ಪ್ರಯತ್ನದಲ್ಲೇ ಫೈನಲ್‌ ಪ್ರವೇಶಿಸಿ ಭಾರೀ ನಿರೀಕ್ಷೆ ಮೂಡಿಸಿದ್ದು, ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಡಲು ಕಾಯುತ್ತಿದ್ದರೆ, ರಾಜಸ್ಥಾನ 2008ರ ಬಳಿಕ ಮೊದಲ ಸಲ ಫೈನಲ್‌ ಪ್ರವೇಶಿಸಿದ್ದು, 2ನೇ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ.ಈ ಬಾರಿಯ ಫೈನಲ್‌ ಪಂದ್ಯ ಚೆನ್ನೈ, ಮುಂಬೈ ಹಾಗೂ ಆರ್‌ಸಿಬಿ ತಂಡಗಳು ಇಲ್ಲದ 2ನೇ ಫೈನಲ್‌ ಆಗಲಿದೆ. ಇದಕ್ಕೂ ಮೊದಲು 2014ರಲ್ಲಿ ಮಾತ್ರ ಈ ಮೂರು ತಂಡಗಳಿಲ್ಲದೇ ಫೈನಲ್‌ ಪಂದ್ಯ ನಡೆದಿತ್ತು. ಆ ಆವೃತ್ತಿಯಲ್ಲಿ ಕೆಕೆಆರ್‌-ಪಂಜಾಬ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಿದ್ದವು. ಚೆನ್ನೈ ಒಟ್ಟು 9 ಬಾರಿ ಫೈನಲ್‌ನಲ್ಲಿ ಆಡಿದ್ದರೆ, ಮುಂಬೈ ಮತ್ತು ಆರ್‌ಸಿಬಿ ಕ್ರಮವಾಗಿ 6 ಮತ್ತು 3 ಬಾರಿ ಫೈನಲ್‌ನಲ್ಲಿ ಕಾಣಿಸಿಕೊಂಡಿವೆ.

IPL 2022 Final: ಗುಜರಾತ್ ಟೈಟಾನ್ಸ್ vs ರಾಜಸ್ಥಾನ ರಾಯಲ್ಸ್‌ ಫೈನಲ್‌ ಫೈಟ್

ಐಪಿಎಲ್ ಚಾಂಪಿಯನ್ಸ್

2008 ರಾಜಸ್ಥಾನ ರಾಯಲ್ಸ್‌

2009 ಡೆಕ್ಕನ್‌ ಚಾರ್ಜ​ರ್‍ಸ್

2010 ಚೆನ್ನೈ ಸೂಪರ್‌ಕಿಂಗ್‌್ಸ

2011 ಚೆನ್ನೈ ಸೂಪರ್‌ಕಿಂಗ್‌್ಸ

2012 ಕೋಲ್ಕತಾ ನೈಟ್‌ರೈಡ​ರ್‍ಸ್

2013 ಮುಂಬೈ ಇಂಡಿಯನ್ಸ್‌

2014 ಕೋಲ್ಕತಾ ನೈಟ್‌ರೈಡ​ರ್‍ಸ್

2015 ಮುಂಬೈ ಇಂಡಿಯನ್ಸ್‌

2016 ಸನ್‌ರೈಸ​ರ್‍ಸ್ ಹೈದ್ರಾಬಾದ್‌

2017 ಮುಂಬೈ ಇಂಡಿಯನ್ಸ್‌

2018 ಚೆನ್ನೈ ಸೂಪರ್‌ಕಿಂಗ್‌್ಸ

2019 ಮುಂಬೈ ಇಂಡಿಯನ್ಸ್‌

2020 ಮುಂಬೈ ಇಂಡಿಯನ್ಸ್‌

2021 ಚೆನ್ನೈ ಸೂಪರ್‌ಕಿಂಗ್‌್ಸ 

click me!