IPL 2022 ಮತ್ತೆ ಆರ್‌ಸಿಬಿ ಕೈ ಹಿಡಿದ ಪಾಟಿದಾರ್, ರಾಜಸ್ಥಾನಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್!

By Suvarna NewsFirst Published May 27, 2022, 9:16 PM IST
Highlights
  • ಆರ್‌ಸಿಬಿ -ರಾಜಸ್ಥಾನ ಎಲಿಮಿನೇಟರ್ ಪಂದ್ಯ
  • ರಜತ್ ಪಾಟಿದಾರ್ ದಿಟ್ಟ ಪ್ರದರ್ಶನ
  • 8 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿದ ಆರ್‌ಸಿಬಿ

ಅಹಮ್ಮದಾಬಾದ್(ಮೇ.27):  ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೈಹಿಡಿದಿದ್ದು ಮತ್ತೆ ರಜತ್ ಪಾಟಿದಾರ್. ರಜತ್ ಪಾಟಿದಾರ್ ಆಕರ್ಷಕ ಹಾಫ್ ಸೆಂಚುರಿ ನೆರವಿನಿಂದ ಆರ್‌ಸಿಬಿ 8 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿದೆ. 

ಟಾಸ್ ಸೋತು ಬ್ಯಾಟಿಂಗ್ ಇಳಿದ ಆರ್‌ಸಿಬಿ ತಂಡಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಶಾಕ್ ನೀಡಿದರು. ಆರಂಭದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿತು. ಕೊಹ್ಲಿ ಕೇವಲ 7 ರನ್ ಸಿಡಿಸಿ ಔಟಾದರು. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ರಜತ್ ಪಾಟಿದಾರ್ ಜೊತೆಯಾಟದಿಂದ ಆರ್‌ಸಿಬಿ ಚೇತರಿಸಿಕೊಂಡಿತು.

Latest Videos

ಪಾಫ್ ಡುಪ್ಲೆಸಿಸ್ 25 ರನ್ ಸಿಡಿಸಿ ಔಟಾದರು.ಹೋರಾಟ ಮುಂದುವರಿಸಿದ ರಜತ್ ಪಾಟಿದಾರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇದರ ನಡುವೆ ಗ್ಲೆನ್ ಮ್ಯಾಕ್ಸ್‌ವೆಲ್ 24 ರನ್ ಸಿಡಿಸಿ ಔಟಾದರು. ಇತ್ತ ರಜತ್ ಪಾಟಿದಾರ್ 58 ರನ್ ಸಿಡಿಸಿ ಔಟಾದರು.

ಪ್ರಸಿದ್ಧ್ ಕೃಷ್ಣ ದಾಳಿಗೆ ಆರ್‌ಸಿಬಿ ತತ್ತರಿಸಿತು. ಆರ್‌ಸಿಬಿ ಅಬ್ಬರಿಸಲು ಅವಕಾಶವೇ ನೀಡಲಿಲ್ಲ. ಮಹಿಪಾಲ್ ಲೊಮ್ರೊರ್ 8 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ಸಿಕ್ಸರ್ ಮೂಲಕ ಅಬ್ಬರಿಸುವ ದಿನೇಶ್ ಕಾರ್ತಿಕ್ ನಿರಾಸೆ ಅನುಭವಿಸಿದರು. ಕಾರ್ತಿಕ್ 6 ರನ್ ಸಿಡಿಸಿ ಔಟಾದರು. 

ವಾನಿಂಡು ಹಸರಂಗ ಹಾಗೂ ಹರ್ಷಲ್ ಪಟೇಲ್ ಅಬ್ಬರಿಸಲಿಲ್ಲ. ಶಹಬಾಜ್ ಅಹಮ್ಮದ್ ಅಜೇಯ 12 ರನ್ ಸಿಡಿಸಿ ಮಿಂಚಿದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು.

ಕ್ವಾಲಿಫೈಯರ್ 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯ ಉಭಯ ತಂಡಗಳಿಗೆ ಮುಖ್ಯ. ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಪಡೆಯಲಿದೆ. ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. 

ಎಲಿಮಿನೇಟರ್ ಪಂದ್ಯ
ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಖನೌ ಸೂಪರ್ ಜೈಂಟ್ಸ್ ಮಣಿಸಿ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದಿತ್ತು. ರಜತ್ ಪಾಟಿದಾರ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಈ ಮೂಲಕ ಆರ್‌ಸಿಬಿ ಗೆಲುವಿನ ನಗೆ ಬೀರಿತ್ತು.

click me!