IPL 2022 PBKS vs RCB ಕನ್ನಡಿಗ ಮಾಯಾಂಕ್ ನೇತೃತ್ವದ ಪಂಜಾಬ್ ಎದುರು ಆರ್ ಸಿಬಿಗೆ ಸೋಲು!

Published : Mar 27, 2022, 11:23 PM ISTUpdated : Mar 27, 2022, 11:28 PM IST
IPL 2022 PBKS vs RCB ಕನ್ನಡಿಗ ಮಾಯಾಂಕ್ ನೇತೃತ್ವದ ಪಂಜಾಬ್ ಎದುರು ಆರ್ ಸಿಬಿಗೆ ಸೋಲು!

ಸಾರಾಂಶ

205 ರನ್ ಬಾರಿಸಿಯೂ ಸೋಲು ಕಂಡ ಆರ್ ಸಿಬಿ ಪಂಜಾಬ್ ಕಿಂಗ್ಸ್ ತಂಡದಿಂದ ಭರ್ಜರಿ ಬ್ಯಾಟಿಂಗ್ ನೀರಸ ಬೌಲಿಂಗ್ ದಾಳಿ ನಡೆಸಿದ ಫಾಫ್ ಡು ಪ್ಲೆಸಿಸ್ ಟೀಮ್

ಮುಂಬೈ (ಮಾ. 27): ಪ್ರತಿ ಆವೃತ್ತಿಯಲ್ಲೂ ತನ್ನ ದುರ್ಬಲ ಬೌಲಿಂಗ್ ಕಾರಣಕ್ಕಾಗಿ ಅಭಿಮಾನಿಗಳಿಂದ ಟೀಕೆಗೆ ತುತ್ತಾಗುವ ಆರ್ ಸಿಬಿ (RCB), ಈ ಬಾರಿಯೂ ಬೌಲಿಂಗ್ ವಿಭಾಗದ ಕೆಟ್ಟ ನಿರ್ವಹಣೆ ಮೂಲಕ ಎದುರಾದ ಸೋಲಿನೊಂದಿಗೆ 15ನೇ ಆವೃತ್ತಿಯ ಐಪಿಎಲ್ (IPL 2022) ಅಭಿಯಾನ ಆರಂಭಿಸಿದೆ. 205 ರನ್ ಗಳ ಬೃಹತ್ ಮೊತ್ತ ಪೇರಿಸಿದ ಹೊರತಾಗಿಯೂ ಆರ್ ಸಿಬಿ (Royal Challengers Bangalore) ತಂಡ ಪಂಜಾಬ್ ಕಿಂಗ್ಸ್  (Punjab Kings) ವಿರುದ್ಧ 5 ವಿಕೆಟ್ ಗಳ ಸೋಲಿಗೆ ಶರಣಾಯಿತು.

ಭಾನವಾರ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ಫಾಫ್ ಡು ಪ್ಲಸಿಸ್ (88), ವಿರಾಟ್ ಕೊಹ್ಲಿ (41) ಹಾಗೂ ದಿನೇಶ್ ಕಾರ್ತಿಕ್ (32) ಬ್ಯಾಟಿಂಗ್ ಸಾಹಸದಿಂದ 2 ವಿಕೆಟ್ ಗೆ 205 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಪಂಜಾಬ್ ಕಿಂಗ್ಸ್ ತಂಡ 19 ಓವರ್ ಗಳಲ್ಲಿ 5 ವಿಕೆಟ್ ಗೆ 208 ರನ್ ಬಾರಿಸಿ ಜಯದ ಗಡಿ ಮುಟ್ಟಿತು. 5 ವಿಕೆಟ್ ಗೆ 156 ರನ್ ಪೇರಿಸಿದ್ದ ವೇಳೆ ಜೊತೆಯಾದ ಶಾರುಖ್ ಖಾನ್ (24*ರನ್, 20 ಎಸೆತ, 1 ಬೌಂಡರಿ, 2 ಸಿಕ್ಸರ್) ಹಾಗೂ ಒಡೆನ್ ಸ್ಮಿತ್ (25*ರನ್, 8 ಎಸೆತ, 1 ಬೌಂಡರಿ, 3 ಸಿಕ್ಸರ್) 52ರನ್ ಜೊತೆಯಾಟವಾಡಿ ತಂಡದ ಅದ್ಭುತ ಗೆಲುವಿಗೆ ಕಾರಣರಾದರು.

ಬೃಹತ್ ಮೊತ್ತವನ್ನು ಬೆನ್ನಟ್ಟುವ ನಿಟ್ಟಿನಲ್ಲಿ ಬೇಕಿದ್ದ ಉತ್ತಮ ಆರಂಭವನ್ನು ಪಂಜಾಬ್ ಕಿಂಗ್ಸ್ ತಂಡ ಪಡೆದುಕೊಂಡಿತು. ನಾಯಕ ಮಯಾಂಕ್ ಅಗರ್ವಾಲ್ (32ರನ್, 24 ಎಸೆತ, 2 ಬೌಂಡರಿ, 2 ಸಿಕ್ಸರ್) ಹಾಗೂ ಶಿಖರ್ ಧವನ್ (43ರನ್, 29 ಎಸೆತ, 5 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಗೆ ಪ್ರತಿ ಓವರ್ ಗಳಿಗೆ 10ರ ಸರಾಸರಿಯಂತೆ ಬ್ಯಾಟಿಂಗ್ ಮಾಡಿದರು. ಮೊತ್ತವನ್ನು ಬೆನ್ನಟ್ಟಲು ಬೇಕಿದ್ದ ಅಗತ್ಯ ರನ್ ರೇಟ್ ಅನ್ನು ಕಾಪಾಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಪಂಜಾಬ್ ಕಿಂಗ್ಸ್, ಆರ್ ಸಿಬಿ ಬೌಲಿಂಗ್ ವಿಭಾಗದ ಬೆವರಿಳಿಸಿತು. ಮೊದಲ ವಿಕೆಟ್ ಗೆ 5 ಓವರ್ ಗಳ ಒಳಗಾಗಿ 50 ರನ್ ಜೊತೆಯಾಟವಾಡಿದ್ದ ಈ ಜೋಡಿ, 8ನೇ ಓವರ್ ನಲ್ಲಿ ಬೇರ್ಪಟ್ಟಿತು. 

ಈ ವರ್ಷದ ಐಪಿಎಲ್ ಹರಾಜಿನಲ್ಲಿ ಆರ್ ಸಿಬಿಯ ದುಬಾರಿ ಖರೀದಿಗಳ ಪೈಕಿ ಒಬ್ಬರಾಗಿದ್ದ ಶ್ರೀಲಂಕಾದ ವಾನಿಂದು ಹಸರಂಗ ಹಾಲಿ ಐಪಿಎಲ್ ನಲ್ಲಿ ತಾವು ಎಸೆದ ಮೊದಲ ಎಸೆತದಲ್ಲಿಯೇ ಮಯಾಂಕ್ ಅಗರ್ವಾಲ್ ವಿಕೆಟ್ ಉರುಳಿಸಿ ಆರ್ ಸಿಬಿಗೆ ಹರ್ಷ ತಂದಿದ್ದರು. ಈ ವೇಳೆ ಪಂಜಾಬ್ ತಂಡ 71 ರನ್ ಬಾರಿಸಿತ್ತು.

ನಂತರ ಶಿಖರ್ ಧವನ್ ಗೆ ಜೊತೆಯಾದ ಶ್ರೀಲಂಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಭಾನುಕಾ ರಾಜಪಕ್ಷ (43ರನ್, 22 ಎಸೆತ, 2 ಬೌಂಡರಿ) 2ನೇ ವಿಕೆಟ್ ಗೆ ಬಿರುಸಿನ 47 ರನ್ ಜೊತೆಯಾಟವಾಡಿದರು. ಕೇವಲ 25 ಎಸೆತಗಳಲ್ಲಿ ಈ ಜೊತೆಯಾಟ ಮೂಡಿ ಬಂತು. ಭಾನುಕ ರಾಜಪಕ್ಷ ಆರ್ ಸಿಬಿಯ ಬಹುತೇಕ ಎಲ್ಲಾ ಬೌಲರ್ ಗಳ ಎಸೆತವನ್ನು ಸರಾಗವಾಗಿ ಸ್ಟೇಡಿಯಂನ ಆಚೆ ಹಾಕುತ್ತಿದ್ದರು. ಅಪಾಯಕಾರಿಯಾಗುತ್ತಿದ್ದ ಈ ಜೊತೆಯಾಟವನ್ನು12ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ಬೇರ್ಪಡಿಸಿದರು. ಬಿರುಸಿನ ಆಟವಾಡುತ್ತಿದ್ದ ಶಿಖರ್ ಧವನ್, ಅನುಜ್ ರಾವತ್ ಗೆ ಕ್ಯಾಚ್‌ ನೀಡಿ ಹೊರನಡೆದರು.

IPL 2022 DC vs MI ಸಂಪ್ರದಾಯ ಮುಂದುವರಿಸಿದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್‌ಗೆ ರೋಚಕ ಗೆಲುವು!

ಭಾನುಕ ರಾಜಪಕ್ಷ ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್ ಇದ್ದಷ್ಟು ಹೊತ್ತು ಆರ್ ಸಿಬಿ ಬೌಲರ್ ಗಳನ್ನು ಬೆಂಡೆತ್ತಿದ್ದರಿಂದ ಪಂಜಾಬ್ ತಂಡ ಸುಲಭ ಗೆಲುವು ಸಾಧಿಸಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.14ನೇ ಓವರ್ ನ ಸತತ 2 ಎಸೆತಗಳಲ್ಲಿ ಭಾನುಕ ರಾಜಪಕ್ಷ ಹಾಗೂ ಐಪಿಎಲ್ ನಲ್ಲಿ ಪಾದಾರ್ಪಣೆ ಪಂದ್ಯವಾಡಿದ ರಾಜ್ ಬಾವಾ ವಿಕೆಟ್ ಉರುಳಿಸಿದ ಸಿರಾಜ್ ಆರ್ ಸಿಬಿ ಹಿಡಿತ ಸಾಧಿಸಲು ನೆರವಾದರು. 10 ಎಸೆತಗಳಲ್ಲಿ 2 ಸಿಕ್ಸರ್ ಗಳೊಂದಿಗೆ 19 ರನ್ ಸಿಡಿಸಿದ ಲಿಯಾಮ್ ಲಿವಿಂಗ್ ಸ್ಟೋನ್ ತಂಡದ ಮೊತ್ತ 150ರ ಗಡಿ ದಾಟುತ್ತಿದ್ದಂತೆ ಆಕಾಶ್ ದೀಪ್ ಗೆ ವಿಕೆಟ್ ನೀಡಿ ಹೊರನಡೆದಾಗ ಪಂಜಾಬ್ ಆತಂಕಕ್ಕೆ ಸಿಲುಕಿತ್ತು.

IPL 2022 PBKS vs RCB ಸೂಪರ್ ಫಾಫ್ ಸಖತ್ ಇನ್ನಿಂಗ್ಸ್, ಆರ್ ಸಿಬಿ ಭರ್ಜರಿ ಬ್ಯಾಟಿಂಗ್!

ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಇತರ ರನ್ ದಾಖಲಾದ ಪಂದ್ಯ
ಪಂಜಾಬ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವಿನ ಮುಖಾಮುಖಿ ಐಪಿಎಲ್ ಇತಿಹಾಸದಲ್ಲಿಯೇ ಗರಿಷ್ಠ ಇತರ ರನ್ ದಾಖಲಾದ ಪಂದ್ಯ ಎನಿಸಿಕೊಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಒಟ್ಟು 44 ಇತರ ರನ್ ದಾಖಲಾದವು. ಪಂಜಾಬ್ ಕಿಂಗ್ಸ್ ತಂಡ 23 ರನ್ ಗಳನ್ನು ಇತರ ರೂಪದಲ್ಲಿ ನೀಡಿದರೆ, ಆರ್ ಸಿಬಿ ತಂಡ 21 ರನ್ ಗಳನ್ನು ಇತರ ರೂಪದಲ್ಲಿ ನೀಡಿತು. ಒಟ್ಟಾರೆ 44 ರನ್ ಗಳು ಇತರ ರೂಪದಲ್ಲಿ ದಾಖಲಾದವು. ಇದಕ್ಕೂ ಮುನ್ನ 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಕೆಕೆಆರ್ ನಡುವಿನ ಮುಖಾಮುಖಿ, 2010ರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಲ್ಲಿ ತಲಾ 38 ರನ್ ಗಳು ಇತರ ರೂಪದಲ್ಲಿ ದಾಖಲಾಗಿದ್ದವು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?