
ಮುಂಬೈ(ಮಾ.28): ಐಪಿಎಲ್‌ಗೆ (IPL) ಹೊಸದಾಗಿ ಸೇರ್ಪಡೆಯಾಗಿರುವ ಲಖನೌ ಸೂಪರ್ ಜೈಂಟ್ಸ್ (Lucknow Supergiants) ಹಾಗೂ ಗುಜರಾತ್ ಟೈಟಾನ್ಸ್ (Gujarat Titans) ತಂಡಗಳು ಸೋಮವಾರ ಪರಸ್ಪರ ಮುಖಾಮುಖಿಯಾಗಲಿದ್ದು, ಗೆಲುವಿನ ಆರಂಭ ಪಡೆಯಲು ಉಭಯ ತಂಡಗಳೂ ಎದುರು ನೋಡುತ್ತಿವೆ. ಕಳೆದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ನಾಯಕರಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್ (KL Rahul) ಈ ಬಾರಿ ಲಖನೌ ತಂಡವನ್ನು ಮುನ್ನಡೆಸಲಿದ್ದು, ಮುಂಬೈ ಇಂಡಿಯನ್ಸ್ (Mumbai Indians) ಪರ ಆಡುತ್ತಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya), ಗುಜರಾತ್‌ನ ನಾಯಕತ್ವ ವಹಿಸಲಿದ್ದಾರೆ.
ರಾಹುಲ್, ದಕ್ಷಿಣ ಆಫ್ರಿಕಾ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಜೊತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕರ್ನಾಟಕದ ಮನೀಶ್ ಪಾಂಡೆಗೆ (Manish Pandey) ದೀಪಕ್ ಹೂಡಾ (Deepak Hooda) ಕೂಡಾ ಉತ್ತಮ ಬೆಂಬಲ ನೀಡಬೇಕಿದೆ. ತಂಡದಲ್ಲಿ ಆಸ್ಪ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ (Krunal Pandya) ಸೇರಿದಂತೆ ಹಲವು ಆಲ್ರೌಂಡರ್‌ಗಳಿದ್ದು, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಜೊತೆ ಕೃಷ್ಣಪ್ಪ ಗೌತಮ್ ಕೂಡಾ ಆಲ್ರೌಂಡರ್ ಸ್ಥಾನ ತುಂಬಬಹುದು. ಟಿ20 ತಜ್ಞ ಜೇಸನ್ ಹೋಲ್ಡರ್ ಬ್ಯಾಟಿಂಗ್ ಜೊತೆ ಬೌಲಿಂಗ್‌ನಲ್ಲೂ ತಂಡದ ಟ್ರಂಪ್‌ಕಾರ್ಡ್ ಎನಿಸಿದ್ದಾರೆ. ಬೌಲಿಂಗ್ ಪಡೆಯನ್ನು ಕಳೆದ ಬಾರಿ 2ನೇ ಗರಿಷ್ಠ ವಿಕೆಟ್ ಸರದಾರ ಆವೇಶ್ ಖಾನ್ (Avesh Khan) ಮುನ್ನಡೆಸಲಿದ್ದು, ಮಾರ್ಕ್ ವುಡ್ (Mark Wood) ಅನುಪಸ್ಥಿತಿಯಲ್ಲಿ ಶ್ರೀಲಂಕಾದ ದುಶ್ಮುಂತಾ ಚಮೀರ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಸ್ಪಿನ್ನರ್ ರವಿ ಬಿಷ್ಣೋಯ್ ಸ್ಪಿನ್ ಮೋಡಿ ಮಾಡಲು ಕಾಯುತ್ತಿದ್ದಾರೆ.
ಪಾಂಡ್ಯಗೆ ಅಗ್ನಿಪರೀಕ್ಷೆ: ಟೀಂ ಇಂಡಿಯಾಗೆ (Team India) ವಾಪಸಾಗಲು ಕಾಯುತ್ತಿರುವ ಹಾರ್ದಿಕ್, ಈ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಜೊತೆಗೆ ತಮ್ಮನ್ನು ನಂಬಿ ನಾಯಕತ್ವ ನೀಡಿರುವ ಗುಜರಾತ್ ತಂಡಕ್ಕೂ ನ್ಯಾಯ ಒದಗಿಸಬೇಕಿದೆ. ಶುಭ್‌ಮನ್ ಗಿಲ್ (Shubman Gill) ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿದ್ದು, ಅವರ ಜೊತೆ ಆಫ್ಘಾನಿಸ್ತಾನದ ರಹ್ಮಾನುಲ್ಲಾ ಗುರ್ಬಜ್ ಆರಂಭಿಕನಾಗಿ ಕಣಕ್ಕಿಳಿಯಬಹುದು. ಕರ್ನಾಟಕದ ಬ್ಯಾಟರ್ ಅಭಿನವ್ ಮನೋಹರ್ ಐಪಿಎಲ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ವಿಜಯ್ ಶಂಕರ್ (Vijay Shankar), ಡೇವಿಡ್ ಮಿಲ್ಲರ್ (David Miller) ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ರಾಹುಲ್ ತೆವಾಟಿಯಾ ಹಾಗೂ ಪಾಂಡ್ಯ ಆಲ್ರೌಂಡ್ ಹೊಣೆ ನಿಭಾಯಿಸಬೇಕಿದೆ. ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಅನುಭವಿ ವೇಗಿಗಳಾದ ಮೊಹಮದ್ ಶಮಿ, ಲಾಕಿ ಫಗ್ರ್ಯೂಸನ್ ಜೊತೆ ಸಾಯಿ ಕಿಶೋರ್ ಕೂಡಾ ಸ್ಥಾನ ಗಿಟ್ಟಿಸುವ ತವಕದಲ್ಲಿದ್ದಾರೆ. ರಶೀದ್ ಖಾನ್ (Rashid Khan) ತಮ್ಮ ಸ್ಪಿನ್ ಅಸ್ತ್ರದ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
DC vs MI: ಡೆಲ್ಲಿ ಎದುರಿನ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾಗೆ ಮತ್ತೊಂದು ಶಾಕ್..!
ಸಂಭವನೀಯ ಆಟಗಾರರು
ಲಖನೌ: ಕೆ.ಎಲ್ ರಾಹುಲ್(ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೃಷ್ಣಪ್ಪ ಗೌತಮ್, ದುಶ್ಮಂತಾ ಚಮೀರ , ರವಿ ಬಿಷ್ಣೋಯ್, ಆವೇಶ್ ಖಾನ್
ಗುಜರಾತ್: ಶುಭ್‌ಮನ್ ಗಿಲ್, ರೆಹಮನುಲ್ಲಾ ಗುರ್ಬಜ್, ಅಭಿನವ್ ಮನೋಹರ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫಗ್ರ್ಯೂಸನ್, ಸಾಯಿ ಕಿಶೋರ್
ಸ್ಥಳ: ಮುಂಬೈ, ವಾಂಖೇಡೆ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.