IPL 2022 ನಾಯಕ ಡು ಪ್ಲೆಸಿಸ್ ಗೆ ತಪ್ಪಿದ ಶತಕ, ಆರ್ ಸಿಬಿ ಉತ್ತಮ ಮೊತ್ತ

Published : Apr 19, 2022, 09:24 PM IST
IPL 2022 ನಾಯಕ ಡು ಪ್ಲೆಸಿಸ್ ಗೆ ತಪ್ಪಿದ ಶತಕ, ಆರ್ ಸಿಬಿ ಉತ್ತಮ ಮೊತ್ತ

ಸಾರಾಂಶ

ನಾಯಕ ಫಾಫ್ ಡು ಪ್ಲೆಸಿಸ್ ಅವರ ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಗೆಲುವಿಗೆ ಸವಾಲಿನ ಗುರಿ ನೀಡಿದೆ. ಐಪಿಎಲ್ ನಲ್ಲಿ 2ನೇ ಬಾರಿಗೆ ಪ್ಲೆಸಿಸ್ 96 ರನ್ ಗಳಿಗೆ ಔಟ್ ಆದರು.  

ಮುಂಬೈ (ಏ.19): ಫಾಫ್ ಡು ಪ್ಲೆಸಿಸ್ (Faf du Plessis) ಅವರ ಸೂಪರ್ ಇನ್ನಿಂಗ್ಸ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( Royal Challengers Bangalore) ತಂಡ 15ನೇ ಆವೃತ್ತಿಯ ಐಪಿಎಲ್ ನಲ್ಲಿ (IPL 2022) ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡದ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪ್ರಮುಖ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ ಕೊಹ್ಲಿಯ (Virat Kohli) ಮೊದಲ ಬಾಲ್ ಡಕ್ ನೊಂದಿಗೆ ಮೊದಲ ಓವರ್ ನಲ್ಲಿಯೇ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಆರ್ ಸಿಬಿ (RCB), ಫಾಫ್ ಡು ಪ್ಲೆಸಿಸ್ (96ರನ್, 64 ಎಸೆತ, 11 ಬೌಂಡರಿ, 2 ಸಿಕ್ಸರ್) ಸಾಹಸಿಕ ಬ್ಯಾಟಿಂಗ್ ನಿಂದಾಗಿ 6 ವಿಕೆಟ್ ಗೆ 181 ಮೊತ್ತ ಬಾರಿಸಿತು. ಸ್ಲಾಗ್ ಓವರ್ ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಎಚ್ಚರಿಕೆಯ ದಾಳಿ ನಡೆಸಿ ಆರ್ ಸಿಬಿ ತಂಡವನ್ನು ಕಟ್ಟಿಹಾಕಿತು.

ಸಾಮಾನ್ಯವಾಗಿ ಆರ್ ಸಿಬಿ ಪಂದ್ಯದ ಮೊದಲ ಎಸೆತವನ್ನು ಫಾಫ್ ಡು ಪ್ಲೆಸಿಸ್ ಮೂಲಕ ಆರಂಭಿಸುತ್ತಿತ್ತು. ಆದರೆ, ಈ ಬಾರಿ ಅವಕಾಶವನ್ನು ಅನುಜ್ ರಾವತ್ ಗೆ ನೀಡಿತ್ತು. ಆದರೆ, ದುಷ್ಮಂತ ಚಾಮೀರ ಎಸೆದ ಮೊದಲ ಓವರ್ ಆರ್ ಸಿಬಿ ಪಾಲಿಗೆ ಆಘಾತಕಾರಿಯಾಗಿ ಪರಿಣಮಿಸಿತು. ಚಾಮೀರ ಎಸೆದ ನಾಲ್ಕನೇ ಎಸೆತವನ್ನು ಬೌಂಡರಿಗಟ್ಟಿದ ಅನುಜ್ ರಾವತ್ ಮರು ಎಸೆತದಲ್ಲಿಯೇ ಕೆಎಲ್ ರಾಹುಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ, ಇದಕ್ಕಿಂತ ಆರ್ ಸಿಬಿಗೆ ಶಾಕ್ ಎನಿಸಿದ್ದು, ಮರು ಎಸೆತದಲ್ಲಿ ವಿರಾಟ್ ಕೊಹ್ಲಿ ಆಡಿದ ಶಾಟ್. ಬೌನ್ಸ್ ಆಗಿ ಬಂದ ಎಸೆತವನ್ನು ಆಡುವಲ್ಲಿ ಎಡವಿದ ಕೊಹ್ಲಿ, ದೀಪಕ್ ಹೂಡಾಗೆ ಕ್ಯಾಚ್ ನೀಡಿ ಮೊದಲ ಎಸೆತದ ಡಕ್ ಕಂಡು ನಿರಾಸೆ ಅನುಭವಿಸಿದರು.

7 ರನ್ ಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ 3ನೇ ವಿಕೆಟ್ ಗೆ ಫಾಫ್ ಡು ಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ (23ರನ್, 11 ಎಸೆತ, 3 ಬೌಂಡರಿ, 1 ಸಿಕ್ಸರ್) ಬಿರುಸಿನ 37 ರನ್ ಗಳ ಜೊತೆಯಾಟವಾಡಿ ತಂಡದ ರನ್ ವೇಗವನ್ನು ಚಾಲ್ತಿಯಲ್ಲಿರಿಸಿದ್ದರು. ಮೈದಾನಕ್ಕೆ ಇಳಿದ ಹಂತದಿಂದಲೂ ಬಿರುಸಾಗಿ ರನ್ ಬಾರಿಸಲು ಆರಂಭಿಸಿದ ಮ್ಯಾಕ್ಸ್ ವೆಲ್, 3 ಆಕರ್ಷಕ ಬೌಂಡರಿ ಹಾಗೂ 1 ಅದ್ಭುತ ಸಿಕ್ಸರ್ ಸಿಡಿಸಿ ಮಿಂಚಿದ್ದರು. ಉತ್ತಮವಾಗಿ ಆಡುತ್ತಿದ್ದ ಮ್ಯಾಕ್ಸ್ ವೆಲ್, ಕೃನಾಲ್ ಪಾಂಡ್ಯ ಎಸೆದ ಪವರ್ ಪ್ಲೇಯ ಕೊನೆಯ ಓವರ್ ನಲ್ಲಿ ಜೇಸನ್ ಹೋಲ್ಡರ್ ಗೆ ಕ್ಯಾಚ್ ನೀಡಿದರು. ನಂತರ ಬಂದ ಸುಯಶ್ ಪ್ರಭುದೇಸಾಯಿ ಎರಡು ಓವರ್ ಗಳ ಕಾಲ ಮೈದಾನದಲ್ಲಿದ್ದು 18 ರನ್ ಗಳ ಜೊತೆಯಾಟದಲ್ಲಿ ಭಾಗಿಯಾದರು. 8ನೇ ಓವರ್ ನಲ್ಲಿ ಹೋಲ್ಡರ್, ಸುಯಶ್ ಅವರ ವಿಕೆಟ್ ಉರುಳಿಸಿದಾಗ ಆರ್ ಸಿಬಿ 4 ವಿಕೆಟ್ ಗೆ 62 ರನ್ ಬಾರಿಸಿತ್ತು.

70 ರನ್ ಜೊತೆಯಾಟವಾಡಿದ ಪ್ಲೆಸಿಸ್-ಶಾಬಾಜ್: ಕೆಳ ಕ್ರಮಾಂಕದ ಬ್ಯಾಟಿಂಗ್ ದಿನೇಶ್ ಕಾರ್ತಿಕ್ ಅವರಂತೆ ಭರವಸೆಯಾಗಿ ಉಳಿದಿರುವ ಶಾಬಾಜ್ ಅಹ್ಮದ್ (26 ರನ್, 22 ಎಸೆತ, 1ಬೌಂಡರಿ) ನಾಯಕ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಅಮೂಲ್ಯ 70 ರನ್ ಗಳ ಜೊತೆಯಾಟದಲ್ಲಿ ಭಾಗಿಯಾದರು. ತಂಡದ ವಿಕೆಟ್ ಉಳಿಸಿಕೊಳ್ಳುವುದರೊಂದಿಗೆ ಸ್ಲಾಗ್ ಓವರ್ ಗಳಲ್ಲಿ ತಂಡದ ಮೊತ್ತ ಏರಿಸಲು ಅಗತ್ಯವಾದ ವೇದಿಕೆಯನ್ನು ನಿರ್ಮಿಸಿದರು. ಎಂಟು ಓವರ್ ಗಳ ಕಾಲ ಕ್ರೀಸ್ ನಲ್ಲಿದ್ದ ಈ ಜೋಡಿ 16ನೇ ಓವರ್ ನಲ್ಲಿ ಬೇರ್ಪಡುವ ವೇಳೆ ಆರ್ ಸಿಬಿ 132 ರನ್ ಸಿಡಿಸಿತ್ತು. ಎಚ್ಚರಿಕೆಯ ಬ್ಯಾಟಿಂಗ್ ಮಾಡಿದ ಶಾಬಾಜ್ ರನೌಟ್ ಆಗಿ ಹೊರನಡೆದರು.

ಶತಕವಿಲ್ಲದೆ 100 ಪಂದ್ಯ ಮುಗಿಸಿದ ವಿರಾಟ್ ಕೊಹ್ಲಿ: ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗುವುದರೊಂದಿಗೆ ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಿಂದ ಶತಕವಿಲ್ಲದೆ 100 ಪಂದ್ಯವನ್ನು ಮುಗಿಸಿದರು. 17 ಟೆಸ್ಟ್, 21 ಏಕದಿನ, 25 ಟಿ20 ಹಾಗೂ 37 ಐಪಿಎಲ್ ಪಂದ್ಯಗಳಲ್ಲಿ ಶತಕವಿಲ್ಲದೆ ವಿರಾಟ್ ಕೊಹ್ಲಿ ಕಳೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!