IPL 2022 ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ

Published : Apr 24, 2022, 07:07 PM ISTUpdated : Apr 24, 2022, 07:18 PM IST
IPL 2022 ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ

ಸಾರಾಂಶ

ಸಾಲು ಸಾಲು ಏಳು ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್, ವಾಂಖೆಡೆ ಮೈದಾನದಲ್ಲಿ ಹಾಲಿ ಐಪಿಎಲ್ ನ ತನ್ನ ಮೊದಲ ಪಂದ್ಯವನ್ನು ಆಡಲು ಅಣಿಯಾಗಿದೆ.  

ಮುಂಬೈ (ಏ.24): ಸತತ ಏಳು ಸೋಲುಗಳನ್ನು ಕಂಡಿರುವ ಮುಂಬೈ ಇಂಡಿಯನ್ಸ್ ( Mumbai Indians ) ತಂಡ, ಗೆಲುವಿನ ನಿರೀಕ್ಷೆಯಲ್ಲಿ ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants ) ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ (MI) ತಂಡದ ನಾಯಕ ರೋಹಿತ್ ಶರ್ಮ (Rohit Sharma) ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ವಾಂಖೆಡೆ ಸ್ಟೇಡಿಯಂನಲ್ಲಿ ಈ ಮುಖಾಮುಖಿ ನಡೆಯಲಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ಒಂದು ಬದಲಾವಣೆ ಮಾಡಿದ್ದು, ಗಾಯಾಳುವಾಗಿರುವ ಆವೇಶ್ ಖಾನ್ (Avesh Khan) ಬದಲಿಗೆ ಮೊಹ್ಸಿನ್ ಖಾನ್ ರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್(ವಿ.ಕೀ), ಕೆಎಲ್ ರಾಹುಲ್(ನಾಯಕ), ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಆಯುಷ್ ಬಡೋನಿ, ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ದುಷ್ಮಂತ ಚಮೀರಾ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್ : ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿ.ಕೀ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಹೃತಿಕ್ ಶೋಕೀನ್, ಡೇನಿಯಲ್ ಸಾಮ್ಸ್, ಜಯದೇವ್ ಉನದ್ಕತ್, ರಿಲೆ ಮೆರೆಡಿತ್, ಜಸ್ಪ್ರೀತ್ ಬುಮ್ರಾ.

ವಾಂಖೆಡೆ ಮೈದಾನಕ್ಕೆ ಹಿಂತಿರುಗಿದ್ದರಿಂದ ಸಂತಸವಾಗಿದೆ. ಈ ಮೈದಾನದಲ್ಲಿ ಆಟವಾಡದೇ ಬಹಳ ದಿನಗಳಾಗಿದ್ದವು. ನಮ್ಮ ತಂಡಕ್ಕೆ ಇಲ್ಲಿ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆಯಲ್ಲಿ ನಾವಿದ್ದೇವೆ. ಈ ಮೈದಾನದಲ್ಲಿ ಗೆಲುವಿಗಳ ದಾಖಲೆಯೂ ಹಾಗಿದೆ. ಆದರೆ , ಉತ್ತಮವಾಗಿ ಆಡಬೇಕಾದ ಅಗತ್ಯವಿದೆ. ಇದು ಚೇಸಿಂಗ್ ಮೈದಾನ ಎನ್ನುವುದು ನಮ್ಮ ಅರಿವಿನಲ್ಲಿದೆ. ಉತ್ತಮ ಪಿಚ್, ಉತ್ತಮವಾದ ಬೌಂಡರಿಗಳು ಇಲ್ಲಿದೆ.
ರೋಹಿತ್ ಶರ್ಮ, ಮುಂಬೈ ಇಂಡಿಯನ್ಸ್ ನಾಯಕ

ನಾವು ನೋಡಿದ ಕೆಲವೊಂದಿಷ್ಟು ಪಂದ್ಯಗಳು ಹಾಗೂ ಆಡಿದ ಕೆಲವೊಂದಿಷ್ಟು ಪಂದ್ಯಗಳನ್ನು ಗಮನಿಸಿದ ಬಳಿಕ ಈ ಮೈದಾನದಲ್ಲಿ ಹೆಚ್ಚಿನ ಇಬ್ಬನಿ ಇರೋದಿಲ್ಲ ಅನ್ನೋದಂತೂ ಖಚಿತವಾಗಿದೆ. ಇಬ್ಬನಿ ಇರದೇ ಇದ್ದಲ್ಲಿ ಟಾಸ್ ಮುಖ್ಯವಾಗೋದಿಲ್ಲ. ನಮ್ಮ ಯೋಜನೆಗಳನ್ನು ಕಾರ್ಯಗತ ಮಾಡುವಲ್ಲಿ ಇನ್ನಷ್ಟು ಜಾಣ್ಮೆ ತೋರಬೇಕಿದೆ. ಯಾವ ಪಂದ್ಯಗಳಲ್ಲೂ ನಾವು ದೊಡ್ಡ ಅಂತರದಿಂದ ಸೋಲು ಕಂಡಿಲ್ಲ, ಅಲ್ಪ ಅಂತರದ ಸೋಲು ಕಂಡಿದ್ದೇವೆ. ಕಳೆದ ಪಂದ್ಯದಲ್ಲಿ ನಾವು ಪವರ್ ಪ್ಲೇ ಅವಧಿಯಲ್ಲಿ ಕೆಲ ವಿಕೆಟ್ ಗಳನ್ನು ತೆಗೆದುಕೊಂಡರೂ, 50 ರನ್ ಗಳನ್ನು ಬಿಟ್ಟುಕೊಟ್ಟಿದ್ದೆವು. ಈ ಚಿಕ್ಕ ಚಿಕ್ಕ ಸಂಗತಿಗಳನ್ನು ನಾವು ಸರಿಪಡಿಸಿಕೊಳ್ಳಬೇಕಿದೆ.
ಕೆಎಲ್ ರಾಹುಲ್, ಲಕ್ನೋ ಸೂಪರ್ ಜೈಂಟ್ಸ್ ನಾಯಕ

ನಿಮಗಿದು ಗೊತ್ತೇ?
* ಹಾಲಿ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ವಾಂಖೆಡೆ ಸ್ಟೇಡಿಯಂನಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. 2018ರ ಬಳಿಕ ಈ ಮೈದಾನದಲ್ಲಿ ಆಡಿದ 14 ಪಂದ್ಯಗಳ ಪೈಕಿ 8 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ಸಾಧಿಸಿದೆ.  2019ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಸೂಪರ್ ಓವರ್ ಗೆಲುವೂ ಇದರಲ್ಲಿ ಸೇರಿದೆ.

ಇಂಡೋ-ಆಫ್ರಿಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ, ಬೆಂಗಳೂರು ಕೊನೆಯ ಪಂದ್ಯಕ್ಕೆ ಆತಿಥ್ಯ

* ಹಾಲಿ ವರ್ಷದ ಐಪಿಎಲ್ ನಲ್ಲಿ ಆವೇಶ್ ಖಾನ್ ಹಾಗೂ ಜೇಸನ್ ಹೋಲ್ಡರ್ ಡೆತ್ ಓವರ್ ಗಳಲ್ಲಿ ತಲಾ ಐದು ವಿಕೆಟ್ ಉರುಳಿಸಿದ್ದಾರೆ. ಕೇವಲ ಟಿ.ನಟರಾಜನ್ (6), ಭುವನೇಶ್ವರ್ ಕುಮಾರ್ (7), ಡ್ವೈನ್ ಬ್ರಾವೋ (7) ಮಾತ್ರ ಡೆತ್ ಓವರ್ ಗಳಲ್ಲಿ ಇವರಿಬ್ಬರಿಗಿತ ಹೆಚ್ಚಿನ ವಿಕೆಟ್ ಉರುಳಿಸಿದ್ದಾರೆ.

ಫುಟ್ಬಾಲ್‌ ಪಂದ್ಯದ ವೇಳೆ ಮೈದಾನಕ್ಕಿಳಿದು ಚೆಂಡು ಎತ್ತಿಕೊಂಡು ಹೋದ ಶ್ವಾನ

* ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮ, ತಮ್ಮ 14ನೇ ಐಪಿಎಲ್ ಶೂನ್ಯವನ್ನು ದಾಖಲಿಸಿದರು. ಐಪಿಎಲ್ ನಲ್ಲಿ ಗರಿಷ್ಠ ಡಕ್ ಔಟ್ ಆದ ಪ್ಲೇಯರ್ ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಗೆ ಈಗ ಅಗ್ರಸ್ಥಾನ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ