IPL 2022 ಫೈನಲ್ ಫೈಟ್‌ನಲ್ಲಿ ಹಾರ್ದಿಕ್ ಮಿಂಚಿನ ದಾಳಿ,ಅಲ್ಪಮೊತ್ತಕ್ಕೆ ಕುಸಿದ ರಾಜಸ್ಥಾನ!

By Suvarna NewsFirst Published May 29, 2022, 9:55 PM IST
Highlights
  • ತಂಡದ ನೆರವಿಗೆ ನಿಂತ ಹಾರ್ದಿಕ್ ಪಾಂಡ್ಯ
  • ರಾಜಸ್ಥಾನಕ್ಕೆ ಆರ್ಭಟಕ್ಕೆ ಬ್ರೇಕ್ ಹಾಕಿದ ಪಾಂಡ್ಯ
  • 130 ರನ್‌ಗೆ ರಾಜಸ್ಥಾನ ತಂಡವನ್ನು ಕಟ್ಟಿ ಹಾಕಿದ ಗುಜರಾತ್

ಅಹಮ್ಮದಾಬಾದ್(ಮೇ.29): ಐಪಿಎಲ್ 2022 ಫೈನಲ್ ಪಂದ್ಯದಲ್ಲಿ ರಾಜಸ್ಥಾನ ಆರ್ಭಟಕ್ಕೆ ಸ್ವತಃ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ರೇಕ್ ಹಾಕಿದ್ದಾರೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿರುವ ರಾಜಸ್ಥಾನ ಪಾಂಡ್ಯ ದಾಳಿಗೆ ತತ್ತರಿಸಿತು. ಪರಿಣಾಮ 9 ವಿಕೆಟ್ ನಷ್ಟಕ್ಕೆ 130 ರನ್ ಸಿಡಿಸಿದೆ.

ಐಪಿಎಲ್ 2022 ಫೈನಲ್ ಪಂದ್ಯ ಆರಂಭದಲ್ಲೇ ರೋಚಕ ಹೋರಾಟ ಏರ್ಪಟ್ಟಿದೆ. ಟಾಸ್ ಗೆದ್ದ ರಾಜಸ್ಥಾನ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಚಮಕ್ ನೀಡಿತು. ಆದರೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಹಾರ್ದಿಕ್ ಪಾಂಡ್ಯ ಅವಕಾಶ ನೀಡಲಿಲ್ಲ. ಕಳೆದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ ಜೋಸ್ ಬಟ್ಲರ್ ಫೈನಲ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬಟ್ಲರ್ ಕೇವಲ 39 ರನ್ ಸಿಡಿಸಿ ಔಟಾದರು.

Latest Videos

IPL Closing Ceremony ರಣವೀರ್ ಸಿಂಗ್, ಎಆರ್ ರೆಹಮಾನ್ ಪರ್ಫಾಮೆನ್ಸ್, ಕಳೆ ಹೆಚ್ಚಿಸಿದ ವರ್ಣರಂಜಿತ ಸಮಾರೋಪ ಸಮಾರಂಭ!

ನಾಯಕ ಸಂಜು ಸ್ಯಾಮ್ಸನ್ ಕೇವಲ 14 ರನ್ ಸಿಡಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಆರಂಭಿಕ ಯಶಸ್ವಿ ಜೈಸ್ವಾಲ್ 22 ರನ್ ಸಿಡಿಸಿ ಔಟಾದರು. 79 ರನ್‌ಗಳಿಗೆ ರಾಜಸ್ಥಾನ ರಾಯಲ್ಸ್ 3 ವಿಕೆಟ್ ಕಳೆದುಕೊಂಡಿತು. ಮೂರು ವಿಕೆಟ್ ಪತನದ ಬೆನ್ನಲ್ಲೇ ರಾಜಸ್ಥಾನ ದಿಢೀರ್ ಕುಸಿತ ಕಂಡಿತು.

ದೇವದತ್ ಪಡಿಕ್ಕಲ್ ಕೇವಲ 2 ರನ್ ಸಿಡಿಸಿ ಔಟಾದರು. ಶಿಮ್ರೊನ್ ಹೆಟ್ಮೆಯರ್ 11 ರನ್ ಸಿಡಿಸಿ ನಿರ್ಗಮಿಸಿದರು. ರವಿಚಂದ್ರನ್ ಆಶ್ವಿನ್ 6 ರನ್ ಸಿಡಿಸಿದರು.ಟ್ರೆಂಟ್ ಬೋಲ್ಟ್ 11 ರನ್ ಸಿಡಿಸಿ ಔಟಾದರು. ಒಬೆಡೆ 8 ರನ್ ಸಿಡಿಸಿ ರನೌಟ್ ಆದರು.  ರಿಯಾನ್ ಪರಾಗ್ 15 ರನ್ ಸಿಡಿಸಿದರು ಮೂಲಕ ರಾಜಸ್ಥಾನ ರಾಯಲ್ಸ್ 9 ವಿಕೆಟ್ ನಷ್ಟಕ್ಕೆ 130 ರನ್ ಸಿಡಿಸಿತು. ಗುಜರಾತ್ ಪರ ಹಾರ್ದಿಕ್ ಪಟೇಲ್ 3 ವಿಕೆಟ್ ಕಬಳಿಸಿದರೆ, ಸಾಯಿ ಕಿಶೋರ್ 2 ವಿಕೆಟ್ ಕಬಳಿಸಿದರು. ಮೊಹಮ್ಮದ್ ಶಮಿ, ಯಶ್ ದಯಾಳ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.

ರಾಜಸ್ಥಾನ ರಾಯಲ್ಸ್ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇತ್ತ ಗುಜರಾತ್ ಟೈಟಾನ್ಸ್ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ರಚಿಸಲು ಮುಂದಾಗಿದೆ. ಹೀಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ರಾಜಸ್ಥಾನ ರಾಯಲ್ಸ್ 2008ರಲ್ಲಿ ಮೊದಲ ಐಪಿಎಲ್ ಆವೃತ್ತಿ ಪ್ರಶಸ್ತಿ ಗೆದ್ದುಕೊಂಡಿತು. ಶೇನ್ ವಾರ್ನ್ ನಾಯಕತ್ವದ ರಾಜಸ್ಥಾನ ಈ ಸಾಧನೆ ಮಾಡಿತು. ಶೇನ್ ವಾರ್ನ್‌ಗಾಗಿ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಬೇಕು ಎಂದುು ಫೈನಲ್ ಪಂದ್ಯಕ್ಕೂ ಮೊದಲು ನಾಯಕ ಸಂಜು ಸ್ಯಾಮ್ಸನ್ ಹೇಳಿದ್ದರು.

IPL 2022 ಆರ್‌ಸಿಬಿಗೆ 7 ಕೋಟಿ ರೂ, ಚಾಂಪಿಯನ್ ತಂಡಕ್ಕೆ ಸಿಗುವ ಪ್ರಶಸ್ತಿ ಮೊತ್ತವೆಷ್ಟು?

ಗುಜರಾತ್ ಟೈಟಾನ್ಸ್ ಐಪಿಎಲ್ ಲೀಗ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿತ್ತು. ಗುಜರಾತ್ ಟೈಟಾನ್ಸ್ 14 ಲೀಗ್ ಪಂದ್ಯದಲ್ಲಿ 10 ಗೆಲುವು 4 ಸೋಲು ಕಂಡಿತ್ತು. ಈ ಮೂಲಕ 20 ಅಂಕ ಸಂಪಾದಿಸಿತ್ತು. ಇತ್ತ ರಾಜಸ್ಥಾನ 14 ಲೀಗ್ ಪಂದ್ಯಗಳಲ್ಲಿ 9 ಗೆಲುವು ಹಾಗೂ 5 ಸೋಲು ಕಂಡಿತ್ತು. ಇನ್ನು ಪ್ಲೇ ಆಫ್ ಪಂದ್ಯದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರಾಳಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತ್ತು. ಇತ್ತ ರಾಜಸ್ಥಾನ ರಾಯಲ್ಸ್ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು.

click me!