IPL 2022: RCB ಉತ್ಸವ ಅಲ್ಲ.. ಕಾರ್ತಿಕೋತ್ಸವ

Published : Apr 18, 2022, 09:49 PM IST
IPL 2022: RCB ಉತ್ಸವ ಅಲ್ಲ.. ಕಾರ್ತಿಕೋತ್ಸವ

ಸಾರಾಂಶ

* RCB ಉತ್ಸವ ಅಲ್ಲ.. ಕಾರ್ತಿಕೋತ್ಸವ.. * ಸಿಂಗಲ್​ ಆರ್ಮಿಯಂತೆ ಹೋರಾಡ್ತಿದ್ದಾರೆ ಡಿಕೆ * ಡೆಲ್ಲಿ ಮಣಿಸಿದ ಬಳಿಕ ಸಂಭ್ರಮ ಜೋರು 

ಬೆಂಗಳೂರು, (ಏ.18):15ನೇ ಐಪಿಎಲ್​​ನಲ್ಲಿ ಆರ್​​​ಸಿಬಿ ಜಬರ್ದಸ್ತ್​ ಪ್ರದರ್ಶನ ನೀಡಿದೆ. ಆಡಿದ 6 ಪಂದ್ಯಗಳಲ್ಲಿ 4 ರಲ್ಲಿ ಜಯಭೇರಿ ಬಾರಿಸಿದೆ. ಪ್ರತಿ ಪಂದ್ಯವನ್ನ ಗೆಲ್ಲುವ ಉತ್ಸಾಹದದಿಂದಲೇ ಆರ್​ಸಿಬಿ ಕಣಕ್ಕಿಳಿಯುತ್ತಿದೆ. 2 ಪಂದ್ಯ ಸೋತ್ರು ಅದು ಸ್ವಲ್ಪದರಲ್ಲಿ ಮಿಸ್ ಆಗಿದೆ. ಟೋಟಲಿ ಈ ಬಾರಿ ಕೆಂಪಂಗಿ ಸೈನ್ಯ ಕಂಪ್ಲೀಟ್ ಬದಲಾಗಿದೆ. ಬ್ಯಾಟಿಂಗ್​​, ಬೌಲಿಂಗ್​​​​, ಫೀಲ್ಡಿಂಗ್​​​​ ಹೀಗೆ ಎಲ್ಲದರಲ್ಲೂ ಪರ್ಫೆಕ್ಟ್​​​. ಒಂದೇ ಮಾತಲ್ಲಿ ಹೇಳಬೇಕಂದ್ರೆ ಈ ಸಲ ಆರ್​ಸಿಬಿ ತಂಡದ ಜೋಶ್​​​ ಹೈ ಆಗಿದೆ.

ಹಿಂದೆಂದೂ ಇರದ ವಿಕ್ಟರಿ ಜೋಶ್​​ ಈ ಬಾರಿ ತಂಡದಲ್ಲಿ ಕಾಣ್ತಿದೆ ಅಂದ್ರೆ ಅದಕ್ಕೆ ಏನೋ  ಸ್ಪೆಶಲ್​ ರೀಸನ್​​​ ಇರಲೇಬೇಕು ಅಲ್ವಾ ? ಖಂಡಿತಾ  ಇದೆ. ಆರ್​ಸಿಬಿ ಹೀಗೆ ಬ್ಯಾಕ್ ಟು ಬ್ಯಾಕ್ ಗೆಲುವಿನ ನಾಗಲೋಟದ ಹಿಂದೆ ಒಂದು ಶಕ್ತಿ ಇದೆ. ಆ ಶಕ್ತಿನೇ ಡುಪ್ಲೆಸಿಸ್​​​​ ಬಳಗವನ್ನ ಗೆಲುವಿನ ಮದದಲ್ಲಿ ತೇಲಾಡುವಂತೆ ಮಾಡ್ತಿದೆ. ಅಷ್ಟಕ್ಕೂ ಆ ಬಲಿಷ್ಠ ಶಕ್ತಿ ಬೇರಾವುದು ಅಲ್ಲ, ಅದೇ ಒನ್ ಆಂಡ್ ಓನ್ಲಿ ಡಿಕೆ ಖ್ಯಾತಿಯ ದಿನೇಶ್​ ಕಾರ್ತಿಕ್​​.

RCB ಮ್ಯಾಚ್​​​ ಫಿನಿಶರ್ ಟಿ20 ವಿಶ್ವಕಪ್​​​ಗೆ ಸೆಲೆಕ್ಟ್ ಆಗ್ತಾರಾ..?

ಹೌದು... ಆರ್​ಸಿಬಿ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸುತ್ತಿರುವ ಕಾರ್ತಿಕ್ ಆರ್​ಸಿಬಿ ತಂಡದ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳನ್ನು ಆಡಿ 209.57 ಸ್ಟ್ರೈಕ್‍ರೇಟ್‍ನಲ್ಲಿ 197 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪ್ರದರ್ಶನ ಇದೀಗ ಟೀಂ ಇಂಡಿಯಾ ಪರ ಮತ್ತೆ ಕಾಣಿಸಿಕೊಳ್ಳುವ ಕಾರ್ತಿಕ್ ಕನಸಿಗೆ ಜೀವ ತುಂಬಿದೆ.

ಸಿಂಗಲ್​ ಆರ್ಮಿಯಂತೆ ಹೋರಾಡ್ತಿದ್ದಾರೆ ಡಿಕೆ:
ದಿನೇಶ್​ ಕಾರ್ತಿಕ್​​ ಅನ್ನೋ ಫಯರ್​ ಮ್ಯಾನ್​​ ಈ ಸಲ ಆರ್​ಸಿಬಿ ಸೇರಿದ್ದೇ ಬಂತು. ಕೆಂಪಂಗಿ ಸೈನ್ಯದ ಚರಿಷ್ಮಾನೇ ಬದಲಾಗಿದೆ. ಬದಲಿಸಿದ್ದು ಡಿಕೆ ಬಾಸ್​​​. ತಮಿಳ್​​ ಮಗನ್ ಮೊದಲ ಪಂದ್ಯದಿಂದಲೇ  ರನ್​ ಭರಾಟೆ ಶುರುವಿಟ್ಟುಕೊಂಡಿದ್ದಾರೆ. ಕ್ರೀಸ್​​​​​ಗೆ ಎಂಟ್ರಿಕೊಟ್ಟಾಗಲೆಲ್ಲಾ ಒನ್​ ಮ್ಯಾನ್​ ಶೋ ನೀಡಿ ತಂಡವನ್ನ ಸಂಕಷ್ಟದಿಂದ ಪಾರು ಮಾಡಿದ್ದಾರೆ. ಆರ್​ಸಿಬಿಗೆ ಡಿಕೆನೇ ತೂಫಾನ್​​​​, ಡಿಕೆನೇ ಫಿನಿಶರ್​​​, ಡಿಕೆನೇ ಆಪತ್ಭಾಂದವ.

ಎದುರಾಳಿ ಪಡೆಗೆ ನಡುಕ ಹುಟ್ಟಿಸಿರೋ ಡಿಕೆ ಬಾಸ್​​  ಆಡಿದ ಆರು ಪಂದ್ಯಗಳಲ್ಲಿ ಅಮೋಘ 197 ರನ್​​ ಬಾರಿಸಿದ್ದಾರೆ. ಬ್ಯಾಟಿಂಗ್​ ಸ್ಟ್ರೈಕ್​​ರೇಟ್​ ಅಂತೂ ಧೂಳ್​​​​. 207ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸ್ತಿದ್ದು, ಡಿಕೆಗೆ ಯಾರೂ ಸಾಟಿನೇ ಇಲ್ಲದಂತಾಗಿದೆ. 

6 ಇನ್ನಿಂಗ್ಸ್​​​​..5 ಬಾರಿ ನಾಟೌಟ್​​​..ಒಂದು ಅರ್ಧಶತಕ..:
ಯೆಸ್​​​​, ಡಿಕೆ ರನ್ ಭರಾಟೆಯ ಸ್ಪೆಷಾಲಿನೇ ಇದು. ಈವರೆಗೆ ಆಡಿದ ಆರು ಪಂದ್ಯಗಳ ಪೈಕಿ 5 ರಲ್ಲಿ ಅಜೇಯರಾಗಿದ್ದಾರೆ. ಇನ್ನೂ ಒಂದು ಪಂದ್ಯದಲ್ಲಿ ಅರ್ಧಶತಕ ಮೂಡಿ ಬಂದಿದೆ. ಆ ಅರ್ಧಶತಕವೇ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನ ಮಣ್ಣು ಮುಕ್ಕಿಸಲು ನೆರವಾಗಿತ್ತು.

ಡೆಲ್ಲಿ ಮಣಿಸಿದ ಬಳಿಕ ಸಂಭ್ರಮ ಜೋರು 
ಇನ್ನು ಡಿಕೆಯ ಫೆಂಟಾಸ್ಟಿಕ್​​ ಇನ್ನಿಂಗ್ಸ್​​ನೊಂದಿಗೆ 4ನೇ ವಿಕ್ಟರಿ ಕಂಡ ಆರ್​ಸಿಬಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಡ್ರೆಸ್ಸಿಂಗ್ ರೂಮ್​​​​ಗೆ ತೆರಳ್ತಿದ್ದಂತೆ ಕುಣಿದು ಕುಪ್ಪಳಿಸಿದ್ರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?