RCB ಮ್ಯಾಚ್​​​ ಫಿನಿಶರ್ ಟಿ20 ವಿಶ್ವಕಪ್​​​ಗೆ ಸೆಲೆಕ್ಟ್ ಆಗ್ತಾರಾ..?

Published : Apr 18, 2022, 09:37 PM IST
RCB ಮ್ಯಾಚ್​​​ ಫಿನಿಶರ್ ಟಿ20 ವಿಶ್ವಕಪ್​​​ಗೆ ಸೆಲೆಕ್ಟ್ ಆಗ್ತಾರಾ..?

ಸಾರಾಂಶ

* RCB ಮ್ಯಾಚ್​​​ ಫಿನಿಶರ್ ಟಿ20 ವಿಶ್ವಕಪ್​​​ಗೆ ಸೆಲೆಕ್ಟ್ ಆಗ್ತಾರಾ..?  * ಡೆಲ್ಲಿ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ  ಮುಂಬರೋ ಟಿ20 ವಿಶ್ವಕಪ್​​​​ನಲ್ಲಿ ಸ್ಥಾನ ಪಡೆಯುವ ಬಗ್ಗೆ ಡಿಕೆ ಮಾತು * ಸದ್ಯ ಡಿಕೆಯ ಈ ವರ್ಲ್ಡ್​​​ಕಪ್​​​​​ ಡ್ರೀಮ್​ ಬಗ್ಗೆ ಭಾರಿ ಚರ್ಚೆ

ಮುಂಬೈ, (ಏ.18) : ನಾನು ದೊಡ್ಡ ಕನಸನ್ನು ಹೊಂದಿದ್ದೇನೆ. ಅದನ್ನು ಸಾಧಿಸುವ ಸಲುವಾಗಿ ಕಠಿಣ ಪರಿಶ್ರಮ ವಹಿಸುತ್ತಿದ್ದೇನೆ. ಟಿ20 ವಿಶ್ವಕಪ್​ನಲ್ಲಿ ಸ್ಥಾನ ಪಡೆಯೋದು ನನ್ನ ದೊಡ್ಡ ಗುರಿ. ಡೆಲ್ಲಿ ವಿರುದ್ಧ ಆರ್​ಸಿಬಿ ಗೆದ್ದ ಬಳಿಕ ಡಿಕೆ ಮುಂಬರೋ ಟಿ20 ವಿಶ್ವಕಪ್​​​​ನಲ್ಲಿ ಸ್ಥಾನ ಪಡೆಯುವ ಬಗ್ಗೆ ಮಾತನಾಡಿದ್ರು. ಸದ್ಯ ಡಿಕೆಯ ಈ ವರ್ಲ್ಡ್​​​ಕಪ್​​​​​ ಡ್ರೀಮ್​ ಬಗ್ಗೆ ಭಾರಿ ಚರ್ಚೆಯಾಗ್ತಿದೆ. 

 ಆರ್​ಸಿಬಿ ಪರ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸುತ್ತಿರುವ ಕಾರ್ತಿಕ್ ಆರ್​ಸಿಬಿ ತಂಡದ ಮ್ಯಾಚ್ ಫಿನಿಶರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 6 ಪಂದ್ಯಗಳನ್ನು ಆಡಿ 209.57 ಸ್ಟ್ರೈಕ್‍ರೇಟ್‍ನಲ್ಲಿ 197 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಈ ಪ್ರದರ್ಶನ ಇದೀಗ ಟೀಂ ಇಂಡಿಯಾ ಪರ ಮತ್ತೆ ಕಾಣಿಸಿಕೊಳ್ಳುವ ಕಾರ್ತಿಕ್ ಕನಸಿಗೆ ಜೀವ ತುಂಬಿದೆ.

IPL 2022: ದಿನೇಶ್​ ಕಾರ್ತಿಕ್ ಡಿಫರೆಂಟ್​​ ಹೆಲ್ಮೆಟ್​​ ಹಾಕಿ ಆಡೋದ್ಯಾಕೆ..?

ಡಿಕೆ ಸದ್ಯ ನಡೆಯುತ್ತಿರುವ ಐಪಿಎಲ್​​ನಲ್ಲಿ ಯಂಗ್ ಸ್ಟರ್ಸ್​ ನಾಚುವಂತ ಪ್ರದರ್ಶ ನೀಡ್ತಿದ್ದಾರೆ. 34 ರಲ್ಲೂ 24ರಂತೆ ಬ್ಯಾಟ್ ಬೀಸ್ತಿದ್ದಾರೆ. ಇಂತಹ ಆಟಗಾರನಿಗೆ ಬಿಸಿಸಿಐ ಸೆಲೆಕ್ಟರ್ಸ್​ ಮತ್ತೆ ಮಣೆ ಹಾಕ್ತಾರಾ ಅನ್ನೋ ಪ್ರಶ್ನೆನೂ ಎದ್ದಿದೆ. ಡಿಕೆಯನ್ನ ಸೆಲೆಕ್ಟ್​​​ ಮಾಡೋದು ಬಿಡೋದು ಸೆಲೆಕ್ಟರ್ಸ್​ ವಿವೇಚನೆಗೆ ಬಿಟ್ಟಿದ್ದು. ಆದ್ರೆ ಈ ಮೂರು ಕಾರಣದಿಂದ ಡಿಕೆಗೆ ವಿಶ್ವಕಪ್​​ನಲ್ಲಿ ಸ್ಥಾನ ನೀಡಲೇಬೇಕು.

ರೀಸನ್​ ನಂ.1 - ಮಿಡಲ್​​​​​​​​ ಆರ್ಡರ್​ಗೆ ದೊಡ್ಡ ಬಲ: 
ಯೆಸ್​​, ಒಂದು ವೇಳೆ ಡಿಕೆ ಟಿ20 ವಿಶ್ವಕಪ್​​ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡ್ರೆ ಟೀಮ್​ ಇಂಡಿಯಾದ ಮಧ್ಯಮ್ರ ಕ್ರಮಾಂಕ ಬಲಿಷ್ಠಗೊಳ್ಳಲಿದೆ. ಟಾಪ್ ಆರ್ಡರ್​​ನಲ್ಲಿ  ರೋಹಿತ್​​​​, ರಾಹುಲ್​​​​, ಕೊಹ್ಲಿಯಂತ ಅನುಭವ ಆಟಗಾರರು ಇದ್ದಾರೆ. ಆದ್ರೆ ಮಿಡಲ್ ಆರ್ಡರ್​​​ನಲ್ಲಿ ಯಂಗ್​ ಸ್ಟರ್ಸ್​ಗಳಿದ್ದು, ಡಿಕೆ ಎಂಟ್ರಿಯಾದರೆ ಅನುಭವಿ ಫಿನಿಶರ್ ಸಿಕ್ಕಂತಾಗಲಿದೆ.

ರೀಸನ್​ ನಂ.2 - ಆರ್​ಸಿಬಿರ ಪರ ಅದ್ಭುತ ಫಾರ್ಮ್​: 
ವಿಕೆಟ್ ಕೀಪರ್ ದಿನೇಶ್​ ಕಾರ್ತಿಕ್​​​ ಆರ್​ಸಿಬಿ ಪರ ಧೂಳೆಬ್ಬಿಸಿದ್ದಾರೆ. ಆರು ಪಂದ್ಯಗಳಿಂದ 197 ರನ್​ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ಫಿನಿಶಿಂಗ್​ ಜವಾಬ್ದಾರಿ ನಿರ್ವಹಿಸ್ತಿದ್ದಾರೆ. ಈ ಹಾಟ್ ಫಾರ್ಮ್​ ಟಿ20 ವಿಶ್ವಕಪ್​​ನಲ್ಲಿ ಭಾರತಕ್ಕೆ ದೊಡ್ಡ ನೆರವಾಗಲಿದೆ. 

ರೀಸನ್​ ನಂ.2 - ಪಂತ್​​ಗೆ ಡಿಕೆ ಬ್ಯಾಕ್ ಅಪ್​ ವಿಕೆಟ್ ಕೀಪರ್​: 
ಡಿಕೆ ಬ್ಯಾಟಿಂಗ್ ಅಲ್ಲದೇ ವಿಕೆಟ ಕೀಪಿಂಗ್​​ನಲ್ಲಿ ಆರ್​ಸಿಬಿಗೆ ನೆರವಾಗ್ತಿದ್ದಾರೆ. 4 ಡಿಸ್ಮಿಸಲ್ಸ್  ಮಾಡಿದ್ದಾರೆ. ಹಾಗೂ ಕೀಪಿಂಗ್​ ಸದಾ ಆಕ್ಟೀವ್​​. ಆಯ್ಕೆಯಾದ್ರೆ ರಿಷಬ್​​ ಪಂತ್​​ಗೆ ಬೆಸ್ಟ್​​ ಬ್ಯಾಕ್ ಅಪ್​ ವಿಕೆಟ್​​​​​​​ ಕೀಪರ್ ಆಗಬಲ್ಲರು.

2022ರ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಟಿ20 ವಿಶ್ವಕಪ್‍ಗೆ ಭಾರತದ ಬಲಿಷ್ಠ ತಂಡ ಕಟ್ಟುವ ಯೋಜನೆಯಲ್ಲಿ ಬಿಸಿಸಿಐ ಇದೆ. ಹಾಗಾಗಿ ಬಿಸಿಸಿಐ ಈ ಬಾರಿಯ ಐಪಿಎಲ್‍ನಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಗಮನಹರಿಸಿದೆ. ಈ ಬಾರಿ ಐಪಿಎಲ್‍ನಲ್ಲಿ ಕಾರ್ತಿಕ್ ಅಬ್ಬರಿಸುತ್ತಿರುವುದನ್ನು ಗಮನಿಸುತ್ತಿರುವ ಬಿಸಿಸಿಐ ಆಯ್ಕೆ ಸಮಿತಿ ಕಾರ್ತಿಕ್‍ಗೆ ಮಣೆಹಾಕಿದರೂ ಅಚ್ಚರಿ ಪಡಬೇಕಾಗಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!