IPL 2022 ಟೂರ್ನಿಗೆ ಅಂಟಿಕೊಂಡ ಕೊರೋನಾ, ಡೆಲ್ಲಿ ತಂಡದಲ್ಲಿ ಮೊದಲ ಕೇಸ್ ಪತ್ತೆ

By Suvarna News  |  First Published Apr 15, 2022, 7:26 PM IST
  • ಬಯೋಬಬಲ್ ಒಳಗಿದ್ದರೂ ಪ್ಯಾಟ್ರಿಕ್‌ಗೆ ಕಾಣಿಸಿಕೊಂಡ ಸೋಂಕು
  • ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್
  • ಕ್ವಾರಂಟೈನ್‌ನಲ್ಲಿ ಫಿಸಿಯೋಗೆ ಚಿಕಿತ್ಸೆ, ತಂಡದಲ್ಲಿ ಹೈ ಅಲರ್ಟ್

ಮುಂಬೈ(ಏ.15): ಐಪಿಎಲ್ 2022 ಟೂರ್ನಿಯನ್ನು ಕೊರೋನಾದಿಂದ ಮುಕ್ತವಾಗಿರಿಸಲು ಬಿಸಿಸಿಐ ಬಯೋಬಬಲ್ ಸೇರಿದಂತೆ ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್‌ಗೆ ಕೊರೋನಾ ಕಾಣಿಸಿಕೊಂಡಿದೆ. ಐಪಿಎಲ್ 2022ರ ಟೂರ್ನಿಯಲ್ಲಿ ಕಾಣಿಸಿಕೊಂಡ ಮೊದಲ ಕೊರೋನಾ ಪ್ರಕರಣ ಇದಾಗಿದ್ದು, ಇದೀಗ ಐಪಿಎಲ್ ಟೂರ್ನಿಗೆ ಆತಂಕ ಎದುರಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ವೈದ್ಯಕೀಯ ತಂಡ ಪ್ಯಾಟ್ರಿಕ್ ಮೇಲ್ವಿಚಾರಣೆ ನಡೆಸುತ್ತಿದೆ. ಈಗಾಗಲೇ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೊರೋನಾ ಕಾಣಿಸಿಕೊಂಡಿರುವ ಕಾರಣ ಇದೀಗ ಬಯೋಬಲ್ ಸೇರಿದಂತೆ ಮಾರ್ಗಸೂಚಿ ಮತ್ತಷ್ಟು ಕಠಿಣ ಮಾಡಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಪ್ರಿಲ್ 16ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೋರಾಟ ನಡೆಸಲಿದೆ. 

Tap to resize

Latest Videos

IPL 2022: ಸ್ವಿಮ್ಮಿಂಗ್ ಫೂಲ್‌ನಲ್ಲಿ ಕ್ಯಾಚಿಂಗ್ ಅಭ್ಯಾಸ ಮಾಡಿದ ಧವನ್, ಜಾಂಟಿ ರೋಡ್ಸ್‌..!

2021ರ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭಗೊಂಡಿತ್ತು. ಆದರೆ ಕೊರೋನಾ ಕಾಣಿಸಿಕೊಂಡ ಕಾರಣ ಟೂರ್ನಿ ಸ್ಥಗಿತಗೊಂಡಿತ್ತು. ಬಳಿಕ ಯುಎಇನಲ್ಲಿ ಟೂರ್ನಿ ಆಯೋಜಿಸಲಾಗಿತ್ತು. 31 ಲೀಗ್ ಪಂದ್ಯಗಳ ಬಳಿಕ ಕೊರೋನಾ ಕಾರಣ ಟೂರ್ನಿ ಸ್ಥಗಿತಗೊಂಡಿತ್ತು. ಮೇ 4 ರಂದು ಬಿಸಿಸಿಐ ಟೂರ್ನಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಘೋಷಿಸಿತ್ತು. ಬಳಿಕ ಮಾರ್ಚ್ 29 ರಂದು ಯುಎಇನಲ್ಲಿ ಉಳಿದ ಪಂದ್ಯಗಳನ್ನು ಆಯೋಜಿಸುವುದಾಗಿ ಬಿಸಿಸಿಐ ಘೋಷಿಸಿತ್ತು. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ 2021ರ ಐಪಿಎಲ್ ಟೂರ್ನಿಯ ಉಳಿದ ಪಂದ್ಯಗಳನ್ನು ಬಿಸಿಸಿಐ ಯುಎಇನಲ್ಲಿ ಆಯೋಜಿಸಿತು.

ಇದೀಗ ಐಪಿಎಲ್ 2022 ಟೂರ್ನಿಯಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಮತ್ತೆ ಆತಂಕಕ್ಕೆ ಕಾರಣವಾಗಿದೆ. ಕಳೆದ ಆವೃತ್ತಿಯಲ್ಲಿ ಬೆರಳೆಣಿಕೆಯಲ್ಲಿದ್ದ ಪ್ರಕರಣ ದಿಢೀರ್ ತಂಡದ ಆಟಗಾರರಲ್ಲೂ ಕಾಣಿಸಿಕೊಂಡಿತ್ತು. ಇದೀಗ ಮುನ್ನಚ್ಚೆರಿಕೆ ವಹಿಸಿರುವ ಬಿಸಿಸಿಐ ಯಾವುದೇ ರೀತಿಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲೇನೂ ತಪ್ಪಿಲ್ಲ, ತಪ್ಪೆಲ್ಲಾ ಬೌಲರ್‌ಗಳದ್ದೇ ಎಂದ ಇಂಗ್ಲೆಂಡ್‌ ಕ್ರಿಕೆಟಿಗ..!

ಗರದಲ್ಲಿ 42 ಮಂದಿಗೆ ಸೋಂಕು: 48 ಗುಣಮುಖ
ನಗರದಲ್ಲಿ ಗುರುವಾರ 42 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 48 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 1,349 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 3,345 ನಡೆದಿದ್ದು, ಪಾಸಿಟಿವಿಟಿ ದರ ಶೇ.1ರಷ್ಟುದಾಖಲಾಗಿದೆ. ಬುಧವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 200 ಹೆಚ್ಚು ನಡೆದಿವೆ. ಆದರೆ, ಹೊಸ ಸೋಂಕಿತರ ಸಂಖ್ಯೆ 4 ಇಳಿಕೆಯಾಗಿವೆ. (ಬುಧವಾರ 46 ಕೇಸ್‌, ಸಾವು ಶೂನ್ಯ).

ಸದ್ಯ ಸಕ್ರಿಯ ಸೋಂಕಿತರ ಪೈಕಿ 6 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಈ ಪೈಕಿ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಹಾಸಿಗೆಯಲ್ಲಿ ತಲಾ ಒಬ್ಬರು, ಸಾಮಾನ್ಯ ಹಾಸಿಗೆಗಳಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 1,343 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 17.8 ಲಕ್ಷಕ್ಕೆ, ಗುಣಮುಖರ ಸಂಖ್ಯೆ 17.6 ಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 16,964 ಇದೆ. ಎರಡು ವಾರದಿಂದ ಸೋಂಕು ಹೆಚ್ಚಿರುವ ಕಂಟೈನ್ಮೆಂಟ್‌ ಪ್ರದೇಶಗಳು ವರದಿಯಾಗಿಲ್ಲ ಎಂದು ಬಿಬಿಎಂಪಿ ಕೊರೋನಾ ವರದಿಯಲ್ಲಿ ತಿಳಿಸಲಾಗಿದೆ.

18ರಿಂದ 59 ವರ್ಷ ವಯೋಮಾನದವರು ಬೂಸ್ಟರ್‌ ಡೋಸ್‌ ಕೊರೋನಾ ಲಸಿಕೆ ಪಡೆಯಲು ನೀರಸ ಪ್ರತಿಕ್ರಿಯೆ ತೋರುತ್ತಿರಲು ಮುಖ್ಯ ಕಾರಣ 2ನೇ ಡೋಸ್‌ ಮತ್ತು ಮುನ್ನೆಚ್ಚರಿಕಾ ಡೋಸ್‌ ಲಸಿಕೆ ನಡುವೆ 9 ತಿಂಗಳ ಅಂತರವಿರುವುದು ಕಾರಣ. ಇದಲ್ಲದೆ ಕೋವಿಡ್‌ ಹೋಗಿದೆ ಎಂಬ ಉದಾಸೀನವೂ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಬೂಸ್ಟರ್‌ ಡೋಸ್‌ ಬಗ್ಗೆ ನಿರ್ಲಕ್ಷ್ಯ ಬೇಡ ಎಂದೂ ಎಚ್ಚರಿಸಿದ್ದಾರೆ.

click me!