
ಮುಂಬೈ(ಏ.16): ಆರಂಭಿಕ ಹಿನ್ನಡೆ, ಮಧ್ಯಮಕ್ರಮಾಂಕ ಕುಸಿತದ ನಡುವೆ ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಚೇತರಿಕೆ ಕೊಟ್ಟಿತು. ಅಲ್ಪಮೊತ್ತಕ್ಕೆ ಕುಸಿಯು ಭೀತಿಯಿಂದ ಬೆಂಗಳೂರು ಪಾರಾಯಿತು. ಈ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಲೀಗ್ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್ 188 ನಷ್ಟಕ್ಕೆ ರನ್ ಸಿಡಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಆದರೆ ಆರಂಭ ಕಳೆಪೆಯಾಗಿತ್ತು. ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅನೂಜ್ ರಾವತ್ ಜೊತೆಯಾಟ ಆರಂಭದಲ್ಲೇ ಮುರಿದು ಬಿದ್ದಿತು. ಫಾಫ್ ಡುಪ್ಲೆಸಿಸ್ ಕೇವಲ 8 ರನ್ ಸಿಡಿಸಿ ಔಟಾದರು. ಅನೂಜ್ ರಾವತ್ ಡಕೌಟ್ ಆದರು. 13 ರನ್‌ಗಳಿಗೆ ಆರ್‌ಸಿಬಿ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.
IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!
ವಿರಾಟ್ ಕೊಹ್ಲಿ ಕೇವಲ 12 ರನ್ ಸಿಡಿಸಿ ರನೌಟ್ ಆದರು. ಇದು ಬೆಂಗಳೂರು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು. 40 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಆರ್‌ಸಿಬಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಹೋರಾಟ ನೀಡಿದರು. ಇತ್ತ ಸೂಯಷ್ ಪ್ರಭುದೇಸಾಯಿ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ 34 ಎಸೆತದಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 55 ರನ್ ಸಿಡಿಸಿದರು. ಮ್ಯಾಕ್ಸ್‌ವೆಲ್ ವಿಕೆಟ್ ಪತನದ ಬಳಿಕ ಶಹಬಾಜ್ ಅಹಮ್ಮದ್ ಹಾಗೂ ದಿನೇಶ್ ಕಾರ್ತಿಕ್ ಜೊತೆಯಾಟ ಬೆಂಗಳೂರು ತಂಡಕ್ಕೆ ನೆರವಾಯಿತು. ದಿನೇಶ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಬೆಚ್ಚಿ ಬಿದ್ದಿತು.
ಕೇವಲ 26 ಎಸೆತದಲ್ಲಿ ದಿನೇಶ್ ಕಾರ್ತಿಕ್ ಅರ್ಧತಕ ಪೂರೈಸಿದರು. ಕಾರ್ತಿಕ್ ಸಿಕ್ಸರ್ ಅಬ್ಬರಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ಒಂದು ಕ್ಷಣ ಬೆ್ಚ್ಚಿಬಿದ್ದರು. ದಿನೇಶ್ ಕಾರ್ತಿಕ್ 34 ಎಸೆತದಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 66 ರನ್ ಸಿಡಿಸಿದರು. ಇನ್ನು ಅಹಮ್ಮದ್ 20 ಎಸೆತದಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 31 ರನ್ ಸಿಡಿಸಿದರು.
ಈ ಬಾರಿಯ IPLನಲ್ಲಿ ನಾಯಕರುಗಳದ್ದೇ ಪ್ಲಾಫ್ ಶೋ..!
ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಶೆಹಬಾಜ್ ಅಹಮ್ಮದ್ ಹೋರಾಟದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ಕಳೆದುಕೊಂಡು 188 ರನ್ ಸಿಡಿಸಿತು. ಕಾರ್ತಿಕ್ ಹಾಗೂ ಅಹಮ್ಮದ್ 6ನೇ ವಿಕೆಟ್‌ಗೆ ಅಜೇಯ 97 ರನ್ ಜೊತೆಯಾಟ ನೀಡಿತು. ಈ ಮೂಲಕ 6ನೇ ವಿಕೆಟ್‌ಗೆ ಗರಿಷ್ಠ ರನ್ ಸಿಡಿಸಿ 3ನೇ ಜೋಡಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಐಪಿಎಲ್ ಟೂರ್ನಿಯಲ್ಲಿ 6ನೇ ವಿಕೆಟ್‌ಗೆ ಗರಿಷ್ಠ ಜೊತೆಯಾಟ
122* ಅಂಬಾಟಿ ರಾಯುಡು - ಕೀರನ್ ಪೊಲಾರ್ಡ್, MI v RCB 2012
104 ಡೇವಿಡ್ ಹಸ್ಸಿ - ವೃದ್ಧಿಮಾನ್ ಸಾಹ, KKR v PBKS 2008
97* ಶಹಬಾಜ್ ಅಹಮ್ಮದ್ - ದಿನೇಶ್ ಕಾರ್ತಿಕ್, RCB v DC 2022
ಇಂದು ನಡೆದ ಮೊದಲ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ 18 ರನ್ ಗೆಲುವು ಕಂಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದ ನಾಯಕ ಕೆಎಲ್ ರಾಹುಲ್ ಸೆಂಚುರಿ ಸಿಡಿಸಿ ಮಿಂಚಿದರು. ಕೆಎಲ್ ರಾಹುಲ್ 103 ರನ್ ಸಿಡಿಸಿ ಅಬ್ಬರಿಸಿದ್ದರು. ಇದರಿಂದ ಲಖನೌ ಸೂಪರ್ ಜೈಂಟ್ಸ್ 199 ರನ್ ಸಿಡಿಸಿತ್ತು. ಈ ಗುರಿಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಸತತ 6 ಸೋಲು ಕಂಡು ಸಂಕಷ್ಟಕ್ಕೆ ಸಿಲುಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.