IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!

Published : Apr 16, 2022, 07:33 PM ISTUpdated : Apr 16, 2022, 07:38 PM IST
IPL 2022 ರಾಹುಲ್ ಶತಕಕ್ಕೆ ಒಲಿದ ಗೆಲುವು, ಮುಂಬೈಗೆ ಸತತ 6ನೇ ಸೋಲು!

ಸಾರಾಂಶ

ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಆಘಾತ ನೀಡಿದ ಲಖನೌ ಬ್ಯಾಟಿಂಗ್ ಬೌಲಿಂಗ್‌ನಲ್ಲಿ ಲಖನೌ ದಿಟ್ಟ ಹೋರಾಟ 18 ರನ್ ಗೆಲುವು ದಾಖಲಿಸಿದ ಕೆಎಲ್ ರಾಹುಲ್ ಪಡೆ

ಮುಂಬೈ(ಏ.16): ಐಪಿಎಲ್ 2022 ಟೂರ್ನಿಯಲ್ಲಿ ಶತಕ, ಅಬ್ಬರದ ಬ್ಯಾಟಿಂಗ್, ಮಾರಕ ಬೌಲಿಂಗ್ ಮೂಲಕ ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ತೀವ್ರ ಕುತೂಹಲ ಕೆರಳಿಸಿತ್ತು. ಈ ರೋಚಕ ಪಂದ್ಯದಲ್ಲಿ ಲಖನೌ 18 ರನ್ ಗೆಲುವು ಕಂಡಿದೆ. ಆದರೆ ಮುಂಬೈ ಇಂಡಿಯನ್ಸ್ ಸತತ 6 ಪಂದ್ಯಗಳನ್ನು ಸೋತು ಕಂಗಾಲಾಗಿದೆ.

ಕೆಎಲ್ ರಾಹುಲ್ 103 ರನ್‌ಗಳ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ 4 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿತ್ತು. 200 ರನ್ ಟಾರ್ಗೆಟ್ ಪಡೆದ ಮುಂಬೈ ಇಂಡಿಯನ್ಸ್ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಇದರ ಜೊತೆಗೆ ಆರಂಭದಲ್ಲೇ ಮುಂಬೈ ವಿಕೆಟ್ ಕಳೆದುಕೊಂಡು ಹಿನ್ನಡ ಅನುಭವಿಸಿತು.

ಎಲ್ಲಿದ್ದಾರೆ ಯೂನಿವರ್ಸಲ್‌ ಬಾಸ್‌ ? IPL ಯಾಕೆ ಆಡುತ್ತಿಲ್ಲ Chris Gayle ?

ನಾಯಕ ರೋಹಿತ್ ಶರ್ಮಾ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಇಶಾನ್ ಕಿಶನ್ 17 ಎಸೆತದಲ್ಲಿ 13ರನ್ ಸಿಡಿಸಿ ಔಟಾದರು.  ಇತ್ತ ಆದರೆ ಡೆವಾಲ್ಡ್ ಬ್ರಿವಿಸ್ ಸ್ಫೋಟಕ ಬ್ಯಾಟಿಂಗ್ ಮುಂಬೈ ತಂಡಕ್ಕೆ ಕೊಂಚ ಚೇಚರಿಕೆ ನೀಡಿತು. ಬ್ರಿವಿಸ್ 13 ಎಸೆತದಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 31 ರನ್ ಸಿಡಿಸಿ ನಿರ್ಗಮಿಸಿದರು.

ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಹೋರಾಟ ಮುಂಬೈ ಇಂಡಿಯನ್ಸ್ ತಂಡಕ್ಕೆ ಚೇತರಿಕೆ ನೀಡಿತು. ಇವರಿಬ್ಬರ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿತು. ಆದರೆ ತಿಲಕ್ ವರ್ಮಾ 26 ರನ್ ಸಿಡಿಸಿ ನಿರ್ಗಮಿಸಿದರು. 

ಸೂರ್ಯಕುಮಾರ್ ಯಾದವ್ 27 ಎಸೆತದಲ್ಲಿ 37 ರನ್ ಸಿಡಿಸಿ ಔಟಾದರು. ಇತ್ತ ಕೀರನ್ ಪೋಲಾರ್ಡ್ ಹೋರಾಟ ನೀಡಿದರು. ಫ್ಯಾಬಿಯನ್ ಅಲೆನ್ 8 ರನ್ ಸಿಡಿಸಿ ಔಟಾದರು. ಅಂತಿಮ 12 ಎಸೆತದಲ್ಲಿ ಮುಂಬೈ ಇಂಡಿಯನ್ಸ್ ಗೆಲುವಿಗೆ 43 ರನ್ ಅವಶ್ಯಕತೆ ಇತ್ತು. ಪೊಲಾರ್ಡ್ ಹಾಗೂ ಜಯದೇವ್ ಉನದ್ಕಟ್ ಹೋರಾಟ ಲಖನೌ ತಂಡದ ತಲೆ ನೋವು ಹೆಚ್ಚಿಸಿತು.

IPL 2022 ತ್ರಿಪಾಠಿ, ಮಾರ್ಕ್ರಮ್ ಆಟಕ್ಕೆ ಕಂಗಾಲಾದ ಕೆಕೆಆರ್!

ಅಂತಿಮ 6 ಎಸೆತದಲ್ಲಿ 26 ರನ್ ಬೇಕಿತ್ತು. ಅಷ್ಟರಲ್ಲೇ ಎರಡು ರನ್ ಕದಿಯಲೆತ್ನಿಸಿದ ಕಾರಣ ಜಯದೇವ್ ಉನಾದ್ಕಟ್ ರನೌಟ್‌ಗೆ ಬಲಿಯಾದರು. ಉನಾದ್ಟಕ್ 14 ರನ್ ಸಿಡಿಸಿದರು. ನಂತರ ಬಂದ ಮುರುಗನ್ ಅಶ್ವಿನ್ ಸಿಕ್ಸರ್ ಸಿಡಿಸಿ ಮುಂಬೈ ಆತ್ಮವಿಶ್ವಾಸ ಹೆಚ್ಚಿಸಿದರು. ಆದರೆ ಮರು ಎಸೆತದಲ್ಲೇ ಮುರುಗನ್ ಅಶ್ವಿನ್ ವಿಕೆಚ್ ಕೈಚೆಲ್ಲಿದರು. 25 ರನ್ ಸಿಡಿಸಿದ ಕೀರನ್ ಪೋಲಾರ್ಡ್ ಕೂಡ ಔಟಾದರು. ಈ ಮೂಲಕ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 181 ರನ್ ಸಿಡಿಸಿತು. ಈ ಮೂಲಕ 18 ರನ್ ಸೋಲು ಕಂಡಿತು. ಲಖನೌ ಸೂಪರ್ ಜೈಂಟ್ಸ್ ರೋಚಕ ಗೆಲುವಿನೊಂದಿಗೆ ಕೇಕೇ ಹಾಕಿತು. 

ಲಖನೌ ಸೂಪರ್ ಜೈಂಟ್ಸ್ ಇನ್ನಿಂಗ್ಸ್
2022 ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಕೆಎಲ್ ರಾಹುಲ್ ಲಖೌನ್ ಸೂಪರ್ ಜೈಂಟ್ಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಕೆಎಲ್ ರಾಹುಲ್ 60 ಎಸೆತದಲ್ಲಿ 9 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 103 ರನ್ ಸಿಡಿಸಿದರು. ಇನ್ನು ಕ್ವಿಂಟನ್ ಡಿಕಾಕ್ 24 ರನ್ ಸಿಡಿಸಿ ಔಟಾದರು. ಮನೀಶ್ ಪಾಂಡೆ 29 ಎಸೆತದಲ್ಲಿ 38 ರನ್  ಸಿಡಿಸಿ ಔಟಾದರು. ಮಾರ್ಕಸ್ ಸ್ಟೊಯ್ನಿಸ್ 10, ದೀಪಕ್ ಹೂಡ 15 ರನ್ ಸಿಡಿಸಿದರು. ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್ 4 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!