ಹಾಲಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅರ್‌ಸಿಬಿ ವಿರುದ್ದ ಮೊದಲ ಪಂದ್ಯದ ಸೋಲಿನ ಬಳಿಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಚೆನ್ನೈ(ಏ.10): 14ನೇ ಆವೃತ್ತಿಯ ಐಪಿಎಲ್ ಉದ್ಭಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮುಗ್ಗರಿಸುವುದರೊಂದಿಗೆ ಇತಿಹಾಸ ಮರುಕಳಿಸಿದೆ. ಇದರೊಂದಿಗೆ ಸತತ 9ನೇ ವರ್ಷವೂ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲಿನ ಕಹಿಯೊಂದಿಗೆ ಟೂರ್ನಿ ಆರಂಭಿಸಿದೆ.
ಹೌದು, ಇಲ್ಲಿನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಮುಂಬೈ ಇಂಡಿಯನ್ಸ್ 2 ವಿಕೆಟ್‌ಗಳ ಅಂತರದ ರೋಚಕ ಸೋಲು ಅನುಭವಿಸಿದೆ. ಇದರ ಬೆನ್ನಲ್ಲೇ ಮೊದಲ ಪಂದ್ಯದ ಸೋಲಿನ ಬಗ್ಗೆ ರೋಹಿತ್ ಶರ್ಮಾ ಮೊದಲ ಪಂದ್ಯ ಗೆಲ್ಲುವುದು ಮುಖ್ಯವಲ್ಲ ಬದಲಾಗಿ ಚಾಂಪಿಯನ್ ಆಗುವುದು ಮುಖ್ಯ ಎಂದು ಆರ್‌ಸಿಬಿ ಕಾಲೆಳೆದಿದ್ದಾರೆ.
undefined
2013ರಿಂದೀಚೆಗೆ ಮುಂಬೈ ಇಂಡಿಯನ್ಸ್ ತಂಡ ಸತತ 9ನೇ ಬಾರಿಗೆ ಮೊದಲ ಪಂದ್ಯದಲ್ಲಿ ಸೋಲುಂಡಿದೆ. ಈ ಪೈಕಿ 8 ಪೂರ್ಣ ಆವೃತ್ತಿಗಳನ್ನಾಡಿ 5 ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಆರ್‌ಸಿಬಿ ವಿರುದ್ದದ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, ಮೊದಲ ಪಂದ್ಯ ಗೆಲ್ಲುವುದಕ್ಕಿಂತ ಚಾಂಪಿಯನ್‌ಶಿಪ್ ಗೆಲ್ಲುವುದು ಮುಖ್ಯ ಎಂದು ನನಗನಿಸುತ್ತಿದೆ. ಕೊನೆಯವರೆಗೂ ನಾವು ಒಳ್ಳೆಯ ಹೋರಾಟ ನೀಡಿದೆವು. ಅಷ್ಟು ಸುಲಭವಾಗಿ ನಾವು ಎದುರಾಳಿ ತಂಡ ಗೆಲುವು ಸಾಧಿಸಲು ಬಿಡಲಿಲ್ಲ. ಪಂದ್ಯದಲ್ಲಿ ನಾವು ಕೆಲವೊಂದು ತಪ್ಪುಗಳನ್ನು ಮಾಡಿದೆವು, ಇದೆಲ್ಲಾ ಆಟದಲ್ಲಿ ಸಹಜ. ಮುಂದಿನ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು ಎಂದು ಹೇಳಿದ್ದಾರೆ.
win the 2021 season opener against by two wickets.
Scorecard - https://t.co/PiSqZirK1V pic.twitter.com/87Cu6fkXO3
ಡಿವಿಲಿಯರ್ಸ್ ಅಬ್ಬರಕ್ಕೆ ಮುಂಬೈ ಧೂಳೀಪಟ: 14ನೇ ಆವೃತ್ತಿಯಲ್ಲಿ ಆರ್‌ಸಿಬಿ ಶುಭಾರಂಭ!
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಏಪ್ರಿಲ್ 13ರಂದು ಇದೇ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.