IPL 2021: ಮುಂಬೈಗೆ 166 ರನ್ ಟಾರ್ಗೆಟ್, ಗೆಲುವಿನ ವಿಶ್ವಾಸದಲ್ಲಿ RCB!

By Suvarna NewsFirst Published Sep 26, 2021, 9:19 PM IST
Highlights
  • ಮುಂಬೈ ವಿರುದ್ಧ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಬೆಂಗಳೂರು
  • ಮುಂಬೈಗೆ 166 ರನ್ ಗುರಿ ನೀಡಿದ ಕೊಹ್ಲಿ ಸೈನ್ಯ
  • ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ದುಬೈ(ಸೆ.26):  ವಿರಾಟ್ ಕೊಹ್ಲಿ(Virat Kohli), ಗ್ಲೆನ್ ಮ್ಯಾಕ್ಸ್‌ವೆಲ್ ಹಾಫ್ ಸೆಂಚುರಿ, ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಅಬ್ಬರಿಸಿದೆ. ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ(RCB) 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿದೆ.  ಈ ಮೂಲಕ IPL 2021 ಎರಡನೇ ಭಾಗದಲ್ಲಿ ಆರ್‌ಸಿಬಿ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಲಯಕ್ಕೆ ಮರಳಿದೆ.

IPL 2021: ಜಡೇಜಾ ಹೀರೋ, ಕೆಕೆಆರ್ ಎದುರು ರೋಚಕ ಜಯ ಸಾಧಿಸಿದ ಸಿಎಸ್‌ಕೆ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು ಸುಳ್ಳಲ್ಲ. ಕಾರಣ ಎರಡನೇ ಓವರ್‌ನಲ್ಲೇ ದೇವದತ್ ವಿಕೆಟ್ ಪತನಗೊಂಡಿದೆ. ಪಡಿಕ್ಕಲ್ ಡಕೌಟ್ ಆದರು. 7 ರನ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ವಿಕೆಟ್ ಪತನಗೊಂಡಿತು. ಆದರೆ ನಾಯಕ ವಿರಾಟ್ ಕೊಹ್ಲಿ ಇಂದು ಈ ಹಿಂದಿನ ಕಳಪೆ ಪ್ರದರ್ಶನಕ್ಕೆ ಬ್ಯಾಟ್ ಮೂಲಕ ಉತ್ತರ ನೀಡಲು ರೆಡಿಯಾಗಿದ್ದರು.

ಕೊಹ್ಲಿ ಹಾಗೂ ಎಸ್ ಭರತ್ ಜೊತೆಯಾಟ ಆರ್‌ಸಿಬಿ ತಂಡದಲ್ಲಿ ಹೊಸ ಚೈತನ್ಯ ಮೂಡಿಸಿತು. ಎರಡನೇ ವಿಕೆಟ್‌ಗೆ ಈ ಜೋಡಿ 68 ರನ್ ಜೊತೆಯಾಟ ನೀಡಿತು. ಭರತ್ 32 ರನ್ ಸಿಡಿಸಿ ಔಟಾದರು. ಇತ್ತ ಕೊಹ್ಲಿ ಆರ್ಭಟ ಮುಂದುವರಿಯಿತು. ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಜೊತೆ ಕೊಹ್ಲಿ ಬ್ಯಾಟಿಂಗ್ ಮುಂದುವರಿಸಿದರು.

IPL 2021: ಸುಲಭ ಟಾರ್ಗೆಟ್ ಪಡೆದ ಹೈದರಾಬಾದ್‌ಗೆ ಶಾಕ್, ಪಂಜಾಬ್‌ ಕಿಂಗ್ಸ್‌ಗೆ 5 ರನ್ ಗೆಲುವು!

ಅಬ್ಬರಿಸಿದ ವಿರಾಟ್ ಕೊಹ್ಲಿ ಹಾಫ್ ಸೆಂಚುರಿ ಸಿಡಿಸಿದರು. ಈ ಮೂಲಕ ಸತತ 2ನೇ ಹಾಫ್ ಸೆಂಚುರಿ ದಾಖಲಿಸಿದರು. ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧವೂ ಕೊಹ್ಲಿ ಅರ್ಧಶತಕ ಸಿಡಿಸಿದ್ದರು.  ಮ್ಯಾಕ್ಸ್‌ವೆಲ್ ಕೂಡ ಉತ್ತಮ ಸಾಥ್ ನೀಡಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಕೊಹ್ಲಿ ವಿಕೆಟ್ ಪತನಗೊಂಡಿದೆ.

ಕೊಹ್ಲಿ 51 ರನ್ ಸಿಡಿಸಿ ಔಟಾದರು. ಬಳಿಕ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಎಬಿ ಡಿವಿಲಿಯರ್ಸ್(AB de Villiers) ಹೋರಾಟ ಆರ್‌ಸಿಬಿ ತಂಡಕ್ಕೆ ನೆರವಾಯಿತು. ಕೊಹ್ಲಿ ವಿಕೆಟ್ ಪತನದ ಬಳಿಕ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಅಬ್ಬರ ಜೋರಾಯಿತು. ಮ್ಯಾಕ್ಸ್‌ವೆಲ್ ಕೂಡ ಹಾಫ್ ಸೆಂಚುರಿ ದಾಖಲಿಸಿದರು. ಮ್ಯಾಕ್ಸ್‌ವೆಲ್ 56 ರನ್ ಸಿಡಿಸಿ ಔಟಾದರು. 

IPL 2021 ಚೆಂದಕ್ಕಿಂತ ಚೆಂದ : ಇಲ್ಲಿವೆ ನೋಡಿ ಟಾಪ್‌ 10 CSK ಕ್ರಿಕೆಟಿಗರ ಸುಂದರ ಮಡದಿಯರು..!

ಮುಂಬೈ(Mumbai Indians) ವಿರುದ್ಧ ಪ್ರತಿ ಬಾರಿ ಎಬಿ ಡಿವಿಲಿಯರ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಡೆತ್ ಓವರ್‌ನಲ್ಲಿ ಎಬಿಡಿ ಅಬ್ಬರಕ್ಕೆ ಮುಂಬೈ ಹೈರಾಣಾಗಿದೆ. ಆದರೆ ಇಂದಿನ ಪಂದ್ಯದಲ್ಲಿ ಎಬಿಡಿ 11 ರನ್ ಸಿಡಿಸಿ ಔಟಾದರು. ಮ್ಯಾಕ್ಸ್‌ವೆಲ್ ಹಾಗೂ ಎಬಿಡಿ ವಿಕೆಟ್ ಪತನದಿಂದ ಆರ್‌ಸಿಬಿ ರನ್ ವೇಗಕ್ಕೆ ಕಡಿವಾಣ ಬಿತ್ತು.

 ಶಹಬಾಜ್ ಅಹಮ್ಮದ್ 1 ರನ್ ಸಿಡಿಸಿ ಔಟಾದರು. ಡೇನಿಯಲ್ ಕ್ರಿಶ್ಚಿಯನ್ ಅಜೇಯ 1 ರನ್ ಹಾಗೂ ಕೈಲ್ ಜ್ಯಾಮಿನ್ಸನ್ ಅಜೇಯ 2 ರನ್ ಸಿಡಿಸಿದರು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ನಷ್ಟಕ್ಕೆ 165 ರನ್ ಸಿಡಿಸಿತು. ಇದೀಗ ಮುಂಬೈ ಗೆಲುವಿಗೆ 166 ರನ್ ಟಾರ್ಗೆಟ್ ಪಡೆದಿದೆ. ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್, ಟ್ರೆಂಟ್ ಬೋಲ್ಟ್, ರಾಹುಲ್ ಚಹಾರ್ ಹಾಗೂ ಆ್ಯಡಮ್ ಮಿಲ್ನೆ ತಲಾ 1 ವಿಕೆಟ್ ಕಬಳಿಸಿದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಸ್ಥಾನದ ರೇಸ್ ಮತ್ತಷ್ಟು ಪೈಪೋಟಿಯಿಂದ ಕೂಡಿದೆ. ಹೀಗಾಗಿ ಇಂದಿನ ಪಂದ್ಯದ ಗೆಲುವು ಮುಖ್ಯವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಅಂಕ 12 ಆಗಲಿದೆ. ಆದರೆ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕಾರಣ ಮೊದಲ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 16 ಅಂಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ 16 ಅಂಕ ಪಡೆದು 2ನೇ ಸ್ಥಾನದಲ್ಲಿದೆ.

ಮುಂಬೈ ಇಂಡಿಯನ್ಸ್‌ಗೆ ಇಂದಿನ ಗೆಲುವು ಅನಿವಾರ್ಯವಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಮತ್ತೊಂದು ಸೋಲು ಮುಂಬೈ ತಂಡದ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಲಿದೆ. 
 

click me!