IPL 2021: 699 ದಿನಗಳ ಬಳಿಕ ಕ್ರಿಕೆಟ್‌ಗೆ ಭಜ್ಜಿ ವಾಪಸ್‌!

By Suvarna News  |  First Published Apr 12, 2021, 8:44 AM IST

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಬರೋಬ್ಬರಿ 699 ದಿನಗಳ ಬಳಿಕ ಐಪಿಎಲ್‌ಗೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಚೆನ್ನೈ(ಏ.12): ಭಾರತದ ಹಿರಿಯ ಆಫ್‌ ಸ್ಪಿನ್ನರ್‌, 40 ವರ್ಷದ ಹರ್ಭಜನ್‌ ಸಿಂಗ್‌ ಭಾನುವಾರ ಕೋಲ್ಕತಾ ನೈಟ್‌ರೈಡ​ರ್ಸ್‌ ತಂಡದ ಪರ ಮೊದಲ ಬಾರಿಗೆ ಐಪಿಎಲ್‌ ಪಂದ್ಯವನ್ನಾಡಿದರು. 699 ದಿನಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಾಪಸಾದ ಹರ್ಭಜನ್‌ರನ್ನು ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಸ್ವಾಗತಿಸಿದರು. 

2019ರ ಮೇ 12ರಂದು ನಡೆದಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವಿನ ಫೈನಲ್‌ ಪಂದ್ಯದಲ್ಲಿ ಅವರು ಕೊನೆ ಬಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಕಾಣಿಸಿಕೊಂಡಿದ್ದರು. ಕೊರೋನಾ ಭೀತಿಯಿಂದಾಗಿ 2020ರ ಐಪಿಎಲ್‌ನಿಂದ ಹಿಂದೆ ಸರಿದಿದ್ದ ಹರ್ಭಜನ್‌ರನ್ನು ಈ ಬಾರಿ ಆಟಗಾರರ ಹರಾಜಿನಲ್ಲಿ ಕೆಕೆಆರ್‌ ಅವರ ಮೂಲಬೆಲೆ 2 ಕೋಟಿ ರು. ನೀಡಿ ಖರೀದಿಸಿತ್ತು. 

Tap to resize

Latest Videos

IPL 2021: ಮನೀಶ್ ಪಾಂಡೆ ಹೋರಾಟ ವ್ಯರ್ಥ; ಕೆಕೆಆರ್‌ಗೆ 10 ರನ್ ರೋಚಕ ಗೆಲುವು!

ಐಪಿಎಲ್‌ನಲ್ಲಿ ಪಂಜಾಬ್‌ ಪರ ಕೆಲ ವರ್ಷಗಳ ಕಾಲ ಆಡಿದ್ದ ಹರ್ಭಜನ್‌ ಆ ಬಳಿಕ ಹಲವು ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಬಳಿಕ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಕೆಕೆಆರ್ ಪರ ಪಂದ್ಯದ ಮೊದಲ ಓವರ್ ಬೌಲಿಂಗ್‌ ಮಾಡಿದ ಭಜ್ಜಿ 8 ರನ್‌ ನೀಡಿದ್ದರು. ಅದಾದ ಬಳಿಕ ಭಜ್ಜಿ ಬೌಲಿಂಗ್‌ ಮಾಡಲಿಲ್ಲ. 4ನೇ ಎಸೆತದಲ್ಲೇ ಭಜ್ಜಿ ಬೌಲಿಂಗ್‌ನಲ್ಲಿ ಡೇವಿಡ್‌ ವಾರ್ನರ್ ಕ್ಯಾಚ್‌ ನೀಡಿದರಾದರೂ ಪ್ಯಾಟ್ ಕಮಿನ್ಸ್‌ ಕೈಚೆಲ್ಲಿದರು.

Warner survives. Did Cummins drop the match?? pic.twitter.com/UlKsnssT0B

— AK #MI💙 (@rantworld101)

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕೋಲ್ಕತ ನೈಟ್‌ ರೈಡರ್ಸ್‌  6 ವಿಕೆಟ್ ಕಳೆದುಕೊಂಡು 187 ರನ್‌ ಬಾರಿಸಿತ್ತು. ಇದಕ್ಕುತ್ತರವಾಗಿ ಸನ್‌ರೈಸರ್ಸ್‌ ಹೈದರಾಬಾದ್‌ ಮನೀಶ್ ಪಾಂಡೆ ಹಾಗೂ ಜಾನಿ ಬೇರ್‌ಸ್ಟೋವ್‌ ಸ್ಪೋಟಕ ಅರ್ಧಶತಕದ ಹೊರತಾಗಿಯೂ 10 ರನ್‌ಗಳ ರೋಚಕ ಸೋಲು ಅನುಭವಿಸಿತು

click me!