IPL 2021: ರಾಣಾ, ತ್ರಿಪಾಠಿ ಹಾಫ್ ಸೆಂಚುರಿ; ಹೈದರಾಬಾದ್‌ಗೆ ಬೃಹತ್ ಗುರಿ!

By Suvarna NewsFirst Published Apr 11, 2021, 9:12 PM IST
Highlights

 ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಕೋಲ್ಕತಾ ನೈಟ್ ರೈಡರ್ಸ್ ಉತ್ತಮ ಮೊತ್ತ ಕಲೆಹಾಕಿದೆ. ಕೆಕೆಆರ್ ಬ್ಯಾಟಿಂಗ್ ಹಾಗೂ ಹೈದರಾಬಾದ್ ಬೌಲಿಂಗ್ ವಿವರ ಇಲ್ಲಿದೆ.

ಚೆನ್ನೈ(ಏ.11):  ನಿತೀಶ್ ರಾಣಾ ಸ್ಫೋಟಕ ಬ್ಯಾಟಿಂಗ್ , ರಾಹುಲ್ ತ್ರಿಪಾಠಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರೆ, ಉಳಿದ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ರನ್‌ ಹರಿದು ಬರಲಿಲ್ಲ. ಹೀಗಾಗಿ  ಸನ್‌ರೈಸರ್ಸ್ ಹೈದರಾಬಾದ್  ವಿರುದ್ಧ ಕೆಕೆಆರ್ ವಿಕೆಟ್ 8 ನಷ್ಟಕ್ಕೆ 187 ರನ್ ಸಿಡಿಸಿದೆ.

ಪಾಕ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ಪತ್ರಕರ್ತನಿಗೂ ತಿರುಗೇಟು ನೀಡಿದ ವೆಂಕಟೇಶ್ ಪ್ರಸಾದ್!.

ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್‌ಗೆ ನಿತೀಶ್ ರಾಣಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ಗಿಲ್ 15 ರನ್ ಸಿಡಿಸಿ ಔಟಾದರು. ಇತ್ತ ರಾಣಾ ಹೋರಾಟ ಮುಂದುವರಿಯಿತು. ರಾಹುಲ್ ತ್ರಿಪಾಠಿ ಹಾಗೂ ರಾಣಾ ಜೊತೆಯಾದಿಂದ ಕೆಕೆಆರ್ ಚೇತರಿಸಿಕೊಂಡಿತು. ರಾಣಾ ಹಾಗೂ ತ್ರಿಪಾಠಿ ಅರ್ಧಶತಕ ಸಿಡಿಸಿ ಮಿಂಚಿದರು.

ರಾಹುಲ್ ತ್ರಿಪಾಠಿ 53 ರನ್ ಸಿಡಿಸಿ ಔಟಾದರೆ, ಆ್ಯಂಡ್ರೆ ರಸೆಲ್ ಕೇವಲ 5 ರನ್ ಸಿಡಿಸಿ ಔಟಾದರು. ಆದರೆ ರಾಣಾ ಯಾವ ಸವಾಲಿಗೂ ಜಗ್ಗದೇ  ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇತ್ತ ಇಯಾನ್ ಮಾರ್ಗನ್ ಕೇವಲ 2 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ರನ್‌ಗಿಂತ ಹೆಚ್ಚು ವಿಕೆಟ್ ಪತನಗೊಂಡಿತು.

ದಿನೇಶ್ ಕಾರ್ತಿಕ್ ಹಾಗೂ ಶಕೀಬ್ ಅಲ್ ಹಸನ್ ಜೊತೆಯಾಟದಿಂದ ಕೆಕೆಆರ್ ಅಂತಿಮ ಹಂತದಲ್ಲಿ ರನ್ ಕಲೆಹಾಕಿತು. ಕಾರ್ತಿಕ್ ಅಜೇಯ 22 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ ವಿಕೆಟ್ 6 ನಷ್ಟಕ್ಕೆ 187 ರನ್ ಸಿಡಿಸಿತು. 

click me!