IPL 2021: ಮನೀಶ್ ಪಾಂಡೆ ಹೋರಾಟ ವ್ಯರ್ಥ; ಕೆಕೆಆರ್‌ಗೆ 10 ರನ್ ರೋಚಕ ಗೆಲುವು!

By Suvarna News  |  First Published Apr 11, 2021, 11:06 PM IST

ಕೆಕೆಆರ್ ಹಾಗೂ ಸನ್‌ರೈಸರ್ಸ್ ನಡುವಿನ ಪಂದ್ಯ ಒಂದೊಂದು ಓವರ್‌ನಲ್ಲಿ ಒಂದೊಂದು ಕಡೆ ವಾಲುತ್ತಿತ್ತು. ಕೊನೆ ಹಂತದಲ್ಲಿ ಮನೀಶ್ ಪಾಂಡೆ ಹಾಗೂ ಅಬ್ದುಲ್ ಸಮಾದ್ ಬ್ಯಾಟಿಂಗ್‌ನಿಂದ ಹೈದರಾಬಾದ್ ಕಡೆ ವಾಲಿತ್ತು. ಆದರೆ ಕೆಕೆಆರ್, ಹೈದರಾಬಾದ್ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. 


ಚೆನ್ನೈ(ಏ.11):  ಕನ್ನಡಿಗ ಮನೀಶ್ ಪಾಂಡೆ ಕಠಿಣ ಹೋರಾಟ ನೀಡಿದರೂ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲುವು ಸಿಗಲಿಲ್ಲ. ಕೆಕೆಆರ್ ಬ್ಯಾಟಿಂಗ್ ಹಾಗೂ ಕರಾರುವಕ್ ಬೌಲಿಂಗ್ ದಾಳಿ ಮುಂದೆ ಸನ್‌ರೈಸರ್ಸ್ ಹೈದರಾಬಾದ್ ಮಂಡಿಯೂರಿದೆ. ಆಲ್ರೌಂಡರ್ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ 10 ರನ್ ಗೆಲುವು ಕಂಡಿದೆ.

ಗೆಲುವಿಗೆ 188 ರನ್ ಟಾರ್ಗೆಟ್ ಪಡೆದ ಸನ್‌ರೈಸರ್ಸ್ ಹೈದರಾಬಾದ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ವೃದ್ಧಿಮಾನ್ ಸಾಹ ಹಾಗೂ ನಾಯಕ ಡೇವಿಡ್ ವಾರ್ನರ್ ಆರಂಭ ಕೇವಲ 10 ರನ್‌ಗಳಿಗೆ ಸಿಮೀತವಾಯಿತು. ಸಾಹ 7 ರನ್ ಸಿಡಿಸಿ ಔಟಾದರೆ, ವಾರ್ನರ್ 3 ರನ್ ಸಿಡಿಸಿ ಪೆಲಿಯನ್ ಸೇರಿಕೊಂಡರು.

Tap to resize

Latest Videos

ಕನ್ನಡಿಗ ಮನೀಶ್ ಪಾಂಡೆ ಬ್ಯಾಟಿಂಗ್ ಹೈದರಾಬಾದ್ ತಂಡಕ್ಕೆ ಚೇತರಿಕೆ ನೀಡಿತು. ಪಾಂಡೆ ಹಾಗೂ ಜಾನಿ ಬೈರ್‌ಸ್ಟೋ ಜೊತೆಯಾಟದಿಂದ ಸನ್‌ರೈಸರ್ಸ್ ಮತ್ತೆ ಹೋರಾಟ ಆರಂಭಿಸಿತು. ಬೈರ್‌ಸ್ಟೋ ಹಾಫ್ ಸೆಂಚುರಿ ಸಿಡಿಸಿ ಸಂಭ್ರಮಿಸಿದರು. ಹಾಫ್ ಸೆಂಚುರಿ ಬೆನ್ನಲ್ಲೇ ಬೈರ್‌ಸ್ಟೋ ವಿಕೆಟ್ ಪತನಗೊಂಡಿತು. ಬೈರ್‌ಸ್ಟೋ 55 ರನ್ ಸಿಡಿಸಿ ಔಟಾದರು. 

ಮೊಹಮ್ಮದ್ ನಬಿ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಪಾಂಡೆ ಹೈದರಾಬಾದ್ ತಂಡದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಬ್ಯಾಟಿಂಗ್ ಮುಂದುವರಿಸಿದರು. ಆದರೆ ನಬಿ 14 ರನ್ ಸಿಡಿಸಿ ಔಟಾದರು. ಪಾಂಡೆ ಹಾಗೂ ವಿಜಯ್ ಶಂಕರ್ ಬಿರುಸಿನ ಆಟಕ್ಕೆ ಮುಂದಾದರು. ಅಂತಿಮ 12 ಎಸೆತದಲ್ಲಿ ಹೈದರಾಬಾದ್ ಗೆಲುವಿಗೆ 38 ರನ್ ಅವಶ್ಯಕತೆ ಇತ್ತು.

ಪಂದ್ಯ ರೋಚಕ ಘಟ್ಟ ತಲುಪುತ್ತಿದ್ದಂತೆ 11 ರನ್ ಸಿಡಿಸಿ ವಿಜಯ್ ಶಂಕರ್ ವಿಕೆಟ್ ಪತನಗೊಂಡಿತು. ಅಬ್ದುಲ್ ಸಮಾದ್ 2 ಸಿಕ್ಸರ್ ಸಿಡಿಸಿದ್ರೆ, ಅಂತಮ ಎಸೆತದಲ್ಲಿ ಮನೀಶ್ ಪಾಂಡೆ ಕೂಡ ಸಿಕ್ಸರ್ ಸಿಡಿಸಿದರು. ಆದರೆ ಗೆಲುವು ಮಾತ್ರ ಸಿಗಲಿಲ್ಲ. ಕೆಕೆಆರ್ 10 ರನ್ ರೋಚಕ ಗೆಲುವು ಕಂಡಿತು. ಈ ಮೂಲಕ ಕೆಕೆಆರ್ 14ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

click me!