'ಟಾಮ್‌ ಅಂಡ್‌ ಜೆರ್ರಿ ಒಂದೇ ತಂಡದಲ್ಲಿ'; ವಿನೂತನವಾಗಿ ಮ್ಯಾಕ್ಸ್‌ವೆಲ್‌ ಸ್ವಾಗತಿಸಿದ ಚಹಲ್‌

By Suvarna News  |  First Published Feb 20, 2021, 12:30 PM IST

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಕೂಡಿಕೊಂಡಿರುವ ಮ್ಯಾಕ್ಸ್‌ವೆಲ್‌ರನ್ನು ಯುಜುವೇಂದ್ರ ಚಹಲ್ ವಿನೂತನವಾಗಿ ಸ್ವಾಗತಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 


ಬೆಂಗಳೂರು(ಫೆ.20): ಟೀಂ ಇಂಡಿಯಾ ಸ್ಪಿನ್ನರ್‌ ಯುಜುವೇಂದ್ರ ಚಹಲ್‌ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ವಿನೂತನವಾಗಿ ಸ್ವಾಗತಿಸಿದ್ದಾರೆ. ಚೆನ್ನೈನಲ್ಲಿ ನಡೆದ 14ನೇ ಅವೃತ್ತಿಯ ಆಟಗಾರರ ಹರಾಜಿನಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ಬರೋಬ್ಬರಿ 14.25 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಈ ಮೂಲಕ ಈ ಬಾರಿಯ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾದ ಮೂರನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಮ್ಯಾಕ್ಸ್‌ವೆಲ್‌ ಪಾತ್ರರಾಗಿದ್ದಾರೆ.

14ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ಮೋಯಿನ್ ಅಲಿ ಹಾಗೂ ಕ್ರಿಸ್‌ ಮೋರಿಸ್‌ ಅವರಂತಹ ಸ್ಟಾರ್ ಆಟಗಾರರನ್ನು ರಿಲೀಸ್‌ ಮಾಡಿದ ಬೆನ್ನಲ್ಲೇ ಉತ್ತಮ ಆಲ್ರೌಂಡರ್‌ನ ಹುಡುಕಾಟದಲ್ಲಿತ್ತು. ಗ್ಲೆನ್‌ ಮ್ಯಾಕ್ಸ್‌ವೆಲ್‌ ಖರೀದಿಸಲು ಚೆನ್ನೈ ಸೂಪರ್‌ ಕಿಂಗ್ಸ್ ಹಾಗೂ ಕೋಲ್ಕತ ನೈಟ್ ರೈಡರ್ಸ್‌ ಸಾಕಷ್ಟು ಪೈಪೋಟಿ ನಡೆಸಿದವಾದರೂ ಪಟ್ಟು ಬಿಡದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ದುಬಾರಿ ಮೊತ್ತ ನೀಡಿ ಆಸ್ಟ್ರೇಲಿಯಾ ಆಲ್ರೌಂಡರ್‌ನನ್ನು ತನ್ನ ಕಡೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Tap to resize

Latest Videos

IPL ಹರಾಜಿನಲ್ಲಿ ಖರೀದಿಸಿದ RCB ಪ್ಲೇಯರ್ಸ್; ಇಲ್ಲಿದೆ ಫುಲ್ ಲಿಸ್ಟ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್‌ ಆರ್‌ಸಿಬಿ ತಂಡಕ್ಕೆ ಗ್ಲೆನ್‌ ಮ್ಯಾಕ್ಸ್‌ವೆಲ್‌ರನ್ನು ವಿನೂತನವಾಗಿ ಸ್ವಾಗತಿಸಿದ್ದಾರೆ. ಕೊನೆಗೂ ಟಾಮ್‌ ಅಂಡ್‌ ಜೆರ್ರಿ ಒಂದೇ ತಂಡ ಸೇರಿಕೊಂಡವು. ಆರ್‌ಸಿಬಿ ಕುಟುಂಬಕ್ಕೆ ಸ್ವಾಗತ ಸಹೋದರ ಎಂದು ಚಹಲ್‌ ಆಸೀಸ್‌ ಆಲ್ರೌಂಡರ್‌ನನ್ನು ಸ್ವಾಗತಿಸಿದ್ದಾರೆ.

ಈ ಹಿಂದೆ 2013ರಲ್ಲಿ ಯುಜುವೇಂದ್ರ ಚಹಲ್ ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಮುಂಬೈ ಇಂಡಿಯನ್ಸ್‌ ಪರ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇನ್ನು ಕಳೆದ ಆವೃತ್ತಿಯಲ್ಲಿ ಪಂಜಾಬ್‌ ಫ್ರಾಂಚೈಸಿ 10.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಅದರೆ ಮ್ಯಾಕ್ಸ್‌ವೆಲ್‌ 13 ಪಂದ್ಯಗಳನ್ನಾಡಿ 108 ರನ್‌ ಗಳಿಸಲಷ್ಟೇ ಶಕ್ತವಾಗಿದ್ದರು. ಹೀಗಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಕ್ಸ್‌ವೆಲ್‌ ಯಾವರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
 

click me!