
ಚೆನ್ನೈ(ಏ.21): ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್, ಗೆಲುವಿನ ಖಾತೆ ತೆರೆಯಲು ತುಡಿಯುತ್ತಿದೆ. ಬುಧವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ಸನ್‌ರೈಸರ್ಸ್ ಹೈದರಾಬಾದ್ ಪರ ಕೇನ್ ವಿಲಿಯಮ್ಸನ್ ಕಣಕ್ಕಿಳಿಯುವುದು ಬಹುತೇಕ ಖಚಿತವೆನಿಸಿದ್ದು, ತಂಡದ ಅದೃಷ್ಟ ಬದಲಿಸಲಿದ್ದಾರೆ ಎನ್ನುವ ನಿರೀಕ್ಷೆ ಹೈದರಾಬಾದ್ ಅಭಿಮಾನಿಗಳದ್ದಾಗಿದೆ. ಎಲ್ಲಾ ಮೂರು ವಿಭಾಗಗಳಲ್ಲಿ ಸನ್‌ರೈಸರ್ಸ್ ಸುಧಾರಿತ ಆಟವಾಡಬೇಕಿದೆ.
ಮುಂಬೈ ಸದ್ದಡಗಿಸಿದ ಡೆಲ್ಲಿ; ಪಂತ್ ಸೈನ್ಯಕ್ಕೆ 6 ವಿಕೆಟ್ ಗೆಲುವು!
ಮತ್ತೊಂದೆಡೆ ಕೆ.ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಸ್ಥಿತಿ ಸಹ ಉತ್ತಮವಾಗೇನೂ ಇಲ್ಲ. ತಂಡ ಸತತ 2 ಸೋಲು ಕಂಡಿದ್ದು, ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳಲು ಹೋರಾಡಲಿದೆ.
ಪಿಚ್ ರಿಪೋರ್ಟ್
ಚೆನ್ನೈನಲ್ಲಿ ನಡೆದ ಮೊದಲ 6 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ತಂಡ 150ಕ್ಕಿಂತ ಹೆಚ್ಚು ರನ್ ಕಲೆಹಾಕಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. 2ನೇ ಇನ್ನಿಂಗ್ಸ್‌ನ ಕೊನೆ 10 ಓವರಲ್ಲಿ ಬ್ಯಾಟಿಂಗ್ ಕಷ್ಟ ಎನಿಸುತ್ತಿದೆ. ಹೀಗಾಗಿ, ಚೇಸ್ ಮಾಡುವ ತಂಡ ಮೊದಲ 10 ಓವರ್‌ನ ಲಾಭ ಪಡೆಯಬೇಕಿದೆ.
ಸಂಭವನೀಯ ಆಟಗಾರರ ಪಟ್ಟಿ
ಪಂಜಾಬ್: ರಾಹುಲ್, ಮಯಾಂಕ್, ಗೇಲ್, ಹೂಡಾ, ಪೂರನ್/ಹೆನ್ರಿಕ್ಸ್, ಶಾರುಖ್, ಸಕ್ಸೇನಾ, ರಿಚರ್ಡ್‌ಸನ್, ಶಮಿ, ಮೆರಿಡಿತ್/ಜೋರ್ಡನ್, ಅಶ್‌ರ್‍ದೀಪ್.
ಸನ್‌ರೈಸರ್ಸ್: ವಾರ್ನರ್, ಬೇರ್‌ಸ್ಟೋವ್, ವಿಲಿಯಮ್ಸನ್, ಪಾಂಡೆ, ವಿರಾಟ್/ಜಾಧವ್, ಶಂಕರ್, ಅಭಿಷೇಕ್, ಸಮದ್, ರಶೀದ್, ಭುವನೇಶ್ವರ್, ಖಲೀಲ್.
ಸ್ಥಳ: ಚೆನ್ನೈ
ಪಂದ್ಯ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.