ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾರನ್ನು ಐಪಿಎಲ್‌ನಲ್ಲಿ 7ನೇ ಬಾರಿಗೆ ಔಟ್ ಮಾಡುವ ಮೂಲಕ ಅಮಿತ್ ಮಿಶ್ರಾ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಏ.21): ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ 7ನೇ ಬಾರಿಗೆ ಔಟ್ ಮಾಡಿ ದಾಖಲೆ ಬರೆದಿದ್ದಾರೆ.
ರೋಹಿತ್ ತಮ್ಮ ಐಪಿಎಲ್ ವೃತ್ತಿಬದುಕಿನಲ್ಲಿ ಅತಿಹೆಚ್ಚು ಬಾರಿ ಮಿಶ್ರಾಗೇ ವಿಕೆಟ್ ನೀಡಿದ್ದಾರೆ. ಈ ಮೊದಲು ಸುನಿಲ್ ನರೈನ್ ಹಾಗೂ ವಿನಯ್ ಕುಮಾರ್ ತಲಾ 6 ಬಾರಿ ರೋಹಿತ್‌ರ ವಿಕೆಟ್ ಕಿತ್ತಿದ್ದರು. ಅಲ್ಲದೇ ಐಪಿಎಲ್‌ನಲ್ಲಿ 7 ಬಾರಿ ಒಬ್ಬ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದ ಕೇವಲ 3 ಬೌಲರ್ ಬೌಲರ್‌ಗಳ ಪೈಕಿ ಅಮಿತ್ ಮಿಶ್ರಾ ಕೂಡಾ ಒಬ್ಬರು ಎನ್ನು ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೊದಲು ಜಹೀರ್ ಖಾನ್ 7 ಬಾರಿ ಎಂ.ಎಸ್.ಧೋನಿಯನ್ನು, ಸಂದೀಪ್ ಶರ್ಮಾ 7 ಬಾರಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು.
ಮುಂಬೈ ಸದ್ದಡಗಿಸಿದ ಡೆಲ್ಲಿ; ಪಂತ್ ಸೈನ್ಯಕ್ಕೆ 6 ವಿಕೆಟ್ ಗೆಲುವು!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ನಡೆಸಿದರು. ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 30 ಎಸೆತಗಳನ್ನು ಎದುರಿಸಿ 44 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿಕೊಟ್ಟರಾದರೂ, ಅಮಿತ್ ಮಿಶ್ರಾ ಚಾಣಾಕ್ಷ ಸ್ಪಿನ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ 5 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.