IPL 2021: ಅತೀವೇಗದಲ್ಲಿ ಅರ್ಧಶತಕ, ದಾಖಲೆ ಬರೆದ ಇಶಾನ್ ಕಿಶನ್!

By Suvarna NewsFirst Published Oct 8, 2021, 8:14 PM IST
Highlights
  • ಹೈದರಾಬಾದ್ ವಿರುದ್ದ ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟಿಂಗ್
  • ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಇಶಾನ್ ಕಿಶನ್
  • ಮುಂಬೈ ಇಂಡಿಯನ್ಸ್ ಪರ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಕಿಶನ್

ಅಬು ಧಾಬಿ(ಅ.08): ಸನ್‌ರೈಸರ್ಸ್ ಹೈದರಾಬಾದ್(SRH) ವಿರುದ್ಧ ಕೇವಲ ಗೆಲುವಲ್ಲ, ಭರ್ಜರಿ ಹಾಗೂ ಭಾರಿ ಅಂತರದ ಗೆಲುವು ಅನಿವಾರ್ಯವಾಗಿದೆ. ಪ್ಲೇ ಆಫ್(Palyoff) ಸುತ್ತಿಗೆ ಎಂಟ್ರಿಕೊಡಲು ಮುಂಬೈ ಇಂಂಡಿಯನ್ಸ್(Mumbai Indians) ಆ ಸಾಹಸಕ್ಕೆ ಕೈಹಾಕಿದೆ. ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಇಶಾನ್ ಕಿಶನ್(Ishan Kishan) ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.

IPL 2021: ಹೈದರಾಬಾದ್ ವಿರುದ್ಧ ಟಾಸ್ ಗೆದ್ದ ಮುಂಬೈ, SRHಗೆ ಮನೀಶ್ ಪಾಂಡೆ ನಾಯಕ!

ಇಶಾನ್ ಕಿಶನ್ ಕೇವಲ 16 ಎಸೆತದಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ಪರ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ದಾಖಲೆ ಬರೆದಿದ್ದಾರೆ. ಇಷ್ಟೇ ಅಲ್ಲ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ 5ನೇ ಐಪಿಎಲ್ ಬ್ಯಾಟರ್ ಅನ್ನೋ ಹೆಗ್ಗಳಿಕೆಗೆ ಕಿಶನ್ ಪಾತ್ರರಾಗಿದ್ದಾರೆ.

 

. going berserk in Abu Dhabi and how! 💪 💪

They race past hundred in 7.1 overs. ⚡️ ⚡️

Follow the match 👉 https://t.co/STgnXhy0Wd pic.twitter.com/1i1DB24eIF

— IndianPremierLeague (@IPL)

ಮುಂಬೈ ಇಂಡಿಯನ್ಸ್ ಪರ ಅತೀ ವೇಗದಲ್ಲಿ ಹಾಫ್ ಸೆಂಚುರಿ!
16 ಎಸೆತ, ಇಶಾನ್ ಕಿಶನ್ vs ಹೈದರಾಬಾದ್, ಅಬು ಧಾಬಿ( 2021)
17 ಕೀರನ್ ಪೊಲಾರ್ಡ್ vs ಕೆಕೆಆರ್, ಮುಂಬೈ( 2016)
17 ಇಶಾನ್ ಕಿಶನ್ vs ಕೆಕೆಆರ್, ಕೋಲ್ಕತಾ(2018)
17 ಹಾರ್ದಿಕ್ ಪಾಂಡ್ಯ vs ಕೆಕೆಆರ್, ಕೋಲ್ಕತಾ(2019)
17 ಕೀರನ್ ಪೋಲಾರ್ಡ್ vs ಸಿಎಸ್‌ಕೆ, ದೆಹಲಿ(2021)

IPL 2021: ದೊಡ್ಡ ಸ್ಕೋರ್‌ ಗಳಿಸಲು ವಿಫಲರಾಗಿರುವ ಕ್ಯಾಪ್ಟನ್ಸ್ ಇವರು!

IPL ಇತಿಹಾಸದಲ್ಲಿ ಅತೀ ವೇಗದಲ್ಲಿ ಹಾಫ್ ಸೆಂಚುರಿ ಸಿಡಿಸಿದ ಸಾಧಕರು:
ಕೆಎಲ್ ರಾಹುಲ್, 14 ಎಸೆತ vs  ಡೆಲ್ಲಿ ಕ್ಯಾಪಿಟಲ್ಸ್, 2018
ಯೂಸುಫ್ ಪಠಾಣ್, 15 ಎಸೆತ vs ಸನ್‌ರೈಸರ್ಸ್ ಹೈದರಾಬಾದ್, 2014
ಸುನಿಲ್ ನರೈನ್, 15 ಎಸೆತ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2017
ಸುರೇಶ್ ರೈನಾ, 16 ಎಸೆತ vs ಪಂಜಾಬ್ ಕಿಂಗ್ಸ್, ಮುಂಬೈ, 2014 
ಇಶಾನ್ ಕಿಶನ್, 16 ಎಸೆತ vs ಸನ್‌ರೈಸರ್ಸ್ ಹೈದರಾಬಾದ್, ಅಬುಧಾಬಿ, 2021

ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ(points Table) ಸದ್ಯ 6ನೇ ಸ್ಥಾನದಲ್ಲಿದೆ. ಆದರೆ ಮುಂಬೈ ನೆಟ್ ರನ್‌ರೇಟ್ -0.048. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೋಲ್ಕತಾ ನೈಟ್ ರೈಡರ್ಸ್(KKR) ಪ್ಲೇ ಆಫ್ ಸ್ಥಾನ ಬಹುತೇಕ ಖಚಿತಕೊಂಡಿದೆ. ಕೆಕೆಆರ್ ಹಿಂದಿಕ್ಕಿ 4ನೇ ಸ್ಥಾನ ಅಲಂಕರಿಸಿಲು ಇಂದು ಗೆಲುವಿನೊಂದಿಗೆ ಭಾರಿ ಅಂತರ ಅವಶ್ಯಕತೆ ಇದೆ. ಮುಂಬೈ ಇಂಡಿಯನ್ಸ್ ಕನಿಷ್ಠ 171 ರನ್ ಅಂತರದ ಗೆಲುವು ದಾಖಲಿಸಬೇಕು.

ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ಕೆಕೆಆರ್ ನೆಟ್‌ರೇಟ್ +0.587, ಈ ನೆಟ್‌ರನ್‌ರೇಟ್ ಹಿಂದಿಕ್ಕಿಲು ಮುಂಬೈ ಇಂಡಿಯನ್ಸ್ ಮ್ಯಾಜಿಕ್ ಮಾಡಬೇಕಿದೆ. ಈ ನಿಟ್ಟಿನಲ್ಲಿ ಇಶಾನ್ ಕಿಶನ್ ಸರಿಯಾದ ದಾರಿಯಲ್ಲಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. 
 

click me!