
ಕಾಬೂಲ್(ಆ.17): ದೇಶವನ್ನು ತಾಲಿಬಾನಿಗಳು ಆಕ್ರಮಿಸಿದ್ದರೂ ಅಪ್ಘಾನಿಸ್ತಾನದ ಕ್ರಿಕೆಟಿಗರು ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಅಪ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ) ಸಿಇಒ ಹಂಇಸ್ ಶಿನ್ವರಿ ತಿಳಿಸಿದ್ದಾರೆ.
ತಾಲಿಬಾನ್‌ಗಳು ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ ಹಾಗೂ ಬೆಂಬಲಿಸುತ್ತಾರೆ. ಹಾಗಾಗಿ ಆಫ್ಘನ್‌ನಲ್ಲಿ ಕ್ರಿಕೆಟ್ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಕ್ರಿಕೆಟ್ ಆಟಗಾರರ ಕುಟುಂಬಸ್ಥರು ಕ್ಷೇಮವಾಗಿದ್ದಾರೆ. ಮಂಗಳವಾರದಿಂದಲೇ ದೇಶದಲ್ಲಿ ಕ್ರಿಕೆಟ್ ಚಟುವಟಿಕೆಗಳು ಮತ್ತೆ ಆರಂಭಗೊಳ್ಳಲಿದೆ. ಸೆ.1ರಿಂದ ಪಾಕಿಸ್ತಾನ ವಿರುದ್ಧ ನಿಗದಿಯಾಗಿರುವ ಕ್ರಿಕೆಟ್ ಸರಣಿ, ಸೇರಿದಂತೆ ಟಿ20 ವಿಶ್ವಕಪ್‌ನಲ್ಲೂ ತಂಡ ಭಾಗವಹಿಸಲಿದೆ ಎಂದಿದ್ದಾರೆ.
ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ದಿಗ್ಗಜ ಎಡಗೈ ಕ್ರಿಕೆಟಿಗರು..!
ಪ್ರಸ್ತುತ ರಶೀದ್ ಖಾನ್, ಮೊಹಮ್ಮದ್ ನಬಿ, ಮುಜೀಬ್ ಜರ್ದಾನ್ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಹಂಡ್ರೆಡ್ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅಪ್ಘಾನಿಸ್ತಾನದ ಕ್ರಿಕೆಟಿಗರಾದ ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡ ತಿಳಿಸಿದೆ. ಸದ್ಯ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾತನಾಡಿಲ್ಲ. ಆದರೆ, ಇಬ್ಬರು ಐಪಿಎಲ್‌ಗೆ ಲಭ್ಯ ಇರಲಿದ್ದಾರೆ’ ಎಂದು ಸನ್‌ರೈಸರ್ಸ್ ಸಿಇಒ ಕೆ.ಷಣ್ಮುಗಂ ತಿಳಿಸಿದ್ದಾರೆ.
ಪ್ಯಾರಾಲಿಂಪಿಕ್ಸ್‌ನಿಂದ ಹಿಂದಕ್ಕೆ:
ದೇಶದಲ್ಲಿ ಉಂಟಾಗಿರುವ ಅರಾಜೂಕತೆಯಿಂದಾಗಿ ಅಷ್ಘಾನಿಸ್ತಾನದ ಅಥ್ಲೀಟ್‌ಗಳು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.