IPL 2021: ಸುಲಭ ಟಾರ್ಗೆಟ್ ಚೇಸ್ ಮಾಡಲು ಕೆಕೆಆರ್ ವಿಫಲ; ಮುಂಬೈಗೆ ಮೊದಲ ಗೆಲವು!

By Suvarna News  |  First Published Apr 13, 2021, 11:22 PM IST

ಮದಲ ಪಂದ್ಯದಲ್ಲಿ ಮುಗ್ಗರಿಸಿದ ಮುಂಬೈ ಇಂಡಿಯನ್ಸ್ 2ನೇ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಸುಲಭ ಟಾರ್ಗೆಟ್ ನೀಡಿದ ಮುಂಬೈ ಇಂಡಿಯನ್ಸ್ ಅದ್ಬುತ ಬೌಲಿಂಗ್ ದಾಳಿ ಮೂಲಕ ಕೆಕೆಆರ್ ತಂಡವನ್ನು ಮಣಿಸಿದೆ. 


ಚೆನ್ನೈ(ಏ.13): ನಿತೀಶ್ ರಾಣಾ ಕ್ರೀಸ್‌ನಲ್ಲಿರುವವರೆಗೆ ಕೋಲ್ಕತಾ ನೈಟ್ ರೈಡರ್ಸ್ ಗೆಲುುವಿನ ಹಾದಿಯಲ್ಲಿ ಸಾಗಿತ್ತು. ಆದರೆ ರಾಣಾ ವಿಕೆಟ್ ಪತನಗೊಂಡ ಬಳಿಕ ಘಟಾನುಘಟಿ ಬ್ಯಾಟ್ಸ್‌ಮನ್ ಕ್ರೀಸಿಗಳಿದರೂ ಕೆಕೆಆರ್‌ಗೆ ಗೆಲುವು ಮಾತ್ರ ಸಿಗಲಿಲ್ಲ. ಕೆಕೆಆರ್ 7 ವಿಕೆಟ್ ಕಳೆದುಕೊಂಡು 142 ರನ್ ಸಿಡಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್ 10 ರನ್ ಗೆಲುವು ದಾಖಲಿಸಿದೆ.

152 ರನ್ ಟಾರ್ಗೆಟ್ ಪಡೆದ ಕೆಕೆಆರ್ ತಂಡಕ್ಕೆ ನಿತೀಶ್ ರಾಣಾ ಹಾಗೂ ಶುಭ್‌ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆರಂಭಿಕ ಜೋಡಿ 72 ರನ್ ಜೊತೆಯಾಟ ನೀಡಿತು. ಗಿಲ್ 33 ರನ್ ಸಿಡಿಸಿ ಔಟಾದರು. ಈ ಮೂಲಕ ಇವರ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ರಾಹುಲ್ ತ್ರಿಪಾಠಿ ಹಾಗೂ ನಾಯಕ ಇಯಾನ್ ಮಾರ್ಗನ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.

Latest Videos

undefined

ನಿತೀಶ್ ರಾಣಾ ಹೋರಾಟ ಕೆಕೆಆರ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ಆದರೆ ನಿತೀಶ್ ರಾಣಾಗೆ ಯಾರಿಂದಲೂ ಸಾಥ್ ಸಿಗಲಿಲ್ಲ. ಶಕೀಬ್ ಅಲ್ ಹಸನ್ 9 ರನ್ ಸಿಡಿಸಿ ಔಟಾದರು. ಇತ್ತ ರಾಣಾ 57 ರನ್ ಸಿಡಿಸಿ ಔಟಾದರು. ಗೆಲುವಿನತ್ತ ಸಾಗಿದ್ದ ಕೆಕೆಆರ್ ತಂಡದ ಆತಂಕ ಹೆಚ್ಚಾಯಿತು. ರಾಹುಲ್ ಚಹಾರ್ ದಾಳಿಗೆ ಕೆಕೆಆರ್ ತತ್ತರಿಸಿತು.  ಆ್ಯಂಡ್ರೆ ರಸೆಲ್ ಹಾಗೂ ದಿನೇಶ್ ಕಾರ್ತಿಕ್ ಹೋರಾಟ ಆರಂಭಿಸಿದರು.

ಕೆಕೆಆರ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 19 ರನ್ ಅವಶ್ಯಕತೆ ಇತ್ತು. ಕಾರ್ತಿಕ್ ಹಾಗೂ ರಸೆಲ್ ಸುಲಭವಾಗಿ ಟಾರ್ಗೆಟ್ ಚೇಸ್ ಮಾಡಬಲ್ಲ ಬ್ಯಾಟ್ಸ್‌ಮನ್. ಆದರೆ ಇಬ್ಬರೂ ಕೂಡ ಫಾರ್ಮ್‌ನಲ್ಲಿರುವಂತ ಕಾಣಲಿಲ್ಲ. ಒಂದೊಂದು ರನ್ ಗಳಿಸುವುದು ಎವರೆಸ್ಟ್ ಏರಿದಂತಿತ್ತು. ರಸೆಲ್ 9, ಪ್ಯಾಟ್‌ಕಮಿನ್ಸ್ ಶೂನ್ಯ ಸುತ್ತಿದರು. ಕೆಕಆರ್ 7 ವಿಕೆಟ್ ನಷ್ಟಕ್ಕೆ 142 ರನ್ ಸಿಡಿಸಿ ಸೊಲೋಪ್ಪಿಕೊಂಡಿತು. 

click me!