IPL 2021: ಅಬ್ಬರಿಸಲು ಮರೆತ ಮುಂಬೈ; ಕೆಕೆಆರ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್!

Published : Apr 13, 2021, 09:17 PM ISTUpdated : Apr 13, 2021, 09:23 PM IST
IPL 2021: ಅಬ್ಬರಿಸಲು ಮರೆತ ಮುಂಬೈ; ಕೆಕೆಆರ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್!

ಸಾರಾಂಶ

ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ರನ್ ಹರಿದುಬರಲಿಲ್ಲ. ನಾಯಕ ರೋಹಿತ್ ಶರ್ಮಾಹಾಗೂ ಸೂರ್ಯಕುಮಾರ್ ಯಾದವ್ ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್‌ಮನ್ ಹೋರಾಡಿದರೂ ರನ್ ಬರಲಿಲ್ಲ. ಹೀಗಾಗಿ ಕೆಕೆಆರ್ ತಂಡಕ್ಕೆ ಸುಲಭ ಟಾರ್ಗೆಟ್ ನೀಡಲಾಗಿದೆ.

ಚೆನ್ನೈ(ಏ.13): ರೋಹಿತ್ ಶರ್ಮಾ ಸಿಡಿಸಿದ 43 ರನ್ ಹಾಗೂ ಸೂರ್ಯಕುಮಾರ್ ಯಾದವ್ ಸಿಡಿಸಿದ 56 ರನ್ ಸಿಡಿಸಿ ಅಬ್ಬರಿಸಿದರು. ಆದರೆ ಇವರಿಬ್ಬರ ಹೋರಾಟ ಸಾಕಾಗಲಿಲ್ಲ. ತಂಡದಲ್ಲಿ ಒಂದು ಬದಲಾವಣೆ ಮಾಡಿದರೂ ಹೆಚ್ಚಿನ ಲಾಭಗಳಾಗಿಲ್ಲ. ಕಾರಣ ಕ್ವಿಂಟನ್ ಡಿಕಾಕ್ ಕೇವಲ 2 ರನ್ ಸಿಡಿಸಿ ಔಟಾದರು. ಮುಂಬೈ ಇಂಡಿಯನ್ಸ್ 152 ರನ್‌ಗೆ ಆಲೌಟ್ ಆಗೋ ಮೂಲಕ ನಿರಾಸೆ ಅನುಭವಿಸಿತು.

IPL 2021: ರಾಯಲ್ಸ್‌ ಯುವ ವೇಗಿ ಸಕಾರಿಯ ಕೊಂಡಾಡಿದ ವೀರೂ..!

ಇಶಾನ್ ಕಿಶನ್ 1, ಹಾರ್ಧಿಕ್ ಪಾಂಡ್ಯ 15, ಕೀರನ್ ಪೊಲಾರ್ಡ್ 5 ಹಾಗೂ ಮಾರ್ಕೋ ಜಾನ್ಸೆನ್ ಡಕೌಟ್ ಆದರು. ಈ ಮೂಲಕ ಮುಬೈ ಬೃಹತ್ ಮೊತ್ತದ ಕನಸು ನುಚ್ಚು ನೂರಾಯಿತು. ಪ್ಯಾಟ್ ಕಮಿನ್ಸ್ ಹಾಗೂ ಆ್ಯಂಡ್ರೆ ರಸೆಲ್ ಬೌಲಿಂಗ್ ದಾಳಿಗೆ ಮುಂಬೈ ರನ್‌ಗಳಿಸಲು ತಿಣುಕಾಡಿತು.

ಕ್ರುನಾಲ್ ಪಾಂಡ್ಯ ಹಾಗೂ ರಾಹುಲ್ ಚಹಾರ್ ಸ್ಲಾಗ್ ಓವರ್‌ಗಳಲ್ಲಿ ಬಿರುಸಿನ ಹೋರಾಟಕ್ಕೆ ಮುಂದಾದರು. ಕ್ರುನಾಲ್ 15 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್  152 ರನ್‌ಗಳಿಗೆ ಆಲೌಟ್ ಆಯಿತು.  ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿರುವ ಮುಂಬೈ 10 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!