IPL 2021: ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಪಂಜಾಬ್; ತಂಡದಲ್ಲಿ 3 ಬದಲಾವಣೆ!

Published : Oct 01, 2021, 07:10 PM ISTUpdated : Oct 01, 2021, 07:17 PM IST
IPL 2021: ಕೋಲ್ಕತಾ ವಿರುದ್ಧ ಟಾಸ್ ಗೆದ್ದ ಪಂಜಾಬ್; ತಂಡದಲ್ಲಿ 3 ಬದಲಾವಣೆ!

ಸಾರಾಂಶ

IPL 2021 ಟೂರ್ನಿಯ 45ನೇ ಲೀಗ್ ಹೋರಾಟ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ,  ದುಬೈನಲ್ಲಿ ನಡೆಯುತ್ತಿರುವ ಮಹತ್ವದ ಪಂದ್ಯ

ದುಬೈ(ಅ.01):  ಐಪಿಎಲ್ 2021ರ ಲೀಗ್ ಹಂತದಲ್ಲಿ ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ಹಾಗೂ ಪಂಜಾಬ್ ಕಿಂಗ್ಸ್(Punjab Kings) ಮುಖಾಮುಖಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.   IPL 2021ರ ಲೀಗ್ ಹೋರಾಟ ರೋಚಕ ಘಟ್ಟ ತಲುಪುತ್ತಿದೆ. ಪ್ರತಿ ಪಂದ್ಯದ ಫಲಿತಾಂಶ ಕೂಡ ಪ್ಲೇ ಆಫ್ ದೃಷ್ಟಿಯಿಂದ ಅತೀ ಮುಖ್ಯಮವಾಗಿದೆ.

IPL 2021 ಧೋನಿ ಒಮ್ಮೆ ತುಂಬಾ ಸಿಟ್ಟಾಗಿದ್ದರು, ಅಶ್ವಿನ್‌ ಬಾಯಿ ಮುಚ್ಚಿಸಿದ್ದರು: ವಿರೇಂದ್ರ ಸೆಹ್ವಾಗ್‌..!

ಪಂಜಾಬ್ ತಂಡದಲ್ಲಿ 3 ಬದಲಾವಣೆ ಮಾಡಲಾಗಿದೆ ಕ್ರಿಸ್ ಗೇಲ್(Chris Gayle) ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ಫ್ಯಾಬಿಯನ್ ಅಲೆನ್ ಸ್ಥಾನ ಪಡೆದಿದ್ದಾರೆ. ಇನ್ನು ಮನ್ದೀಪ್ ಸಿಂಗ್ ಬದಲು ಮಯಾಂಕ್ ಅಗರ್ವಾಲ್ ಸ್ಥಾನ ಪಡೆದಿದ್ದರೆ, ಹರ್ದೀಪ್ ಬ್ರಾರ್ ಬದಲು ಶಾರುಕ್ ಖಾನ್ ಸ್ಥಾನ ಪಡೆದಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. 

ಪಿಚ್ ರಿಪೋರ್ಟ್:
ದುಬೈ(Dubai) ಪಿಚ್ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಕಾರಣ ಇಲ್ಲಿ 3 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದ್ದರೆ, ಇನ್ನು 3 ಬಾರಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಗೆಲುವು ಕಂಡಿದೆ. ಇಲ್ಲೀವರೆಗೆ ಸರಾಸರಿ ಸ್ಕೋರ್ 159 ರನ್. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದರೆ ಸರಾಸರಿ 160 ರನ್ ಸಿಡಿಸಿದರೆ ಗೆಲುವಿನ ಲೆಕ್ಕಾಚಾರ ಹಾಕಬಹುದು. 

ಗೇಲ್, ರಸೆಲ್ ಔಟ್:
ಪಂಜಾಬ್ ಕಿಂಗ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಐಪಿಎಲ್(IPL) ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದು ಪಂಜಾಬ್(PBKS) ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ. ಇತ್ತ ಕೆಕೆಆರ್(KKR) ತಂಡಕ್ಕೆ ಆ್ಯಂಡ್ರೆ ರೆಸಲ್ ಸೇವೆಯೂ ಲಭ್ಯವಿಲ್ಲ. 

IPL ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಎಂ ಎಸ್‌ ಧೋನಿ..!

ಐಪಿಎಲ್ 2021 ಎರಡನೇ ಭಾಗದಲ್ಲಿ ಕೆಕೆಆರ್ ಹೆಚ್ಚು ಬಲಿಷ್ಠ ತಂಡವಾಗಿದೆ. ಇಯಾನ್ ಮಾರ್ಗನ್IEion Morgan) ನಾಯಕತ್ವದ ಕೋಲ್ಕತಾ ನೈಟ್ ರೈಡರ್ಸ್ ಆಡಿದ ನಾಲ್ಕು ಪಂದ್ಯದಲ್ಲಿ 3 ಗೆಲುವು ಕಂಡಿದೆ ಇತ್ತ  ಕೆಎಲ್ ರಾಹುಲ್(KL Rahul) ನಾಯಕತ್ವದ ಪಂಜಾಬ್ ಕಿಂಗ್ಸ್ ಆಡಿದ 3ರಲ್ಲಿ ಕೇವಲ 1 ಗೆಲುವು ಕಂಡಿದೆ.  ಹೀಗಾಗಿ ಪಂಜಾಬ್ ಕಿಂಗ್ಸ್ ಶಕ್ತಿಮೀರಿ ಗೆಲುವಿಗಾಗಿ ಪ್ರಯತ್ನಿಸಬೇಕಿದೆ.

ಅಂಕಪಟ್ಟಿಯಲ್ಲಿ(Points Table) ಕೆಕೆಆರ್ 4ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ 6ನೇ ಸ್ಥಾನದಲ್ಲಿದೆ. ಕೆಕೆಆರ್ ತಂಡ 11 ಪಂದ್ಯದಲ್ಲಿ 5 ಗೆಲುವು ಹಾಗೂ 6 ಸೋಲು ಕಂಡಿದೆ. ಈ ಮೂಲಕ 10 ಅಂಕ ಸಂಪಾದಿಸಿದೆ. ಇತ್ತ ಪಂಜಾಬ್ ಕಿಂಗ್ಸ್ ಆಡಿದ 11 ಪಂದ್ಯದಲ್ಲಿ 4 ಗೆಲುವು ಹಾಗೂ 7 ಸೋಲು ಕಂಡಿದೆ. ಈ ಮೂಲಕ 8 ಅಂಕ ಸಂಪಾದಿಸಿದೆ.

IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್‌ ಗೇಲ್‌..!

ಕೆಕೆಆರ್ ವಿರುದ್ಧ ಪಂಜಾಬ್ ತಂಡಕ್ಕೆ ಕೇವಲ ಗೆಲುವು ಸಾಕಾಗಲ್ಲ, ಭರ್ಜರಿ ಗೆಲುವು ಕಂಡರೂ ಪ್ಲೇ ಆಫ್(Playoff) ಹಾದಿ ಕಠಿಣವಾಗಿದೆ. ಇನ್ನು ಅಂಕಿ ಅಂಶಗಳು ಪಂಜಾಬ್ ಕಿಂಗ್ಸ್ ಪರವಾಗಿಲ್ಲ. ಪಂಜಾಬ್ ವಿರುದ್ಧ ಕೆಕೆಆರ್ 19 ಗೆಲುವು ಕಂಡಿದ್ದರೆ, ಪಂಜಾಬ್ ಕೇವಲ 9 ಗೆಲುವು ಕಂಡಿದೆ.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲ ತಂಡವಾಗಿ ಟೂರ್ನಿಯಿಂದ ಹೊರಬಿದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಖಚಿತಪಡಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇನ್ನುಳಿದ ಕೆಕೆಆರ್, ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ಒಂದು ಸ್ಥಾನಕ್ಕಾಗಿ ಹೋರಾಟ ನಡೆಸಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?