CSK ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್, ಅಲ್ಪಮೊತ್ತಕ್ಕೆ ಕುಸಿದ ರಾಹುಲ್ ಸೈನ್ಯ!

Published : Apr 16, 2021, 09:00 PM IST
CSK ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್, ಅಲ್ಪಮೊತ್ತಕ್ಕೆ ಕುಸಿದ ರಾಹುಲ್ ಸೈನ್ಯ!

ಸಾರಾಂಶ

IPL 2021 ಟೂರ್ನಿ ಮೊದಲ ಪಂದ್ಯದಲ್ಲಿ 222 ರನ್ ಸಿಡಿಸಿ ಗರಿಷ್ಠ ಸ್ಕೋರ್ ಸಿಡಿಸಿದ ದಾಖಲೆ ಬರೆದ ಪಂಜಾಬ್ ಕಿಂಗ್ಸ್ ಇದೀಗ ಈ ಆವೃತ್ತಿಯ ಐತಿ ಕಡಿಮೆ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಗಿದೆ. 

ಮುಂಬೈ(ಏ.16):  ಅಬ್ಬರಿಸುತ್ತಿದ್ದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ದಿಢೀರ್ ಪೆವಿಲಿಯನ್ ಪರೇಡ್ ಆರಂಭಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ದಾಳಿಗೆ ನಲುಗಿದ ರಾಹುಲ್ ಸೈನ್ಯ ಒಂದೊಂದು ರನ್ ಕಲೆಹಾಕಲು ಪರದಾಡಿತು. ದೀಪಕ್ ಚಹಾರ್ ಆಟ್ಯಾಕ್‌ಗೆ ಪಂಜಾಬ್ ಕಿಂಗ್ಸ್ 8 ವಿಕೆಟ್ ಕಳೆದುಕೊಂಡು 106 ರನ್ ಸಿಡಿಸಿದೆ.

ಪಂಜಾಬ್ ಕಿಂಗ್ಸ್‌ಗೆ ಇದು ಅತ್ಯಂತ ಕಠಿಣ ಸವಲಾಗಿತ್ತು. ಕಾರಣ ದೀಪಕ್ ಚಹಾರ್ ದಾಳಿಗೆ ಪಂಜಾಬ್ ತಂಡದಲ್ಲಿ ಉತ್ತರವೇ ಇರಲಿಲ್ಲ. ಮಯಾಂಕ್ ಅಗರ್ವಾಲ್ ಡಕೌಟ್ ಆದರೆ, ನಾಯಕ ಕೆಎಲ್ ರಾಹುಲ್ 5 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಕ್ರಿಸ್ ಗೇಲ್ 10, ದೀಪಕ್ ಹೂಡ 10 ರನ್ ಸಿಡಿಸಿ ನಿರ್ಗಮಿಸಿದರು.

ಶಾರೂಖ್ ಖಾನ್ ಹೋರಾಟ ಪಂಜಾಬ್ ಕಿಂಗ್ಸ್ ತಂಡದ ಮಾನ ಕಾಪಾಡಿತು. ಆದರೆ ಇತರ ಯಾರಿಂದಲೂ ಸಾಥ್ ಸಿಗಲಿಲ್ಲ. ಜೇ ರಿಚರ್ಡ್ಸನ್, ಮರುಗನ್ ಅಶ್ವಿನ್ ಕೂಡ ನೆರವಾಗಲಿಲ್ಲ. ಶಾರೂಖ್ ಖಾನ್ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 100 ರನ್ ಗಡಿ ದಾಟಿತು. 

ಏಕಾಂಗಿ ಹೋರಾಟ ನೀಡಿದ ಶಾರೂಖ್ ಖಾನ್ 47 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ 8 ವಿಕೆಟ್ ನಷ್ಟಕ್ಕೆ 106 ರನ್ ಸಿಡಿಸಿತು. ದೀಪಕ್ ಚಹಾರ್ 4 ವಿಕೆಟ್ ಕಬಳಿಸಿ ಮಿಂಚಿದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!