ಹೈದರಾಬಾದ್ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್; ಅಂಕ ಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ!

By Suvarna NewsFirst Published Apr 28, 2021, 11:05 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮತ್ತೆ ಹಿಂದಿಕ್ಕ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದಕ್ಕೆ ಹೈದರಾಬಾದ್ ವಿರುದ್ಧ ಚೆನ್ನೈ ನೀಡಿದ ಆಲ್ರೌಂಡರ್ ಪರ್ಫಾಮೆನ್ಸ್ ಕಾರಣ. ಸನ್‌ರೈಸರ್ಸ್ ವಿರುದ್ಧ ಅಬ್ಬರಿಸಿದ ಸಿಎಸ್‌ಕೆ ಭರ್ಜರಿ ಗೆಲುವು ದಾಖಲಿಸಿದೆ.

ದೆಹಲಿ(ಏ.28): ರುತರಾಜ್ ಗಾಯಕ್ವಾಡ್ ಅಬ್ಬರ, ಪಾಫ್ ಡುಪ್ಲೆಸಿಸ್ ಹಾಫ್ ಸೆಂಚುರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೊಂದು ಗೆಲುವು ತಂದುಕೊಟ್ಟಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಬ್ಬರಿಸಿದ ಸಿಎಸ್‌ಕೆ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 

ಗೆಲುವಿಗೆ 172 ರನ್ ಟಾರ್ಗೆಟ್ ಪಡದೆ ಚೆನ್ನೈ ಸೂಪರ್ ಕಿಂಗ್ಸ್  ತಂಡಕ್ಕೆ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟ ಗೆಲುವಿನ ಹಾದಿ ಸುಗಮಗೊಳಿಸಿತು. ಗಾಯಕ್ವಾಡ್ ಹಾಗೂ ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಗಾಯಕ್ವಾಡ್ 44 ಎಸೆತದಲ್ಲಿ 75 ರನ್ ಸಿಡಿಸಿ ಔಟಾದರು. ಫಾಫ್ 56 ರನ್ ಕಾಣಿಕೆ ನೀಡಿದರು. ಅಷ್ಟರಲ್ಲೇ ಚೆನ್ನೈ ಗೆಲುವಿನತ್ತ ದಾಪುಗಾಲಿಟ್ಟಿತು. ಇತ್ತ ಮೊಯಿನ್ ಆಲಿ 15 ರನ್ ಸಿಡಿಸಿ ಔಟಾದರೂ ಆತಂಕ ಎದುರಾಗಲಿಲ್ಲ.

ರವೀಂದ್ರ ಜಡೇದಾ ಹಾಗೂ ಸುರೇಶ್ ರೈನಾ ಜೊತೆಯಾಟ ಚೆನ್ನೈ ಗೆಲುವು ಖಚಿತಪಡಿಸಿತು. ರೈನಾ ಅಜೇಯ 17 ರನ್ ಸಿಡಿಸಿದರೆ, ಜಡೇಜಾ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಚೆನ್ನೈ 18.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

click me!