ಕೊರೋನಾ ಭೀತಿ: ಮಹಿಳಾ ಟಿ-20 ಚಾಲೆಂಜ್‌ಗೆ ಬ್ರೇಕ್‌?

By Suvarna News  |  First Published Apr 29, 2021, 8:14 AM IST

3 ತಂಡಗಳನ್ನೊಳಗೊಂಡ ಮಹಿಳಾ ಟಿ20 ಚಾಲೆಂಜ್‌ ಕೋವಿಡ್‌ 19 ಭೀತಿಯಿಂದಾಗಿ ಈ ಬಾರಿ ರದ್ದಾಗುವ ಸಾಧ್ಯತೆ ದಟ್ಟವಾಗತೊಡಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ನವದೆಹಲಿ(ಏ.29): ಪ್ರತಿ ವರ್ಷ ಐಪಿಎಲ್‌ ಪ್ಲೇ ಆಫ್‌ ಪಂದ್ಯಗಳ ವೇಳೆ ನಡೆಸಲಾಗುತ್ತಿದ್ದ ಮಹಿಳಾ ಟಿ-20 ಚಾಲೆಂಜ್‌ಗೆ ಈ ವರ್ಷ ನಿಷೇಧ ಹೇರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ದೇಶಾದ್ಯಂತ ಕೋವಿಡ್‌-19 ಎರಡನೇ ಅಲೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಕೆಲ ದೇಶಗಳು ಈಗಾಗಲೇ ಭಾರತಕ್ಕೆ ವಿಮಾನ ಪ್ರಯಾಣ ರದ್ದುಗೊಳಿಸಿವೆ.

ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಆಸ್ಪ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌ ಸೇರಿದಂತೆ ಹಲವು ರಾಷ್ಟ್ರಗಳ ಆಟಗಾರ್ತಿಯರು ಭಾರತಕ್ಕೆ ಪ್ರಯಾಣ ಬೆಳೆಸಲು ಉತ್ಸುಕರಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳು ಈಗಾಗಲೇ ವಿಮಾನ ಸಂಚಾರ ಸ್ಥಗಿತಗೊಳಿಸಿವೆ.

Latest Videos

undefined

ಭಾರತದ ಕೋವಿಡ್ ಸಂಕಷ್ಟಕ್ಕೆ ಮಿಡಿದ ಆಸೀಸ್‌ ಕ್ರಿಕೆಟಿಗ ಬ್ರೆಟ್‌ ಲೀ ಹೃದಯ

14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಈಗಾಗಲೇ ನಿಗದಿಯಾದ ವೇಳಾಪಟ್ಟಿಯಂತೆಯೇ ನಡೆಯಲಿದೆ. ಆದರೆ ಮೇ 24ರಿಂದ ಮೇ 30ರವರೆಗೆ 3 ತಂಡಗಳ ಮಹಿಳಾ ಟಿ20 ಚಾಲೆಂಜ್ ಟೂರ್ನಿ ನಡೆಯುವುದು ಅನುಮಾನ ಎನಿಸಿದೆ. ಮಹಿಳಾ ಟಿ20 ಚಾಲೆಂಜ್ ಟೂರ್ನಿಯ ಬಗ್ಗೆ ಈವರೆಗೂ ನಮಗ್ಯಾವ ಮಾಹಿತಿಯೂ ಇಲ್ಲ. ಹೀಗಾಗಿ ಈ ಟೂರ್ನಿ ನಡೆಯುತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲ ಎಂದು ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ತಿಳಿಸಿದ್ದಾರೆ.

ಮಹಿಳಾ ಟಿ20 ಚಾಲೆಂಜ್‌ನಲ್ಲಿ ಸೂಪರ್‌ನೋವಾಸ್‌, ಟ್ರಯಲ್‌ಬ್ಲೇಜರ್ಸ್‌ ಹಾಗೂ ವೆಲೊಸಿಟಿ ತಂಡಗಳು ಸೆಣಸಾಟ ನಡೆಸುತ್ತಿದ್ದವು ಎನ್ನುವುದನ್ನು ಸ್ಮರಿಸಬಹುದಾಗಿದೆ.
 

click me!