IPL 2021:ಪಂಜಾಬ್‌ಗೆ ಮತ್ತೆ ಬ್ಯಾಟಿಂಗ್ ವೈಫಲ್ಯ, ಮುಂಬೈಗೆ ಸುಲಭ ಟಾರ್ಗೆಟ್!

By Suvarna NewsFirst Published Sep 28, 2021, 9:18 PM IST
Highlights
  • ಮುಂದುವರಿದ ಮೊದಲು ಬ್ಯಾಟಿಂಗ್ ಮಾಡಿ ಕಳಪೆ ಪ್ರದರ್ಶನ ನೀಡುವ ಪಂಜಾಬ್ ಚಾಳಿ
  • ಕಡಿಮೆ ಮೊತ್ತ ದಾಖಲಿಸಿದ ಪಂಜಾಬ್ ಕಿಂಗ್ಸ್, ಮುಂಬೈಗೆ ಸುಲಭ ಟಾರ್ಗೆಟ್
  • ಗೆಲುವಿನ ವಿಶ್ವಾಸದಲ್ಲಿ  ಮುಂಬೈ ಇಂಡಿಯನ್ಸ್

ಅಬು ಧಾಬಿ(ಸೆ.28): IPL 2021 ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡಿ ನಿರೀಕ್ಷಿತ ಮೊತ್ತ ಪೇರಿಸಲು ಹಲವು ಭಾರಿ ವಿಫಲಾಗಿದೆ. ಇದೀಗ ಮತ್ತೆ ಅದೇ ಚಾಳಿ ಮುಂದುವರಿದಿದೆ. ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧದ ಮಹತ್ವದ ಪಂದ್ಯದಲ್ಲೂ ಪಂಜಾಬ್ ಕಿಂಗ್ಸ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಪರಿಣಾಮ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 135 ರನ್ ಸಿಡಿಸಿದೆ.

IPL 2021: ಡೆಲ್ಲಿಗೆ ಶಾಕ್‌, KKR ಪಡೆಗೆ ಸುಲಭ ಜಯ

ಟಾಸ್ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್(Punjab Kings) ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಕೆಎಲ್ ರಾಹುಲ್ (KL Rahul) ಹಾಗೂ ಮನ್ದೀಪ್ ಸಿಂಗ್ ಜೊತೆಯಾಟ ಕೇವಲ 36 ರನ್‌ಗೆ ಅಂತ್ಯವಾಯಿತು. ಮನ್ದೀಪ್ ಸಿಂಗ್ 15 ರನ್ ಸಿಡಿಸಿ ಔಟಾಗುವ ಮೂಲಕ ಪಂಜಾಬ್ ವಿಕಟ್ ಪತನ ಆರಂಭಗೊಂಡಿತು. 

ಪಡಿಕ್ಕಲ್ ಕನ್ನಡಾಭಿಮಾನ: ನಾವು ಕನ್ನಡಿಗರು, ಭಾರತಕ್ಕಾಗಿ ಆಡುವಾಗಲೂ ಕನ್ನಡದಲ್ಲೇ ಮಾತು!

ಐಪಿಎಲ್ 2021ರ(IPL 2021) ಆವೃತ್ತಿಯಲ್ಲಿ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಆದರೆ ಗೇಲ್ ಕೇವಲ 1 ರನ್ ಸಿಡಿಸಿ ಔಟಾದರು. ಇತ್ತ ಕೆಎಲ್ ರಾಹುಲ್ 21 ರನ್ ಸಿಡಿಸಿ ಔಟಾದರು. 41 ರನ್‌ಗಳಿಗೆ ಪಂಜಾಬ್ ಕಿಂಗ್ಸ್ 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 

ಪಂಜಾಬ್ ತಂಡಕ್ಕೆ ಆ್ಯಡಿನ್ ಮರ್ಕ್ರಾಮ್ ಹೋರಾಟ ನೆರವಾಯಿತು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ದಿಟ್ಟ ಹೋರಾಟ ಮೂಡಿಬರಲಿಲ್ಲ. ನಿಕೋಲಸ್ ಪೂರನ್ ಕೇವಲ 2 ರನ್ ಸಿಡಿಸಿ ಔಟಾದರು.  ದೀಪಕ್ ಹೂಡ ಜೊತೆ ಸೇರಿದ ಆ್ಯಡಿನ್ ಹೋರಾಟ ಮುಂದುವರಿಸಿದರು. ಇವರಿಬ್ಬರ ಜೊತೆಯಾಟ ಪಂಜಾಬ್ ತಂಡದ ರನ್ ವೇಗ ಹೆಚ್ಚಿಸಿತು.

ಅನುಷ್ಕಾ ಶರ್ಮಾ- ಧನಶ್ರೀ ವರ್ಮಾ:IPL ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ನೋಡಿ!

ಆ್ಯಡಿನ್ 42 ರನ್ ಸಿಡಿಸಿ ಔಟಾದರು. ಇದು ಪಂಜಾಬ್ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಇತ್ತ ದೀಪಕ್ ಹೂಡ ಬ್ಯಾಟಿಂಗ್‌ನಿಂದ ನಿಧಾನವಾಗಿ ಚೇತರಿಸಿಕೊಂಡಿತು. ಆದರೆ ದೀಪಕ್ ಹೂಡ 28 ರನ್ ಸಿಡಿಸಿ ಔಟಾದರು. ಹರ್ಪ್ರೀತ್ ಬ್ರಾರ್ ಹಾಗೂ ನಥನ್ ಎಲ್ಲಿಸ್ ಹೋರಾಟದಿಂದ ಪಂಜಾಬ್‌ಗೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. 

ಧೋನಿ - ಹೆಟ್ಮೇಯರ್: ಟ್ರೆಂಡ್‌ ಆಗುತ್ತಿರುವ IPLಸ್ಟಾರ್ಸ್ ಹೊಸ ಹೇರ್‌ಸ್ಟೈಲ್‌!

ಹರ್ಪ್ರೀತ್ ಬ್ರಾರ್  ಅಜೇಯ 14 ರನ್ ಸಿಡಿಸಿದರು. ನಥನ್ ಎಲ್ಲಿಸ್ ಅಜೇಯ 6 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 135ರನ್ ಸಿಡಿಸಿತು.  ಇದೀಗ ಮುಂಬೈ ಇಂಡಿಯನ್ಸ್‌ಗೆ 136 ರನ್ ಸುಲಭ ಟಾರ್ಗೆಟ್ ನೀಡಲಾಗಿದೆ.   

ಮುಂಬೈ ಇಂಡಿಯನ್ಸ್ ಪರ ಜಸ್ಪ್ರೀತ್ ಬುಮ್ರಾ 2, ಕೀರನ್ ಪೊಲಾರ್ಡ್ 2, ರಾಹುಲ್ ಚಹಾರ್ 1 ಹಾಗೂ ಕ್ರುನಾಲ್ ಪಾಂಡ್ಯ 1 ವಿಕೆಟ್ ಕಬಳಿಸಿದರು. 

ಅಂಕಪಟ್ಟಿ:
ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಲಾ 4 ಗೆಲುವಿನೊಂದಿಗೆ 8 ಅಂಕ ಸಂಪಾದಿಸಿದೆ. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಆಸೆಯಲ್ಲಿರುವ ಉಭಯ ತಂಡಗಳಿಗೆ ಪ್ರತಿ ಗೆಲುವು ಅಷ್ಟೇ ಮುಖ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

click me!